ಆಸ್ಟ್ರೇಲಿಯಾ ಟೆಸ್ಟ್ ತಂಡ ಇತ್ತೀಚೆಗೆ ತನ್ನ ಶಕ್ತಿ ಸಾರ್ಮಥ್ಯದ ಆಟವನ್ನು ಮರೆತಿದ್ದ. ಅದರ ಜೊತೆಗೆ ಬಾಂಗ್ಲಾದೇಶದಂತಾಗಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರನೇ  ಟ್ವೀಟ್ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅದು ಯಾರು, ಏನಿದು ಸ್ಟೋರಿ ನೀವೆ ನೋಡಿ.
 
ಪ್ರಸ್ತುತ ಟೀಂ ಇಂಡಿಯಾ ಇದೀಗ ಪಿಂಕ್ ಬಾಲ್ ನಲ್ಲಿ ಪ್ರವಾಸಿ ಬಾಂಗ್ಲಾ ದೇಶದ ಎಡೆಮುರಿ ಕಟ್ಟಿದೆ.  ಈಡನ್‌ ಗಾರ್ಡನ್ಸ್‌ ಕ್ರಿಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಎದುರು ಗರ್ಜಿಸಿದ ಟೀಮ್‌ ಇಂಡಿಯಾ ವೇಗಿಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಹಸಿದ ಹೆಬ್ಬುಲಿಯಂತೆ ಬೇಟೆಯಾಡಿದರು.ಟೀಮ್‌ ಇಂಡಿಯಾದ ವೇಗದ ಬೌಲಿಂಗ್‌ ದಾಳಿಗೆ ಪ್ರತ್ಯುತ್ತರ ನೀಡಲು ವಿಫಲಗೊಂಡು ಚೆಂಡಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳ ಹೆಲ್ಮೆಟ್‌ ಹಾರಿಹೋಗುವಂತೆ ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ ಹಾಗೂ ಉಮೇಶ್‌ ಯಾದವ್‌ ಬೌನ್ಸರ್‌ ಅಸ್ತ್ರಗಳನ್ನು ಪ್ರಯೋಗ ಮಾಡಿದರು.
 
ಈ ಸಂದರ್ಭದಲ್ಲಿ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳ ತಂತ್ರಗಾರಿಕೆ ಹೀನಾಯವಾಗಿದೆ ಎಂದು ಸೂಚಿಸಿ ಭಾರತದ ಜನಪ್ರಿಕಯ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಟ್ವೀಟ್‌ ಮಾಡಿದ್ದರು. "ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಬಹಳ ತಡವಾಗಿ ಚೆಂಡನ್ನು ಎದುರಿಸುತ್ತಿದ್ದಾರೆ," ಎಂದು ತಂತ್ರಗಾರಿಕೆಯ ವೈಫಲ್ಯವನ್ನು ಹರ್ಷ ತಮ್ಮ ಟ್ವೀಟ್‌ನಲ್ಲಿ ಬಿಂಬಿಸಿದ್ದರು.
 
ಇದಕ್ಕೆ ಉತ್ತರ ನೀಡಿದ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಹಾಗೂ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಡೀನ್‌ ಜೋನ್ಸ್‌ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಮುಖವಾಗಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವನ್ನು ಬಾಂಗ್ಲಾದೇಶ ತಂಡಕ್ಕೆ ಹೋಲಿಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. "ಶಕಿಬ್‌ ಮತ್ತು ತಮಿಮ್‌ ಇಬ್ಬರೂ ಇಲ್ಲ. ಆಸ್ಟ್ರೇಲಿಯಾ ತಂಡ ವಿದೇಶದಲ್ಲಿ ಆಡುವಾಗ ಸ್ಟೀವ್‌ ಸ್ಮಿತ್‌ ಅವರನ್ನು ಪ್ಲೇಯಿಂಗ್‌ ಇಲೆವೆನ್‌ನಿಂದ ತೆಗೆದರೆ ಆಸೀಸ್‌ನ ಪ್ರದರ್ಶನ ಕೂಡ ಹೀಗೆ ಇರುತ್ತದೆ," ಎಂದು ಹರ್ಷ ಭೋಗ್ಲೆ ಟ್ವೀಟ್‌ಗೆ ಜೋನ್ಸ್‌ ಉತ್ತರಿಸಿದ್ದಾರೆ. ಈ ಮೂಲಕ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಇಲ್ಲದೇ ಇದ್ದರೆ ಆಸ್ಟ್ರೇಲಿಯಾದ ಬ್ಯಾಟಿಂಗ್‌ ಬಾಂಗ್ಲಾ ತಂಡದ ಮಟ್ಟಿಗಿರುತ್ತದೆ ಎಂದು ಕಾಂಗರೂ ಪಡೆಗೆ ಪರೋಕ್ಷವಾಗಿ ಕುಟುಕಿದ್ದಾರೆ.
 
 
 
 
 

Find out more: