ಆರ್ಸಿಬಿ ಹೊರತಾಗಿ ಹರಾಜಿನಲ್ಲಿ ಗಮನಸೆಳೆಯುವ ಇನ್ನೊಂದು ತಂಡವಿದ್ದರೆ, ಅದು ಕಿಂಗ್ಸ್ ಇಲೆವೆನ್ ಪಂಜಾಬ್. ಕೇವಲ 7 ಆಟಗಾರರನ್ನು ಬಿಡುಗಡೆ ಮಾಡಿರುವ ಪಂಜಾಜ್ಗೆ ಹರಾಜಿನಲ್ಲಿ ಇರುವ ಉಳಿದೆಲ್ಲ ತಂಡಕ್ಕಿಂತ ಹೆಚ್ಚಿನ ಹಣ ಹೊಂದಿದೆ. ತಂಡದ ಕ್ರಿಕೆಟ್ ನಿರ್ದೇಶಕ ಹುದ್ದೆಯಲ್ಲಿರುವ ಅನಿಲ್ ಕುಂಬ್ಳೆ ಆಯ್ಕೆ ಈ ಬಾರಿ ಎಷ್ಟು ಭಿನ್ನವಾಗಿರಲಿದೆ ಎನ್ನುವುದು ತಿಳಿಯಲಿದೆ.
4 ಬಾರಿ ಚಾಂಪಿಯನ್ ಆದ ಮುಂಬೈ, 3 ಬಾರಿ ಚಾಂಪಿಯನ್ ಆದ ಚೆನ್ನೈ ತಂಡಗಳನ್ನು ಹೆಚ್ಚಿನ ಆಟಗಾರರನ್ನು ಬಿಟ್ಟುಕೊಡದೆ ಮೂಲ ತಂಡವನ್ನು ಹಾಗೆ ಉಳಿಸಿಕೊಂಡಿವೆ. ಈ ಮೂರು ತಂಡಗಳು 20 ಕೋಟಿ ರೂ.ಗಿಂತ ಕಡಿಮೆ ಹಣವನ್ನು ಹರಾಜಿಗೆ ಹೊಂದಿದ್ದರೆ, ಮುಂಬೈ ತಂಡ ಇರುವ ಎಲ್ಲ ಫ್ರಾಂಚೈಸಿಗಳಿಗಿಂತ ಕನಿಷ್ಠ 13.05 ಕೋಟಿ ರೂ. ಮೊತ್ತವನ್ನು ಹೊಂದಿದೆ. ರಾಜಸ್ಥಾನ ರಾಯಲ್ಸ್ ತಂಡ ಮುಂದಿನ ಆವೃತ್ತಿಯ ನಾಯಕತ್ವವನ್ನು ಸ್ಟೀವನ್ ಸ್ಮಿತ್ಗೆ ನೀಡಿದ್ದರೆ, 11 ಆಟಗಾರರನ್ನು ಬಿಡುಗಡೆ ಮಾಡಿದೆ. ಕೋಲ್ಕತ ನೈಟ್ರೈಡರ್ಸ್ ಕೂಡ ತಂಡದ ಅಗ್ರ ಆಟಗಾರರಾಗಿರುವ ರಾಬಿನ್ ಉತ್ತಪ್ಪ ಹಾಗೂ ಕ್ರಿಸ್ ಲ್ಯಾನ್ ಸೇರಿದಂತೆ 11 ಆಟಗಾರರನ್ನು ಹರಾಜಿನಲ್ಲಿಟ್ಟಿದೆ. ಪ್ರಸ್ತುತ ಹರಾಜು ಭಾರೀ ಕುತೂಹಲ ಮೂಡಿಸಿದೆ.