ಅಂತರಾಷ್ಟ್ರೀಯ ಕ್ರಿಕೆಟ್ ಟೀಂ ಗೆ ಸೆಲೆಕ್ಟ್ ಆಗಲು ಹರಸಾಹಸ ಪಡಬೇಕಾದ ಈ ಸಂದರ್ಭದಲ್ಲಿ ಈ 10 ಕ್ರಿಕೆಟಿಗರು ಅಂತರಾಷ್ಟ್ರೀಯ ಆಟಕ್ಕೆ ಗುಡ್ ಬೈ ಹೇಳಿದ್ದಾರೆ. ಹೌದು, ಯಾರು, ಯಾಕೆ ವಿದಾಯ ಹೇಳಿದ್ದಾರೆ? ಇಲ್ಲಿಯವರೆಗೆ ಅವರ ಫರ್ಫಾಮೆನ್ಸ್ ಹೇಗಿತ್ತು ಎನ್ನುವ ಎಲ್ಲಾ ಲೆಕ್ಕಾಚಾರ ಇಲ್ಲಿದೆ ನೋಡಿ. 
 
ಪ್ರಸಕ್ತ ಸಾಲಿನಲ್ಲಿ ಭಾರತದ ಯುವರಾಜ್ ಸಿಂಗ್ ಸೇರಿದಂತೆ 10 ಪ್ರಮುಖ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈ ಪೈಕಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತುಂಬಲಾರದ ನಷ್ಟವನ್ನು ಅನುಭವಿಸಿದೆ. ಡೇಲ್ ಸ್ಟೇನ್ ಅವರಿಂದ ಹಿಡಿದು, ಹಾಶೀಮ್ ಆಮ್ಲಾ, ಜೆಪಿ ಡ್ಯುಮಿನಿ, ಶೋಹಿಬ್ ಮಲಿಕ್, ಇಮ್ರಾನ್ ಖಾನ್, ಲಸಿತ್ ಮಾಲಿಂಗ, ಸೇರಿದಂತೆ ಬಹುತೇಕರ ವಿದಾಯದಿಂದ ಕ್ರಿಕೆಟ್ ಕೊಂಚ ಕಳೆಗುಂದಿದೆ. 
 
ಭಾರತದ ಎರಡು ಬಾರಿಯ ವಿಶ್ವಕಪ್ ವಿಜೇತ ಹೀರೊ ಯುವರಾಜ್ ಸಿಂಗ್ 2019ನೇ ಸಾಲಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 19 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಯುವಿ 2007 ಟ್ವೆಂಟಿ-20 ವಿಶ್ವಕಪ್ ಹಾಗೂ 2011 ಏಕದಿನ ವಿಶ್ವಕಪ್ ಗೆಲುವಿನಲ್ಲಿ ಗಮನಾರ್ಹ ಪಾತ್ರ ವಹಿಸಿದ್ದರು. 38ರ ಹರೆಯದ ಯುವಿ ಐಪಿಎಲ್‌ನಿಂದಲೂ ದೂರ ಸರಿದಿದ್ದು, ಆಯ್ದ ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ. 304 ಏಕದಿನ ಪಂದ್ಯವನ್ನಾಡಿರುವ ಯುವಿ 14ಶತಕ ಹಾಗೂ 52 ಅರ್ಧಶತಕಗಳ ನೆರವಿನಿಂದ 8701ರನ್ ಪೇರಿಸಿದ್ದಾರೆ. ಹಾಗೆಯೇ 40 ಟೆಸ್ಟ್‌ಗಳಲ್ಲಿ 1900 ರನ್ ಗಳಿಸಿದ್ದಾರೆ.
 
ಶ್ರೀಲಂಕಾ ಹಿರಿಯ ಅನುಭವಿ ವೇಗದ ಬೌಲರ್ ಲಸಿತ್ ಮಾಲಿಂಗ, ಏಕದಿನ ಕ್ರಿಕೆಟ್‌ಗೆ ವಿರಾಮ ಹಾಡಿದ್ದಾರೆ. ಜುಲೈನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಬಳಿಕ 35ರ ಹರೆಯದ ಮಾಲಿಂಗ ಏಕದಿನಕ್ಕೆ ಗುಡ್ ಬೈ ಹಾಡಿದ್ದರು. 220 ಪಂದ್ಯಗಳನ್ನು ಆಡಿರುವ ಮಾಲಿಂಗ ಒಟ್ಟು 338 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಮುತ್ತಯ್ಯ ಮುರಳೀಧರನ್ (523) ಹಾಗೂ ಚಾಮಿಂಡ ವಾಸ್ (399) ಸಾಲಿನಲ್ಲಿ ಗುರುತಿಸಿದ್ದಾರೆ. ಇನ್ನು ಏಕದಿನ ವಿಶ್ವಕಪ್‌ನಲ್ಲಿ ಲಂಕಾ ಪರ ಅತಿ ಹೆಚ್ಚು ವಿಕೆಟ್‌ಗಳ ಸಾಧನೆ ಮಾಡಿದ್ದರು.

Find out more: