ಹಲವಾರು ಸರ್ಕಸ್ ಗಳೆಲ್ಲಾ ನಡೆದ ಮೇಲೆ ಇದೀಗ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಒಂದು ದೊಡ್ಡ ಮಟ್ಚದಲ್ಲಿದೆ. ಆದರೆ ಇದೀಗ ಬಿಸಿಸಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದು ಕಾರನವೇನೆಂಬುದು ಇಲ್ಲಿದೆ ನೋಡಿ.
ಬಿಸಿಸಿಐ ಪದಾಧಿಕಾರಿಗಳ ಅಧಿಕಾರ ಅವಧಿಯ ಮೇಲೆ ಲೋಧಾ ಸಮಿತಿಯ ಸುಧಾರಣೆ ಯನ್ನು ದುರ್ಬಲ ಗೊಳಿಸಲು ಬಿಸಿಸಿಐ ನಿರ್ಧರಿಸಿದ್ದು, ಸುಪ್ರೀಂಕೋರ್ಟ್ ಅನುಮೋದನೆಗೆ ಬಿಸಿಸಿಐ ಎದುರು ನೋಡುತ್ತಿದೆ. ಇದು 9 ತಿಂಗಳಿಗೆ ಅಂತ್ಯಗೊಳ್ಳುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಧಿಕಾರಾವಧಿ ವಿಸ್ತರಣೆಗೆ ದಾರಿಯಾಗುವ ಸಾಧ್ಯತೆ ಇದೆ ಎಂಬುದು ತಿಳಿದುಬಂದಿದೆ. ಇದರ ಇದೆ ಮತ್ತೇನೋ ಇದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಲೋಧ ಸುಧಾರಣೆ ಸಂಬಂಧದ ನಿರ್ಧಾರವನ್ನು ಭಾನುವಾರ ಮುಂಬೈನಲ್ಲಿ ನಡೆದ ಬಿಸಿಸಿಐನ 88 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತೆಗೆದು ಕೊಳ್ಳಲಾಗಿದೆ. ಎಲ್ಲ ಪ್ರಸ್ತಾವಿತ ತಿದ್ದುಪಡಿಗಳನ್ನು ಬಿಸಿಸಿಐನ ಸಭೆಯಲ್ಲಿ ಅನುಮೋದನೆ ಗೊಂಡಿದ್ದು, ಸುಪ್ರೀಂಕೋರ್ಟ್ಗೆ ಕಳುಹಿಸಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ಮಾಧ್ಯಮ ಗಳಿಗೆ ತಿಳಿಸಿದ್ದಾರೆ.
ಪ್ರಸ್ತುತ ಸಂವಿಧಾನದ ಪ್ರಕಾರ ಬಿಸಿಸಿಐ ಅಥವಾ ರಾಜ್ಯ ಅಸೋಸಿಯೇಷನ್ನಲ್ಲಿ ಎರಡರಿಂದ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಪದಾಧಿಕಾರಿ ಕಡ್ಡಾಯವಾಗಿ ಮೂರು ವರ್ಷಗಳ ಕೂಲಿಂಗ್- ಆಫ್ ಅವಧಿಗೆ ಹೋಗುತ್ತಾನೆ. ಅಕ್ಟೋಬರ್ 23 ರಂದು ಬಿಸಿಸಿಐ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಗಂಗೂಲಿ ಮುಂದಿನ ವರ್ಷ ಅಧಿಕಾರದಿಂದ ಕೆಳಗಿಳಿಯ ಬೇಕಾಗಿದೆ. ಆದರೆ, ಲೋಧ ಸುಧಾರಣೆ ದುರ್ಬಲವಾದರೆ 2024ರವರೆಗೂ ಅವರನ್ನು ನೋಡಬಹುದಾಗಿದೆ. ಆದ್ದರಿಂದಲೇ ಇದೀಗ ಲೋಧಾ ಸುಧಾರಣೆಗೆ ಮುಂದಾಗಿದ್ದಾರೆ ಎಂಬುದು ತಿಳಿದು ಬಂದಿದೆ.
ಲೋಧಾ ಸುಧಾರಣೆಗೆ ಕಾರಣದಿಂದ ಬಿಸಿಸಿಐ ಎಲ್ಲವನ್ನು ನಿಧಾನಗತಿಯಲ್ಲಿ ಮುಂದೂಡಲಾಗುತ್ತದೆಂದು, ಅದರಿಂದ ಬಿಸಿಸಿಐ ಅಧ್ಯಕ್ಷ ರಾದ ಸೌರವ್ ಗಂಗೂಲಿ ಅಧಿಕಾರ ಸಹ ಮುಂದುವರೆಯಲಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಲೋಧಾ ಸಮಿತಿಯ ಶಿಫಾರಸ್ಸನ್ನು ಬಿಸಿಸಿಐ ಅಂಗೀಕರಿಸಿದರು ಸಹ ಹಾಗಾಗ್ಗೆ ವಿರೋಧಿಸುತ್ತಾ ಬಂದಿದೆ. ಪ್ರಸ್ತುತ ಲೋಧಾ ಸಮಿತಿಯ ಸುಧಾರಣೆಯನ್ನು ದುರ್ಬಲಗೊಲಿಸುವತ್ತ ಬಿಸಿಸಿಐ ಕಾರ್ಯೋನ್ಮುಖವಾಗಿದೆ.