ಕೊರೋನಾ ವೈರಸ್ ಇಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿರುವಂತಹ ಈ ಸಂದರ್ಭದಲ್ಲಿ ಶ್ರೀಮಂತ ರಾಷ್ಟ್ರಗಳೂ ಕೂಡ ಆರ್ಥಿಕತೆಯ ಹೊಡೆತಕ್ಕೆ ಸಿಕ್ಕಿ ನಲುಗುತ್ತಿದೆ. ಅದರಂತೆ ಭಾರತದಲ್ಲೂ ಕೂಡ ಕೊರೋನಾ ದಾಳಿಯಿಂದಾಗಿ ಎರಡು ತಿಂಗಳ ಕಾಲ ಲಾಕ್ ಡೌನ್ ಮಾಡಲಾಗಿತ್ತು ಈ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿದ್ದ ಎಲ್ಲಾ ಉದ್ಯಮಗಳನ್ನು ಕೆಲಸಗಾರರಿಲ್ಲದೆ ಬಂದ್ ಮಾಡಲಾಗಿತ್ತು ಇದರಿಂದಾಗಿ ಉದ್ಯಮಿಗಳು ಸಾಕಷ್ಟು ನಷ್ಟವನ್ನು ಅನುಭವಿಸುವಂತಾಯಿತು. ಇದನ್ನು ಅರ್ಥಮಾಡಿಕೊಂಡ ಕೇಂದ್ರ ಸರ್ಕಾರ ವ್ಯಾಪಾರಿಗಳಿಗೆ ಹಾಗೂ ಉದ್ಯಮಿಗಳಿಗೆ ಜಿಎಸ್ ಟಿ ಯಲ್ಲಿ ರಿಲೀಪ್ ಕೊಡಲು ನಿರ್ಧರಿಸಿದೆ.
ಹೌದು ಕೋವಿಡ್ 19 ಸೋಂಕಿನಿಂದಾಗಿ ದೇಶದಲ್ಲಿನ ಆರ್ಥಿಕ ವಹಿವಾಟು, ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವ್ಯಾಪಾರಿಗಳಿಗೆ ಮತ್ತು ಉದ್ಯಮಿಗಳಿಗೆ ದೊಡ್ಡ ಮಟ್ಟದ ರಿಲೀಫ್ ನೀಡುವ ಘೋಷಣೆಯನ್ನು ಹೊರಹಾಕಿದೆ.
ವಾರ್ಷಿಕ 40 ಲಕ್ಷ ರೂಪಾಯಿ ವರೆಗೆ ವ್ಯಾಪಾರ, ವಹಿವಾಟು ಹೊಂದಿರುವ ಉದ್ಯಮಿಗಳಿಗೆ/ವ್ಯಾಪಾರಸ್ಥರಿಗೆ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ವಿನಾಯ್ತಿ ನೀಡಿರುವುದಾಗಿ ಸೋಮವಾರ ಘೋಷಿಸಿದೆ. ಅಲ್ಲದೇ ವಾರ್ಷಿಕ ವಹಿವಾಟು ಅಂದಾಜು 1. 5ಕೋಟಿ ರೂಪಾಯಿವರೆಗೆ ಇದ್ದಲ್ಲಿ ಈ ಯೋಜನೆಯಡಿ ಕೇವಲ ಶೇ.1ರಷ್ಟು ತೆರಿಗೆ ಪಾವತಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸುವ ಮೂಲಕ ಉದ್ಯಮಿಗಳು, ವ್ಯಾಪಾರಸ್ಥರಿಗೆ ಬೆಂಬಲ ನೀಡಿದೆ ಎಂದು ವರದಿ ತಿಳಿಸಿದೆ.
ಜಿಎಸ್ ಟಿ (ಸರಕು ಮತ್ತು ಸೇವಾತೆರಿಗೆ)ಯನ್ನು ದೇಶಾದ್ಯಂತ ಜಾರಿಗೊಳಿಸಲು ಆರಂಭಿಸಿದಂದಿನಿಂದ ಹಣಕಾಸು ಸಚಿವಾಲಯ ಸರಣಿ ಟ್ವೀಟ್ ಗಳು ಮೂಲಕ ಈ ಹೊಸ ಘೋಷಣೆಯನ್ನು ಮಾಡುತ್ತಿತ್ತು. ಈಗಾಗಲೇ ಹಲವು ವಿನಾಯ್ತಿಯನ್ನು ಕೇಂದ್ರ ಘೋಷಿಸಿದೆ.
ಐಶಾರಾಮಿ ಸೇರಿದಂತೆ ಹಲವಾರು ವಸ್ತುಗಳ ಮೇಲೆ ಶೇ.28ರಷ್ಟು ಬೆಲೆ ಇಳಿಸಲಾಗಿದೆ. 230 ವಸ್ತುಗಳಲ್ಲಿ 200ರ ಮೇಲಿನ ತೆರಿಗೆ ಸ್ಲ್ಯಾಬ್ ಅನ್ನು ಇಳಿಕೆ ಮಾಡಲಾಗಿದೆ ಎಂದು ತಿಳಿಸಿದೆ.
ಜಿಎಸ್ ಟಿ ದೇಶದಲ್ಲಿ ಜಾರಿಯಾದ ಮೇಲೆ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ. ಜಿಎಸ್ ಟಿ ಆರಂಭವಾದ ಸಂದರ್ಭದಲ್ಲಿ ಇದರ ಮೌಲ್ಯಮಾಪಕರ ಸಂಖ್ಯೆ 65 ಲಕ್ಷದಷ್ಟಿತ್ತು, ಆದರೆ ಈಗ ಅವರ ಸಂಖ್ಯೆ 1.28 ಕೋಟಿಗೆ ಏರಿದೆ. ಜಿಎಸ್ ಟಿ ಎಲ್ಲಾ ಪ್ರಕ್ರಿಯೆ ಸ್ವಯಂಚಾಲಿತವಾಗಿದೆ ಎಂದು ವಿತ್ತ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.