ಕೊರೋನಾ ವೈರಸ್ ದಾಳಿ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ. ಪ್ರತಿನಿತ್ಯವೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೇ ಇದೆ. ಇಂದೂ ಕೂಡ ಕೊರೋನಾ ಸೋಂಕು 9 ಸಾವಿರದ ಗಡಿಯನ್ನು ದಾಟಿ ಮುಂದೋಗುತ್ತಿದೆ. ಇಂದೂ ಕೂಡ ಕೊರೋನಾ ಸೋಂಕು 9 ಸಾವಿರದ ಗಡಿಯನ್ನು ಮುಟ್ಟಿದೆ. ಅಷ್ಟಕ್ಕೂ ಇಂದು ದಾಖಲಾದ ಕೊರೋನಾ ಸೋಂಕಿನ ಸಂಖ್ಯೆ ಎಷ್ಟು ಗೊತ್ತಾ..?
ರಾಜ್ಯದಲ್ಲಿ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು, ಭಾನುವಾರವೂ ಕೂಡ ಸೋಂಕು 9 ಸಾವಿರದ ಗಡಿಗೆ ತಲುಪಿದೆ. ಈ ದಿನ 8,852 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದರೆ, 7,101 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಂದೇ ದಿನ 106 ಜನ ವೈರಸ್‌ಗೆ ಬಲಿಯಾಗಿದ್ದಾರೆ.
ಹೊಸ ಪ್ರಕರಣಗಳೊಂದಿಗೆ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,35,928ಕ್ಕೆ ಏರಿದೆ. ಇದರಲ್ಲಿ 2,42,229 ಜನ ಸೋಂಕಿನಿಂದ ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 5,581 ಜನ ಕೊರೊನಾ ಸಂಬಂಧಿತ ಸಾವನ್ನಪ್ಪಿದ್ದು, ಇನ್ನೂ 88,091 ಪ್ರಕರಣಗಳು ಸಕ್ರಿಯವಾಗಿವೆ. 730 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿನ ವೇಗ ಯಥಾಸ್ಥಿತಿಯಲ್ಲಿದ್ದು, ಭಾನುವಾರ 2871 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಈ ಮೂಲಕ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,27,263ಕ್ಕೆ ಏರಿದೆ. ಇದರಲ್ಲಿ 87,621 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1938 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇನ್ನೂ 37,703 ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲಿ ಸಕ್ರಿಯವಾಗಿವೆ.
ಇನ್ನು, ಹೊರತುಪಡಿಸಿದರೆ ಮೈಸೂರಿನಲ್ಲಿ 734 ಪ್ರಕರಣಗಳು ಕಂಡುಬಂದಿದ್ದರೆ, ಬಳ್ಳಾರಿ, ದಾವಣಗೆರೆ, ಬೆಳಗಾವಿ, ದಕ್ಷಿಣ ಕನ್ನಡ, ತುಮಕೂರು ಹಾಗೂ ಧಾರವಾಡದಲ್ಲಿ ಕೊರೊನಾ ತ್ರಿಶತಕ ದಾಟಿದೆ. ಈ ಜಿಲ್ಲೆಗಳಲ್ಲಿ ಕ್ರಮವಾಗಿ 428, 373, 357, 334, 314 ಹಾಗೂ 300 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಶಿವಮೊಗ್ಗ 292, ಹಾಸನ 268, ಉಡುಪಿ 254, ಕೊಪ್ಪಳ 240 ಹಾಗೂ ಚಿಕ್ಕಮಗಳೂರಿನಲ್ಲಿ 207 ಪ್ರಕರಣಗಳು ಕಂಡುಬಂದಿವೆ.
ಇನ್ನು, ಬಾಗಲಕೋಟೆ 132, ಚಿಕ್ಕಬಳ್ಳಾಪುರ 127, ಗದಗ 196, ಹಾವೇರಿ 105, ಕಲಬುರಗಿ 199, ಮಂಡ್ಯ 179, ರಾಯಚೂರು 147, ರಾಮನಗರ 114, ಉತ್ತರ ಕನ್ನಡ 113, ವಿಜಯಪುರ 127, ಯಾದಗಿರಿ 67, ಕೋಲಾರ 82, ಕೊಡಗು 65, ಚಿತ್ರದುರ್ಗ 95, ಚಾಮರಾಜನಗರ 54, ಬೀದರ್ 73 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 55 ಹೊಸ ಪ್ರಕರಣಗಳು ಪತ್ತೆಯಾಗಿವೆ.