ಅಡಿಲೇಡ್​: ಸಾಮಾನ್ಯವಾಗಿ ಎಲ್ಲಾ ಆಟಗಾರರು ಅವರ ತಂಡದ ಆಟಗಾರರ ಶಕ್ತಿ ಸಾಮರ್ಥ್ಯ ಗಳನ್ನು ಅರಿತು ಅವರು ಯಾವ ರೀತಿಯ ಸಾಧನೆಗಳನ್ನು ಮಾಡಬಹುದು ಎಂದು ಹೇಳುತ್ತಾರೆ. ಆದರೆ ಆಸ್ಟ್ರೇಲಿಯಾ ದ ಈ ಆಟಗಾರ ಟೀಂ ಇಂಡಿಯಾದ ಡಬಲ್ ಸೆಂಚುರಿಕರ್ ಖ್ಯಾತಿಯ ರೋಹಿತ್ ಶರ್ಮ ಶಕ್ತಿ ಸಾಮಾರ್ಥ್ಯವನ್ನು ಅರಿತು ಅವರು ಮುಂದೆ ಸಾಧಿಸಬಹುದಾದ ಸಾಧನೆ ಯೊಂದನ್ನು ಕುರಿತು ಮಾತನಾಡಿದ್ದಾರೆ. ಹೌದು ಅದು ಯಾರು, ಏನು ಸಾಧನೆ ಎಂಬ ಮಾಹಿತಿ ಇಲ್ಲಿದೆ ನೋಡಿ. 
 
ಟೆಸ್ಟ್​​ ಕ್ರಿಕೆಟ್​ನಲ್ಲಿ ವೆಸ್ಟ್​ ಇಂಡೀಸ್​ ತಂಡದ ಮಾಜಿ ಆಟಗಾರ ಮತ್ತು ದಿ ಗ್ರೇಟ್ ಬ್ರಿಯಾನ್ ಲಾರಾ ಅವರ 400 ರನ್​ಗಳ ವಿಶ್ವ ದಾಖಲೆ ಯನ್ನು ಭಾರತದ ರೋಹಿತ್​ ಶರ್ಮಾ ಮಾತ್ರ ಮುರಿಯಬಲ್ಲರು ಎಂದು ಆಸ್ಟ್ರೇಲಿಯಾದ ಡ್ಯಾಷಿಂಗ್ ಓಪನರ್ ಡೇವಿಡ್ ವಾರ್ನರ್ ಅಭಿಪ್ರಾಯ ಪಟ್ಟಿದ್ದಾರೆ. ಹೌದು ಈ ಮಾತನ್ನು ಸ್ವತಹ ಅವರೇ ಹೇಳಿದ್ದಾರೆ. 
 
ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​​ ಮ್ಯಾಚ್​​ನಲ್ಲಿ 335 ರನ್​ಗಳಿಸಿದ್ದ ವಾರ್ನರ್, ಸ್ಕೋರ್ 589/3 ಆಗಿದ್ದಾಗ ಆಸ್ಟ್ರೇಲಿಯಾದ ನಾಯಕ ಟಿಮ್ ಪೈನೆ ಇನ್ನಿಂಗ್ಸ್​​ ಡಿಕ್ಲೇರ್​ ಘೋಷಿಸಿದ್ದರು. ಇದರಿಂದ 65 ರನ್​ಗಳಿಂದ ಲಾರಾ ದಾಖಲೆ ಮುರಿಯುವ ಅವಕಾಶವನ್ನು ವಾರ್ನರ್ ಕಳೆದುಕೊಂಡರು. ಇನ್ನಿಂಗ್ಸ್​ ಮುಕ್ತಾಯದ ನಂತರ ಮಾತನಾಡಿದ ವಾರ್ನರ್, ಟೆಸ್ಟ್​​ ಕ್ರಿಕೆಟ್​​ನಲ್ಲಿ ಲಾರಾ ಅವರ ಔಟಾಗದೆ 400 ರನ್ ಗಳಿಸಿದ ದಾಖಲೆಯನ್ನು ಮುಂದಿನ ದಿನಗಳಲ್ಲಿ ಒಂದಲ್ಲಾ ಒಂದು ದಿನ ಭಾರತದ ಬ್ಯಾಟ್ಸ್​​ಮನ್ ರೋಹಿತ್ ಶರ್ಮಾ ಮುರಿಯಬಹುದು. ಅ ಸಾಮರ್ಥ್ಯ ರೋಹಿತ್ ಶರ್ಮಾ ಅವರಲ್ಲಿದೆ ಎಂದು ತಿಳಿಸಿದ್ದಾರೆ. 
 
ಕ್ರಿಕೆಟ್​​ನ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​​ಮನ್​ಗಳಲ್ಲಿ ಒಬ್ಬರಾದ ವೆಸ್ಟ್​ ಇಂಡೀಸ್​ನ ಬ್ರಿಯಾನ್ ಲಾರಾ ​​2004 ರಲ್ಲಿ ಇಂಗ್ಲೆಂಡ್​ ವಿರುದ್ಧ ಔಟಾಗದೆ 400 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ವಾರ್ನರ್ 335 ರನ್ ಗಳಿಸಿದ್ದು ಮುಂದೊಂದು ದಿನ ಟೀಂ ಇಂಡಿಯಾದ ರೋಹಿತ್ ಶರ್ಮ ಈ ದಾಖಲೆ ಬರ೧ಯುವರೆಂಬ ಆತ್ಮವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Find out more: