ಭಾರತದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವಂತಾ ಲಸಿಕೆಯು 2021ಕ್ಕೂ ಮೊದಲೇ ಸಿದ್ಧವಾಗಲಿದೆ. ಆದರೆ 130 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಈ ಲಸಿಕೆಯ ವಿತರಣೆ ಮತ್ತು ಹಂಚಿಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಸಾಂಕ್ರಾಮಿಕ ರೋಗತಜ್ಞರೇ ಅಭಿಪ್ರಾಯಪಟ್ಟಿದ್ದಾರೆ.







ಭಾರತದಲ್ಲಿ ಲಸಿಕೆ ಸಂಶೋಧನೆಯ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತದಲ್ಲಿ ಶಿಶುಗಳು ಮತ್ತು ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಮಟ್ಟಿಗಷ್ಟೇ ಸೀಮಿತಗೊಂಡಿದ್ದು, ಅದನ್ನು ಮೀರಿದ ಮೂಲಸೌಕರ್ಯಗಳನ್ನು ಹೊಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಲಸಿಕೆ ಸುರಕ್ಷತಾ ಸಲಹೆಗಾರರ ಸಮಿತಿ ಸದಸ್ಯ ಹಾಗೂ ವೆಲ್ಲೂರು ಮೂಲದ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ಸೂಕ್ಷ್ಮ ಜೀವ ಶಾಸ್ತ್ರಜ್ಞ ಗಗನ್ ದೀಪ್ ಕಾಂಗ್ ತಿಳಿಸಿದ್ದಾರೆ.







 

ಕೊರೊನಾವೈರಸ್ ಸೋಂಕಿಗೆ ಮದ್ದು ಯಾವಾಗ ಸಿಗುತ್ತೆ ಎನ್ನುವುದೇ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಟೋಬರ್ ತಿಂಗಳಿನಲ್ಲೇ ಕೊವಿಡ್-19 ಸೋಂಕಿಗೆ ಲಸಿಕೆ ಸಂಶೋಧಿಸಲಾಗುತ್ತದೆ ಎಂದು ಹೇಳುತಿದ್ದಾರೆ.





 


ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಟೋಬರ್ ನಲ್ಲಿ ಕೊವಿಡ್-19 ಸೋಂಕಿಗೆ ಲಸಿಕೆ ಸಿಗುತ್ತದೆ ಎಂದಿದ್ದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಇದಕ್ಕೂ ಮೊದಲೇ ಔಷಧಿ ಪತ್ತೆ ಮಾಡಲಾಗುತ್ತದೆ ಎಂದಿದ್ದರು. ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿಯೇ ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ವೈದ್ಯಕೀಯ ಸಂಶೋಧಕರು ಮತ್ತು ಸಾಂಕ್ರಾಮಿಕ ರೋಗತಜ್ಞರು ಮಾತ್ರ ಈ ವಾದವನ್ನು ನಿರಾಕರಿಸಿದ್ದರು.






ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ರಾಷ್ಟ್ರವಾಗಿರುವ ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಶರವೇಗದಲ್ಲಿ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಸಾಂಕ್ರಾಮಿಕ ಪಿಡುಗು ನಿಯಂತ್ರಿಸಲು ಲಸಿಕೆ ಸಂಶೋಧನೆಯ ಅನಿವಾರ್ಯತೆ ಹೆಚ್ಚಾಗಿದೆ. ಕುಸಿದ ಆರೋಗ್ಯ ವ್ಯವಸ್ಥೆ ಮೇಲೆತ್ತುವ ಉದ್ದೇಶದಿಂದ ಲಸಿಕೆ ಸಂಶೋಧಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಿ ಮೋದಿ ಸರ್ಕಾರವು ಹೇಳಿತ್ತು.






ಭಾರತದಲ್ಲಿ ಕೊರೊನಾವೈರಸ್ ಸೋಂಕಿಗೆ ಲಸಿಕೆ ಸಂಶೋಧನೆ ಬಳಿಕವೂ ಹೊಸ ಹೊಸ ಸವಾಲುಗಳು ಎದುರಾಗಲಿವೆ. ಲಸಿಕೆಯ ಸಂಗ್ರಹಣೆ ಮತ್ತು ವಿತರಣೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವುದು ಹೇಗೆ ಎನ್ನುವುದೇ ಭಾರತದ ಮಟ್ಟಿಗೆ ದೊಡ್ಡ ಸವಾಲು ಎನಿಸಲಿದೆ. ಏಕೆಂದರೆ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಗತ್ತಿನ ಎರಡನೇ ರಾಷ್ಟ್ರವೇ ಭಾರತವಾಗಿದ್ದು, 130 ಕೋಟಿ ಜನರಿಗೆ ಲಸಿಕೆಯನ್ನು ತಲುಪಿಸುವುದು ಅಷ್ಟು ಸುಲಭ ಸಾಧ್ಯವಲ್ಲ ಎಂದು ತಂತ್ರಜ್ಞಾನರು ಹೇಳಿದ್ದಾರೆ

Find out more: