ಸೂರತ್: ಲಸಿತ್ ಮಾಲಿಂಗ, ಒಂದು ಟೈಮಲ್ಲಿ ಈ ಹೆಸರು ಕೇಳಿದ್ರೆ ಬ್ಯಾಟ್ಸ್ ಮ್ಯಾನ್ ಗಳು ಬ್ಯಾಟಿಂಗ್ ಮಾಡಲು ಹೆದರುತಿದ್ದರು. ಹೌದು, ಅಂತ ಬೌನ್ಸ್ ಮತ್ತು ಯಾರ್ಕರ್ ಸೆಷಲಿಸ್ಟ್ ಢಿಪರೆಂಟ್ ಬೌಲಿಂಗ್ ನಿಂದ ವಿಶ್ವ ಶ್ರೇಷ್ಠ ದಾಖಲೆ ಮಾಡಿದ್ದರು ಮಾಲಿಂಗ. ಇದೀಗ ಮಾಲಿಂಗ ದಾಖಲೆ ಉಡೀಸ್ ಆಗಿದ್ದು, ಅದನ್ನು  ಮಾಡಿದ್ದು ಯಾರು ಎಂಬುದನ್ನು ತಿಳಿಯಲೇ ಬೇಕು. 
 
ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡದ ವೇಗದ ಬೌಲರ್‌ ಅಭಿಮನ್ಯು ಮಿಥುನ್‌ ಒಂದೇ ಓವರ್‌ನಲ್ಲಿ 5 ವಿಕೆಟ್‌ ಪಡೆದ ಅತ್ಯಂತ ಅಪರೂಪದ ಸಾಧನೆ ಮಾಡಿದ್ದಾರೆ. ಇದು ಸಾಧ್ಯಾನಾ ಎಂದು ಆಶ್ಚರ್ಯ ವಾದರೂ ನಂಬಲೇಬೇಕಾದ ವಿಷಯವಿದು. 
 
ಇನಿಂಗ್ಸ್‌ನ ಕೊನೆಯ ಓವರ್‌ನ ಮೊದಲ 4 ಎಸೆತಗಳಲ್ಲಿ ವಿಕೆಟ್‌ ಪಡೆದು ಹ್ಯಾಟ್ರಿಕ್‌ ಸಾಧನೆ ಮಾಡಿದ ಮಿಥುನ್‌ ಬಳಿಕ ಒಂದು ವೈಡ್‌ ಮತ್ತು ಒಂದು ರನ್‌ ನೀಡಿ ನಂತರ ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್‌ ತಮ್ಮ ಖಾತೆಗೆ ಜೋಡಿಸಿಕೊಂಡರು. ಈ ಮೂಲಕ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಓವರ್‌ ಒಂದರಲ್ಲಿ 5 ವಿಕೆಟ್‌ ಪಡೆದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅಪರೂಪದ ಸಾಧನೆ ಮಾಡಿ ಮಿಂಚಿದ್ದಾರೆ. 
 
ಇದಕ್ಕೂ ಮುನ್ನ ಶ್ರೀಲಂಕಾದ ವೇಗದ ಬೌಲರ್‌ ಲಸಿತ್‌ ಮಾಲಿಂಗ ಟಿ20 ಕ್ರಿಕೆಟ್‌ನಲ್ಲಿ ಓವರ್‌ ಒಂದರಲ್ಲಿ 4 ವಿಕೆಟ್‌ ಪಡೆದು ಈ ದಾಖಲೆ ಹೊಂದಿದ್ದರು. ಇದೇ ವರ್ಷ ನ್ಯೂಜಿಲೆಂಡ್‌ ವಿರುದ್ಧದ ಟಿ20-ಐ ಪಂದ್ಯದಲ್ಲಿ ಮಾಲಿಂಗ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ ಪಡೆದು ಅಬ್ಬರಿಸಿದ್ದರು. ಇನ್ನು ಶುಕ್ರವಾರ ನಡೆದ ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲು ಬ್ಯಾಟ್‌ ಮಾಡಿದ ಹರಿಯಾಣ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 194 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಕರ್ನಾಟಕ, 2 ವಿಕೆಟ್‌ ನಷ್ಟದಲ್ಲಿ ಇನ್ನು 4 ಓವರ್‌ಗಳು ಬಾಕಿ ಇರುವಾಗಲೇ ಗುರಿ ಮುಟ್ಟಿ ಪ್ರಶಸ್ತಿ ಸುತ್ತಿಗೆ ಮುನ್ನಡೆಯಿತು.

Find out more: