ಕೊರೋನಾ ವೈರಸ್ ಗಾಗಿ ಇಡೀ ಪ್ರಪಂಚಾದ್ಯಂತ ಅನೇಕ ದೇಶದಲ್ಲಿ ಸಂಶೋಧನೆಯನ್ನು ಮಾಡಲಾಗುತ್ತಿದೆ. ಅದರಂತೆ  ವಿಶ್ವದ ದೊಡ್ಡಣ್ಣ  ಅಮೇರಿಕಾದಲ್ಲೂ ಕೂಡ ಈ ಕೊರೋನಾ ಔಷಧಿಗಾಗಿ ಸಂಶೋಧನೆಯನ್ನು ನಡೆಸಲಾಗುತ್ತಿದೆ. ಆದರೆ ಈ ಅಮೇರಿಕಾದ ಕೊರೋನಾ ಔಷಧಿಗೆ ತಯಾರಿಸಲು ಅಮೇರಿಕ ಭಾರತೀಯ  ವಿಜ್ಞಾನಿಗಳನ್ನು ಆಯ್ಕೆ ಮಾಡಿಕೊಂಡಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. 



 

ಹೌದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮನವಿಯ ಹಿನ್ನೆಲೆಯಲ್ಲಿ ಭಾರತ ಸರಕಾರ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್‌ ಮಾತ್ರೆಗಳನ್ನು ರಫ್ತುಮಾಡಿದ ಬಳಿಕ, ಕೊರೊನಾ ಸೋಂಕು ಅಧ್ಯಯನಕ್ಕೆ ಭಾರತದ ವಿಜ್ಞಾನಿಗಳನ್ನು ಅಮೆರಿಕ ಆಯ್ಕೆ ಮಾಡಿಕೊಂಡಿದೆ. ಕೋವಿಡ್‌ ವೈರಾಣು ರೋಗಕಾರಕ ಮತ್ತು ರೋಗ ನಿರ್ವಹಣೆಯಲ್ಲಿ ಅತ್ಯಾಧುನಿಕ ಸಂಶೋಧನೆ ನಡೆಸಲು ಭಾರತ ಮತ್ತು ಅಮೆರಿಕ ಸಂಶೋಧಕರ ಎಂಟು ತಂಡಗಳನ್ನು ಆಯ್ಕೆ ಮಾಡಲಾಗಿದೆ.




ಭಾರತ ಮತ್ತು ಅಮೆರಿಕ ಸರಕಾರಗಳು ಜಂಟಿಯಾಗಿ ಧನಸಹಾಯ ನೀಡುವ ಸ್ವಾಯತ್ತ ದ್ವಿಪಕ್ಷೀಯ ಸಂಘಟನೆಯಾದ ಇಂಡೋ-ಯುಎಸ್‌ ಸೈನ್ಸ್ ಆ್ಯಂಡ್‌ ಟೆಕ್ನಾಲಜಿ ಫೋರಂ (ಐಯುಎಸ್‌ಎಸ್‌ಟಿಎಫ್) ಸಂಸ್ಥೆ ಈ ಸಂಶೋಧನೆ ನಡೆಸಲಿದ್ದು, ಸರಕಾರಗಳ ನಡುವೆ ಶೈಕ್ಷಣಿಕ ಮತ್ತು ಕೈಗಾರಿಕೆಗಳಂತಹ ಪರಸ್ಪರ ಕ್ರಿಯೆಯ ಮೂಲಕ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ನಾವೀನ್ಯತೆಯನ್ನು ಉತ್ತೇಜಿಸುತ್ತದೆ.ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಮತ್ತು ಅಮೆರಿಕದ ರಾಜ್ಯ ಇಲಾಖೆ ಆಯಾ ನೋಡಲ್‌ ವಿಭಾಗಗಳನ್ನು ಹೊಂದಿದೆ. ಆ್ಯಂಟಿವೈರಲ್‌ ಲೇಪನ, ರೋಗನಿರೋಧಕ ಮಾಡ್ಯುಲೇಷನ್‌, ತ್ಯಾಜ್ಯ ನೀರಿನಲ್ಲಿ ಸಾರ್ಸ್‌ ಸಿಒವಿ-2 (SARS CoV&2) ಅನ್ನು ಪತ್ತೆಹಚ್ಚಬಹುದಾಗಿದ್ದು, ಔಷಧ ಕ್ಷೇತ್ರಗಳಲ್ಲಿ ತಂಡಗಳು ಸಂಶೋಧನೆ ನಡೆಸಲಿವೆ.




ಕ್ಯೂಬಾ ಲಸಿಕೆ ಕ್ಲಿನಿಕಲ್‌ ಟ್ರಯಲ್‌ ಗೆ : ಹವಾನಾ: ವಿಶ್ವದ ಹಲವು ದೇಶಗಳಂತೆ ಕ್ಯೂಬಾ ಕೂಡ ಕೋವಿಡ್‌ಗೆ ಲಸಿಕೆ ಕಂಡುಹಿಡಿಯುವತ್ತ ಮುಂದಡಿ ಇಟ್ಟಿದೆ. ಮುಂದಿನ ವಾರದಿಂದ ಅದು ಈ ಕುರಿತ ಪ್ರಯೋಗಗಳಲ್ಲಿ ಭಾಗಿಯಾಗಲಿದೆ. ಅಲ್ಲಿನ ಸರಕಾರಿ ಸ್ವಾಮ್ಯದ ಫಿನ್ಲ ಇನ್‌ ಸ್ಟಿಟ್ಯೂಟ್‌ ಪ್ರಯೋಗದಲ್ಲಿ ತೊಡಗಿದೆ. ಸವರಾನಿಟಿ 01 ಹೆಸರಿನ ಈ ಲಸಿಯನ್ನು 19ರಿಂದ 80 ವಯಸ್ಸಿನ 676 ಮಂದಿಯ ಮೇಲೆ ಪ್ರಯೋಗಿಸಲು ಉದ್ದೇಶಿಸಲಾಗಿದೆ.




 ಆ.24ರಿಂದ ಜ.11ರ ಅವಧಿಯಲ್ಲಿ ಪ್ರಯೋಗ ನಡೆಯಲಿದೆ. ಇದರ ಪ್ರಯೋಗದ ವರದಿ 2021 ಫೆಬ್ರವರಿ ವೇಳೆಗೆ ಲಭ್ಯವಾಗಲಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಕ್ಯೂಬಾದಲ್ಲಿ ಲಸಿಕೆ ಸಂಶೋಧನೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಕ್ಯೂಬಾ ಅಧ್ಯಕ್ಷ ಮೈಗುಲ್‌ ಡೈಜ್‌ ಕೆನೆಲ್‌ ಅವರು ಲಸಿಕೆ ತಯಾರಕರು ಮತ್ತು ಸಂಶೋಧಕರನ್ನು ಸೋಮವಾರ ಸಭೆ ಕರೆದು ಮಾತುಕತೆ ನಡೆಸಿದ್ದಾರೆ. ಅಮೆರಿಕದೊಂದಿಗಿನ ಜಟಾಪಟಿ ಕಾರಣದಿಂದ ಕ್ಯೂಬಾಕ್ಕೆ ಔಷಧ ಮಾರಾಟ ಮಾಡಲೂ ವಿವಿಧ ದೇಶಗಳಿಗೂ ಸಾಧ್ಯವಾಗುತ್ತಿಲ್ಲ.

Find out more: