ಕಟಕ್: ಕುತೂಹಲ ಕೆರಳಿಸಿದ್ದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿ 316ರನ್ ಚೇಸ್ ಮಾಡುವ ಮಾಡುವ ಪಂದ್ಯ 4 ವಿಕೆಟ್ ಗಳಿಂದ ಗೆದ್ದು ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿ ವಿಂಡೀಸ್ ವಿರುದ್ದ 17ವರ್ಷಗಳ ಸರಣಿ ಗೆಲುವಿನ ಓಟ ಮುಂದುವರೆಸಿತು. 
 
ಕೊನೆಯವರೆಗೂ ಅತ್ಯಂತ ರೋಮಾಂಚಕವಾಗಿ ಸಾಗಿದ 3ನೇ ಏಕದಿನ ಪಂದ್ಯದಲ್ಲಿ ಎರಡೂ ತಂಡಗಳೂ ಸಮಬಲದ ಹೋರಾಟವನ್ನು ನೀಡಿದವು. ಪಂದ್ಯದ ಅಂತ್ಯದಲ್ಲಿ ರವೀಂದ್ರ ಜಡೇಜಾ ಹಾಗೂ ಯುವ ಬ್ಯಾಟ್ಸ್ ಮನ್ ಶಾರ್ದೂಲ್ ಠಾಕೂರ್ ದಿಟ್ಟ ಜೊತೆಯಾಟ ಭಾರತಕ್ಕೆ ಗೆಲುವಿನ ಸಂಭ್ರಮವನ್ನು ತಂದುಕೊಟ್ಟಿತು. ಕೊನೆಯಲ್ಲಿ ಭಾರತ ತಂಡವು 48.4 ಓವರ್ ಗಳಲ್ಲಿ 06 ವಿಕೆಟ್ ಗಳನ್ನು ಕಳೆದುಕೊಂಡು 316 ರನ್ ಗಳಿಸುವ ಮೂಲಕ ಗೆಲುವಿನ ಗುರಿಯನ್ನು ತಲುಪಿತು. ಆರಂಭಿಕರಾದ ರೋಹಿತ್ ಶರ್ಮಾ (63) ಮತ್ತು ಕೆ.ಎಲ್. ರಾಹುಲ್ (77) ಅವರು ದೀರ್ಘ ಚೇಸಿಂಗ್ ಗೆ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟರು. ಇವರಿಬ್ಬರು 122 ರನ್ನುಗಳ ಉತ್ತಮ ಜೊತೆಯಾಟ ನೀಡಿದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ಅವರು ಔಟಾದರು. ಅವರು 63 ಎಸೆತಗಳಲ್ಲಿ 63 ರನ್ ಗಳಿಸಿದರು. 
 
ಆದರೆ ಈ ಹಂತದಲ್ಲಿ ಶತಕದತ್ತ ದಾಪುಗಾಲು ಹಾಕುತ್ತಿದ್ದ ವಿರಾಟ್ ಕೊಹ್ಲಿ ಪೌಲ್ ಬೌಲಿಂಗ್ ನಲ್ಲಿ ಬೌಲ್ಡಾದರು. ಕೊಹ್ಲಿ 81 ಎಸೆತಗಳನ್ನು ಎದುರಿಸಿ 85 ರನ್ ಬಾರಿಸಿದರು.ತಂಡದ ಮೊತ್ತ 286 ಆಗಿತ್ತು ಮತ್ತು ಜಯಕ್ಕೆ 23 ಎಸೆತಗಳಲ್ಲಿ 30 ರನ್ ಗಳ ಅವಶ್ಯಕತೆ ಇತ್ತು. ಆಗ ಜಡೇಜಾ ಜೊತೆ ಸೇರಿದ ಶಾರ್ದೂಲ್ ಠಾಕೂರ್ (16) ಬಿರುಸಿನ ಆಟಕ್ಕಿಳಿದರು. ಅವರು ಕೇವಲ 6 ಎಸೆತಗಳಲ್ಲಿ 17 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ 02 ಬೌಂಡರಿ ಮತ್ತು 01 ಸಿಕ್ಸರ್ ಇತ್ತು. ಜವಾಬ್ದಾರಿಯುತ ಆಟವಾಡಿದ ರವೀಂದ್ರ ಜಡೇಜಾ 31 ಎಸೆತಗಳಲ್ಲಿ 39 ರನ್ ಬಾರಿಸಿ ಅಜೇಯರಾಗಿ ಉಳಿದರು.ನಾಯಕನ ಆಟವಾಡಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ರೋಹಿತ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದು ಸಂಭ್ರಮಿಸಿದರು.

Find out more: