ಕೇಂದ್ರದಲ್ಲಿ  ಕೃಷಿ ಮಸೂದೆಯ ಕುರಿತಾಗಿ ಸಾಕಷ್ಟು ಕೋಲಾಹಲವೇ ಎದ್ದಿದೆ. ದೇಶದಾಧ್ಯಂತ ಈ ಕೃಷಿ ಮಸೂದೆಯ ಕುರಿತಾಗಿ ಸಾಕಷ್ಟು ಹೋರಾಟಗಳು ನಡೆಯುತ್ತಿರುವಂತಹ ಈ ಸಂದರ್ಭದಲ್ಲಿ ಜನರಿಗೆ ಈ ಮಸೂದೆಯ ಬಗ್ಗೆ ಮನವರಿಕೆಯನ್ನು ಮಾಡಿಕೊಡುವ ಪ್ರಯತ್ನವನ್ನು  ಅನೇಕ ಬಿಜೆಪಿ ನಾಯಕರು ಮಾಡುತ್ತಿದ್ದಾರೆ, ಪ್ರಧಾನಿ ಮೋದಿಯವರೇ ತಮ್ಮ ಟ್ವಿಟರ್ ನಲ್ಲಿ ಈ ಕೃಷಿ ಮಸೂದೆಯ ಕುರಿತು ವಿಶ್ವಾಸವನ್ನು ರೈತರಿಗೆ ಭರವಸೆಯನ್ನು ನೀಡಿದ್ದಾರೆ. ಅದೇ ರೀತಿ ರಾಜ್ಯ ಸರ್ಕಾರದ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಈ ಕೃಷಿ ಮಸೂದೆಯ ಕುರಿತು ರೈತರಿಗೆ ಮಾಹಿತಿಯನ್ನು ನೀಡಿದ್ದಾರೆ.







ಹೌದು ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಕೃಷಿಕರ ಪರವಾಗಿ ಮಸೂದೆಗಳನ್ನು ಮಂಡಿಸಿರುವುದು ಐತಿಹಾಸಿಕ ಮತ್ತು ಅಭಿನಂದನೀಯ ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಾಧ್ಯವಾಗಿದೆ.  ರೈತರ ಮನೆಬಾಗಿಲಿಗೆ ಹೋಗಿ ಉತ್ಪನ್ನಗಳನ್ನು ಖರೀದಿಸುಲು ಅವಕಾಶ ಕಲ್ಪಿಸಿದೆ. ಅಂದ ಮಾತ್ರಕ್ಕೆ ಎಪಿಎಂಸಿಯಲ್ಲಿ ಮಾರಾಟ ನಿಲ್ಲಿಸಿಲ್ಲ. ಎಪಿಎಂಸಿಗೆ ಗೊತ್ತಿಲ್ಲದೆ ಮಧ್ಯವರ್ತಿಗಳ ಹಾವಳಿಯಿಂದಾಗುವ ತೊಂದರೆ ತಪ್ಪಿದೆ ಎಂದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, 26 ಜಿಲ್ಲಾಗಳಲ್ಲಿ ಪ್ರವಾಸ ಮಾಡಿದ್ದು, ಯಾವುದೇ ರೈತರು ಎಪಿಎಂಸಿ ಕಾಯ್ದೆ ವಿರೋಧಿಸಿಲ್ಲ ಎಂದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.








ವಿಧಾನಸೌಧ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರೈತನ ಬೆಳೆ ಮಾರಾಟ ಅವನ ಹಕ್ಕು. ಮೊದಲಿದ್ದ ಮಾರಾಟದ ನಿಯಮವನ್ನು ಕೇಂದ್ರ ಸಡಿಲಿಸಿದೆ. ಎಪಿಎಂಸಿ ಸೆಸ್ ಕೂಡ ರೈತರಿಗಾಗಿ ಕಡಿಮೆ ಮಾಡಿದೆ. ಈ ಕಾನೂನು ಬಂದ ಮೇಲೆ ಹೊಲದಲ್ಲಿಯೇ ಹೋಗಿ ಕೂಡ ಬೆಳೆ ಖರೀದಿಸಬಹುದು. ಈ ಕಾನೂನು ಆದ ಮೇಲೆ ಎಲ್ಲಾ ಎಪಿಎಂಸಿಗೆ ಭೇಟಿ ಕೊಟ್ಟಿದ್ದೇವೆ. ಯಾರೂ ವಿರೋಧಿಸುತ್ತಿಲ್ಲ. ವಿಪಕ್ಷಗಳು ಕೇವಲ ರಾಜಕೀಯಕ್ಕಾಗಿ ಮಾತ್ರ ವಿರೋಧಿಸುತ್ತಿವೆ. ರೈತನಿಗೆ ಮುಕ್ತವಾದ ವಾತಾವರಣ ಈ ಕಾಯಿದೆಯಿಂದ ಸಿಕ್ಕಿ ನನ್ನ ಬೆಳೆ ನನ್ನ ಹಕ್ಕು ಎನ್ನುವಂತಾಗಿದೆ ಎಂದರು.








ಮಲ್ಟಿ ನ್ಯಾಷನಲ್ ಕಂಪೆನಿಗಳಿಗಾಗಲಿ, ಯಾರಿಗಾಗಲಿ, ಮಾರಾಟ ಮಾಡಲಿ. ರೈತನ ಬೆಳೆಗೆ ಬೆಲೆ ಸಿಗಬೇಕು. ಆದಾಯ ಹೆಚ್ಚಾಗಬೇಕು ಎಂದರು. ಪ್ರತಿಭಟನೆ ಹತ್ತಿಕ್ಕುವ ಕೆಲಸ ನಮ್ಮ ಸರ್ಕಾರ ಮಾಡುತ್ತಿಲ್ಲ. ತಿದ್ದಪಡಿ ತಂದಗಾಲೇ ವಿರೋಧಿಸಿಲ್ಲ. ಸರ್ಕಾರ ಸ್ಪಂದಿಸಲು ಪ್ರತಿಭಟನಾನಿರತನ್ನು ಭೇಟಿ ಮಾಡಲು ಮುಖ್ಯಮಂತ್ರಿಗಳು ಸಿದ್ಧರಿದ್ದಾರೆ ಎಂದರು.








ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ರೈತರಿಗೆ ಎಪಿಎಂಸಿಗೆ ಹೋಗಿ ಮಾರಾಟ ಮಾಡುವ ಸೀಮಿತ ಕಾಲಾವಧಿಯನ್ನು ವಿಸ್ತರಿಸಿ ಮಾರಾಟದ ಅವಕಾಶವನ್ನು ವಿಸ್ತರಿಸಲಾಗಿದೆ. ಲೋಡಿಂಗ್ ಅನ್‍ಲೋಡಿಂಗ್, ಹಮಾಲಿ ಕೂಲಿ ಖರ್ಚು ಕಡಿಮೆಯಾಗಲಿದೆ. ಇಂತಹ ರೈತ ಪರ ಕಾಯಿದೆ ತಂದಿರುವುದು ನಿಜಕ್ಕೂ ಶ್ಲಾಘನೀಯ.








ಈ ಕಾಯಿದೆಯಿಂದ ರೈತರಲ್ಲಿ ಸ್ಪರ್ಧಾ ಮನೋಭಾವ ಹುಟ್ಟಿ ಉತ್ತಮ ಫಸಲನ್ನು ಬೆಳೆಯಲು ಅವಕಾಶವಾಗಲಿದೆ. ಕೃಷಿ ಪದವೀಧರರು ಸಾಫ್ಟ್ ಅಗ್ರಿಗಳು ಹಾರ್ಡ್ ಅಗ್ರಿಯತ್ತ ಆಸಕ್ತರಾಗಲಿದ್ದಾರೆ. ಕೃಷಿಕರ ಸಂಖ್ಯೆಯೂ ಈಗ ಹೆಚ್ಚಾಗಿದೆ. ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಬಹುದು.

ಇದರಿಂದ ಉತ್ತಮ ಗುಣಮಟ್ಟದ ಬೆಳೆ ಬೆಳೆಯಬಹುದು ಯಂತ್ರೋಪಕರಣಗಳಿಗಾಗಿ ಒಪ್ಪಂದ ಮಾಡಿಕೊಳ್ಳಬಹುದು ಎಂದರು.ರೈತ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್ ಉಪಸ್ಥಿತರಿದ್ದರು.

Find out more: