ಕಟಕ್‌: ವೆಸ್ಟ್ ಇಂಡೀಸ್ ನ ದೈತ್ಯ ಆಟಗಾರ ನಿಕೋಲಸ್ ಪೂರನ್ ಗೆ ಗಂಭೀರ ಅಪಘಾತ ವಾಗಿದ್ದು, ಏನಾಯ್ತು ಎನ್ನುವುದು ಬಹುತೇಕರ ಕುತೂಹಲ ವಾಗಿದೆ. ಹೌದು, ಆ ಭೀಕರ ಅಪಘಾತದಲ್ಲಿ ಪೂರನ್ ಪವಾಡ ಸದೃಶ ವೆಂಬಂತೆ ಬದುಕಿದ್ದಾನೆ. ಅದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. 
 
ಕಳೆದ ನಾಲ್ಕು ವರ್ಷಗಳ ಹಿಂದೆ ಭೀಕರ ರಸ್ತೆ ಅಪಘಾತಕ್ಕೆ ಪೂರನ್‌ ಸಿಲುಕಿ ಪವಾಡ ರೀತಿಯಲ್ಲಿ ಬದುಕಿದ್ದರು. ಎರಡೂ ಕಾಲುಗಳು ಮುರಿದಿದ್ದವು. ಪೂರನ್‌ ಕೆಲವು ದಿನಗಳು ಆಸ್ಪತ್ರೆಯಲ್ಲೇ ಕಳೆದರು. ಹೀಗಿದ್ದರೂ ನಿಕೋಲಸ್‌ ಪೂರನ್‌ ಹೆದರಲಿಲ್ಲ. 6ತಿಂಗಳು ಕ್ರಿಕೆಟ್‌ ನಿಂದ ದೂರು ಉಳಿದಿದ್ದರು. ಕಠಿಣ ಅಭ್ಯಾಸ ಮೂಲಕ ಮತ್ತೆ ಮರಳಿ ಕ್ರಿಕೆಟ್‌ಗೆ ವಾಪಸ್‌ ಬಂದರು. ಹಿಂದಿಗಿಂತಲೂ ಚೆನ್ನಾಗಿಯೇ ಆಡಿದರು. ಸದ್ಯ ಭಾರತ ವಿರುದ್ಧ ವಿಂಡೀಸ್‌ ಏಕದಿನ ಸರಣಿ ಸೋಲು ಅನುಭವಿಸಿದೆ. ಆದರೆ ಪೂರನ್‌ ಬ್ಯಾಟಿಂಗ್‌ನಿಂದ ಹರಿದ ರನ್‌ಗಳಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 
 
3ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ 23 ಎಸೆತಕ್ಕೆ 29 ರನ್‌, 2ನೇ ಪಂದ್ಯದಲ್ಲಿ 47ಎಸೆತಕ್ಕೆ 75ರನ್‌ ಹಾಗೂ 3ನೇ ಪಂದ್ಯದಲ್ಲಿ 64 ಎಸೆತಕ್ಕೆ 89 ರನ್‌ ಬಾರಿಸಿ ಅಬ್ಬರಿಸಿದ್ದಾರೆ. ಅಂತಿಮ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ಪೂರನ್‌ ಬಳಿಕ  ಮಾಧ್ಯಮದೊಂದಿಗೆ ಮಾತನಾಡುತ್ತಾ ಹಿಂದಿನ ದಿನಗಳನ್ನು ನೆನೆದರು. ಅಪಘಾತದ ನಂತರ ಬಹುತೇಕ ಕ್ರಿಕೆಟ್‌ ಜೀವನವೇ ಮುಗಿದ ಅನುಭವ ಆಗಿತ್ತಂತೆ.
 
ಪೋಲಾರ್ಡ್‌ ನನ್ನ ದೇವರು: “ನಾನು ಕ್ರಿಕೆಟ್‌ಗೆ ವಾಪಸ್‌ ಆಗಲು ಕೈರನ್‌ ಪೊಲಾರ್ಡ್‌ ಕಾರಣ. ಅಪಘಾತದ ಬಳಿಕ ಭರವಸೆ ಕಳೆದು ಕೊಂಡು ಬದುಕು ಕತ್ತಲಾಗಿಸಿಕೊಂಡಿದ್ದ ನನ್ನ ಜೀವನದಲ್ಲಿ ಅವರು ದೇವರಂತೆ ಬಂದರು. ಕ್ರಿಕೆಟ್‌ಗೆ ವಾಪಸ್‌ ಮರಳುವ ತನಕ ನನ್ನ ಜತೆ ಬೆಂಗಾವಲಾಗಿ ನಿಂತರು. ಅವರು ನನ್ನ ಬಾಳಿನಲ್ಲಿ ದೊಡ್ಡಣ್ಣನ ಸ್ಥಾನದಲ್ಲಿ ನಿಲ್ಲುತ್ತಾರೆ. ಮಾತ್ರವಲ್ಲ ತಂದೆಯ ರೀತಿಯ ಸಲಹುವ ಪೋಷಕ. ಅವರಿಂದಾಗಿಯೇ ಇಲ್ಲಿ ತನಕ ಬಂದಿದ್ದೇನೆ. ಪೊಲಾರ್ಡ್‌ ನೀಡಿದ ಅವಕಾಶದಿಂದ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿದೆ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದು ಪೂರನ್‌ ತಿಳಿಸಿದ್ದಾರೆ.
 
 
 
 
 

Find out more: