ಆಡಿಲೇಡ್: ಟೆಸ್ಟ್ ಕ್ರಿಕೇಟ್ ನಲ್ಲಿ ಸೆಂಚುರಿ ಸಿಡಿಸಿ ಅದನ್ನು ಡಬಲ್ ಸೆಂಚುರಿ ಆಗಿ ಪರಿವರ್ತಿಸುವುದೇ  ದೊಡ್ಡ ಸವಾಲಾಗಿರುತ್ತದೆ. ಅಂತಹದ ರಲ್ಲಿ ಆಸ್ಟ್ರೇಲಿ ಯಾದ ಈ ಆಟಗಾರ ಬರೋಬ್ಬರಿ ತ್ರಿಶತಕ ಸಿಡಿಸಿ ಅಡಿಲೇಡ್ ನಲ್ಲಿ ಸಂಭ್ರಮಿಸಿದ್ದಾರೆ. ಆ ಆಟಗಾರ ಯಾರು. ಯಾವೆಲ್ಲಾ ದಾಖಲೆಗಳನ್ನು ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ ಎಂಬ ಮಾಹಿತಿ ನಿಮಗಾಗಿ. 
 
ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್, ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ತ್ರಿಶತಕ ಸಾಧನೆ ಮಾಡಿದ್ದಾರೆ. ಆಡಿಲೇಡ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಸ್ಮರಣೀಯ ಸಾಧನೆ ಬರೆದರು.
 
ಡೇವಿಡ್ ವಾರ್ನರ್ ತ್ರಿಶತಕವು 389 ಎಸೆತಗಳಲ್ಲಿ ದಾಖಲಾಗಿದ್ದವು. ಅಂತಿಮವಾಗಿ 418 ಎಸೆತಗಳನ್ನು ಎದುರಿಸಿದ ವಾರ್ನರ್ 39 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 335 ರನ್ ಗಳಿಸಿ ಅಜೇಯರಾಗುಳಿದರು. ಪರಿಣಾಮ ಆಸೀಸ್ ಮೂರು ವಿಕೆಟ್ ನಷ್ಟಕ್ಕೆ 589 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ವಾರ್ನರ್‌ಗೆ ಉತ್ತಮ ಬೆಂಬಲ ನೀಡಿದ ಲ್ಯಾಬುಚಾಗ್ನೆ (162) ಶತಕ ಸಾಧನೆ ಮಾಡಿದರು. 
 
ಡೇವಿಡ್ ವಾರ್ನರ್ ಸಾಧನೆ:-
 
ಇದು ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದ ಹಿರಿಮೆಗೆ ಡೇವಿಡ್ ವಾರ್ನರ್ (335*) ಭಾಜನವಾಗಿದ್ದಾರೆ. ಮ್ಯಾಥ್ಯೂ ಹೇಡನ್ (380) ಬಳಿಕ ಆಸೀಸ್ ಬ್ಯಾಟ್ಸ್‌ಮನ್‌ನಿಂದ ದಾಖಲಾದ ಎರಡನೇ ಗರಿಷ್ಠ ಮೊತ್ತ ಕೂಡಾ ಇದಾಗಿದೆ. ಹಾಗೆಯೇ ಗುಲಾಬಿ ಟೆಸ್ಟ್‌ನಲ್ಲಿ ಗರಿಷ್ಠ ರನ್ ಪೇರಿಸಿದ ಹಿರಿಮೆಗೆ ಆಸೀಸ್ (589/3) ಪಾತ್ರವಾಗಿದೆ.
 
ಆಸ್ಟ್ರೇಲಿಯಾದ 7ನೇ ಬ್ಯಾಟ್ಸ್‌ಮನ್. ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಆಸ್ಟ್ರೇಲಿಯಾದ ಏಳನೇ ಹಾಗೂ ಒಟ್ಟಾರೆಯಾಗಿ 27ನೇ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದಾರೆ. ಪ್ರಸ್ತುತ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸೀಸ್‌ನ ಮಾಜಿ ದಿಗ್ಗಜ ಡಾನ್ ಬ್ರಾಡ್ಮನ್, ವೀರೇಂದ್ರ ಸೆಹ್ವಾಗ್ ಹಾಗೂ ಕ್ರಿಸ್ ಗೇಲ್ ತಲಾ ಎರಡು ತ್ರಿಶತಕ ದಾಖಲೆಗಳನ್ನು ಹೊಂದಿದ್ದಾರೆ. ಗರಿಷ್ಠ ಬ್ರ್ಯಾನ್ ಲಾರಾ 400* ಸಿಡಿಸಿದ್ದಾರೆ.

Find out more: