ನವದೆಹಲಿ: ಭಾರತದ ಮನೆ ಮನೆಯಲ್ಲೂ ಹಬ್ಬವು ಮನರಂಜಿಸುವುದು ಐಪಿಎಲ್. ಇದೀಗ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯ ಆರಂಭಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಮಾರ್ಚ್‌ 29ರಂದು ಮುಂಬೈನ ವಾಂಖೆಡೆಯಲ್ಲಿ ಶುರುವಾಗುವುದು ಪಕ್ಕಾ ಆಗಿದೆ. 
 
ಇದರ ಕುರಿತು ಮಾಹಿತಿ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್ ಅಧಿಕಾರಿಯೊಬ್ಬರು ಐಪಿಎಲ್‌ 2020ಟೂರ್ನಿಯ ಆರಂಭಿಕ ದಿನಾಂಕವನ್ನು ಮಾರ್ಚ್29ಕ್ಕೆ ನಿಗದಿಪಡಿಸಲಾಗಿದ್ದು ಹಾಲಿ ಚಾಂಪಿಯನ್ಸ್‌ ಮುಂಬೈ ತಂಡಕ್ಕೆ ವಾಂಖೆಡೆನಲ್ಲಿ ತನ್ನ ಮೊದಲ ಪಂದ್ಯವನ್ನಾಡುವ ಅವಕಾಶ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಇದರರ್ಥ ಟೂರ್ನಿಯ ಮೊದಲೆರಡು ಪಂದ್ಯಗಳನ್ನು ಆಡುವ ತಂಡಗಳಿಗೆ ಆಸ್ಟ್ರೇಲಿಯಾ, ಇಂಗ್ಲಿಷ್‌ ಮತ್ತು ನ್ಯೂಜಿಲೆಂಡ್‌ನ ಕೆಲ ಆಟಗಾರರು ಅಲಭ್ಯರಾಗಲಿದ್ದಾರೆ.
 
ಈ ಅವಧಿಯಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್‌ ತಂಡಗಳು ಟಿ20-ಐ ಕ್ರಿಕೆಟ್‌ ಸರಣಿ ಮತ್ತು ಇಂಗ್ಲೆಂಡ್‌-ಶ್ರೀಲಂಕಾ ತಂಡಗಳು ಟೆಸ್ಟ್‌ ಸರಣಿಗಳಲ್ಲಿ ಆಡುವುದರಿಂದ ಪ್ರಥಮಿಕ ಐಪಿಎಲ್‌ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಈ ಎರಡೂ ಸರಣಿಗಳು ಮಾರ್ಚ್‌ 31ಕ್ಕೆ ಮುಕ್ತಾಯವಾಗಲಿದೆ.ಟೂರ್ನಿ ಏಪ್ರಿಲ್‌ 1ರಂದು ಆರಂಭವಾಗಲಿ ಎಂದೇ ನಾವೆಲ್ಲರೂ ಆಶಿಸಿದ್ದೆವು. ಡಬಲ್‌ ಹೆಡರ್‌ ಪಂದ್ಯಗಳ ಮೂಲಕ ವೇಳಾಪಟ್ಟಿಯಲ್ಲಿ ಹೊಂದಾಣಿಕೆ ಮಾಡಿ ಕೊಂಚ ತಡವಾಗಿ ಟೂರ್ನಿ ಆರಂಭಿಸಲು ಐಪಿಎಲ್‌ ಸಂಘಟನಾ ಸಮಿತಿ ನಿರ್ಧರಿಸಲಿ ಎಂದೇ ಬಯಸಿದ್ದೆವು ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
 
"ಮಾರ್ಚ್‌ 29ರಂದು ಆಸ್ಟ್ರೇಲಿಯಾ ಮತ್ತು ನ್ಐಜಿಲೆಂಡ್‌ ನಡುವಣ ಟಿ20 ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಇನ್ನು ಇಂಗ್ಲೆಂಡ್‌ ಮತ್ತು ಶ್ರೀಲಂಕಾ ನಡುವಣ ಟೆಸ್ಟ್‌ ಸರಣಿ ತಾಂತ್ರಿಕವಾಗಿ ಮಾರ್ಚ್‌ 31ರಂದು ಅಂತ್ಯಗೊಳ್ಳಲಿದೆ. ಹೀಗಿರುವಾಗ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ನಿಮ್ಮ ದಿಗ್ಗಜ ಆಟಗಾರರು ಇಲ್ಲದೇನೆ ಆಟ ಆರಂಭಿಸುವುದು ಯಾವ ತಂಡಗಳಿಗೂ ಹಿಡಿಸುವಂಥದ್ದಲ್ಲ. ಆದರೆ ಏಪ್ರಿಲ್‌ 1ರಂದು ಟೂರ್ನಿ ಆರಂಭವಾದರೆ ಪರಿಸ್ಥಿತಿಗಳು ವಿಭಿನ್ನವಾಗಿರಲಿದೆ. ಈ ಬಗ್ಗೆ ಐಪಿಎಲ್‌ನ ಸಂಘಟನಾ ಸಮಿತಿಯು ಅಂತಿಮ ತೀರ್ಮಾನ ಕೈಗೊಳ್ಳಲಿ ಎಂದು ಆಶಿಸುತ್ತೇವೆ," ಎಂದು ಮಾಹಿತಿ ನೀಡಿದ್ದಾರೆ. 
 
ಈ ಭಾರಿಯ ಐಪಿಎಲ್ ಮತ್ತಷ್ಟು ಕಲರ್ ಫುಲ್ ಆಗಿರಲಿದೆ, ಪ್ರಕ್ಷೇಕರಿಗೆ ಆಟದ ಜೊತೆಗೆ ಭರ್ಜರಿ ಮನರಂಜನೆ ಸಿಗಲಿದೆ. ಈಗಾಗಲೇ ಐಪಿಎಲ್ ಪ್ರಾರಂಭ ಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

Find out more: