ಮುಂಬಯಿ: ರೋಹಿತ್, ಕ್ರೀಡಾ ಲೋಕದಲ್ಲಿ ಈ ಹೆಸರು ಕೇಳಿದ ತಕ್ಷಣ ನೆನಪಾಗೋದು ಡಬಲ್ ಸೆಂಚುರಿ, ಸಿಕ್ಸರ್ ಸುರಿಮಳೆಯಾಟ. ಇದೀಗ ಈ ಸಿಕ್ಸರ್ ಗಳಿಂದ ಹೊಸದೊಂದು ದಾಖಲೆ ಬರೆಯಲು ರೆಡಿಯಾಗಿದ್ದಾರೆ. ಹೌದು, ಇನ್ನು ಯಂಗ್ ಅಂಡ್ ಯನರ್ಜಿಟಿಕ್ ಬಾಯ್ ಕನ್ನಡಿಗ ರಾಹುಲ್ ಕೂಡ ನೂತನ ದಾಖಲೆ ಬರೆಯಲು ಕಾತರರಾಗಿದ್ದಾರೆ. ಆ ದಾಖಲೆಗಳೇನು ಎಂಬುದನ್ನು ನೀವೆ ನೋಡಿ.
ಭಾರತದ ಹಿಟ್ ಮ್ಯಾನ್ ಉಪನಾಯಕ ರೋಹಿತ್ ಶರ್ಮ ಇನ್ನೊಂದು ಮೈಲುಗಲ್ಲಿನ ಸನಿಹದಲ್ಲಿದ್ದಾರೆ. ಅವರು ಇನ್ನೊಂದು ಸಿಕ್ಸರ್ ಹೊಡೆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400ಸಿಕ್ಸರ್ ದಾಖಲಿಸಿದ ವಿಶ್ವದ 3ನೇ ಹಾಗೂ ಭಾರತದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಡಿ. 6ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮ ಈ ದಾಖಲೆ ನಿರ್ಮಿಸುವುದರಲ್ಲಿ ಅನುಮಾನವಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ 534ಸಿಕ್ಸರ್ ಬಾರಿಸಿದ ವಿಶ್ವದಾಖಲೆ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಹೆಸರಲ್ಲಿದೆ. ಪಾಕಿಸ್ಥಾನದ ಶಾಹಿದ್ ಅಫ್ರಿದಿ 476ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮುಂದೊಂದು ದಿನ ರೋಹಿತ್ ಶರ್ಮ, ಗೇಲ್ ದಾಖಲೆಯನ್ನು ಮುರಿದರೂ ಅಚ್ಚರಿಯಿಲ್ಲ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯವಾಡಲು ಟೀಂ ಇಂಡಿಯಾ ಸಜ್ಜಾಗಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಸ್ಟೇಡಿಯಂ ನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆರಂಭಿಕ ಆಟಗಾರ ಕೆ ಎಲ್ ರಾಹುಲ್ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಕನ್ನಡಿಗ ಕೆ ಎಲ್ ರಾಹುಲ್ ಇನ್ನು 26ರನ್ ಗಳಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ.
ಅಂತಾರಾಷ್ಟ್ರೀಯ ಟಿ ಟ್ವೆಂಟಿಯಲ್ಲಿ ಒಂದು ಸಾವಿರ ರನ್ ಗಡಿ ದಾಟಲು ರಾಹುಲ್ ಗೆ ಇನ್ನು 26ರನ್ ಅಗತ್ಯವಿದ್ದು, ಈ ಸಾಧನೆ ಮಾಡಿದ ಏಳನೆ ಭಾರತೀಯ ಎಂಬ ಸಾಧನೆ ರಾಹುಲ್ ಅವರದ್ದಾಗಲಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದರೆ, ನಂತರ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ಶಿಖರ್ ಧವನ್ ಮತ್ತು ಯುವರಾಜ್ ಸಿಂಗ್ ಇದ್ದಾರೆ. ಈ ಪಂದ್ಯದಲ್ಲಿ ರಾಹುಲ್ ಮಿಂಚಲು ಭರ್ಜರಿ ತಯಾರಿ ನಡೆಸಿದ್ದಾರೆ.