ಸೆಂಚೂರಿಯನ್: ದಕ್ಷಿಣ ಆಫ್ರಿಕಾದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಫಾಫ್ ಡೂ ಪ್ಲೆಸಿಸ್ ಭಾರತೀಯ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾದ ಸೌರವ್ ಗಂಗೂಲಿ ಯನ್ನು ಒಂದು ಸರಣಿಯ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ.  ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಒಳಗೊಂಡ 4 ತಂಡಗಳ ಚತುಷ್ಕೋನ ಕ್ರಿಕೆಟ್‌ ಸರಣಿ ಆಯೋಜಿಸುವ ಕುರಿತಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಪ್ರಸ್ತಾವನೆ ವಿರುದ್ಧ ದಕ್ಷಣ ಆಫ್ರಿಕಾ ಟೆಸ್ಟ್‌ ತಂಡದ ನಾಯಕ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
 
ಪ್ರತಿ ವರ್ಷ ವಿಶ್ವದ 3 ಅಗ್ರಮಾನ್ಯ ತಂಡಗಳ ಜೊತೆಗೆ ಮತ್ತೊಂದು ತಂಡವನ್ನು ಒಳಗೊಂಡ ಚತುಷ್ಕೋನ ಕ್ರಿಕೆಟ್‌ ಸರಣಿ ಆಯೋಜಿಸುವ ಕುರಿತಾಗಿ ಬಿಸಿಸಿಐನ ಅಧ್ಯಕ್ಷ ಸೌರವ್‌ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಮುಂದಿಟ್ಟಿರುವ ಪ್ರಸ್ತಾವನೆಯನ್ನು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡು'ಪ್ಲೆಸಿಸ್‌ ಟೀಕಿಸಿದ್ದಾರೆ. ಕ್ರಿಕೆಟ್‌ ಆಡುವ ರಾಷ್ಟ್ರಗಳ ಸಂಖ್ಯೆ ಹೆಚ್ಚಾಗಬೇಕು. ಅದರ ಬದಲಿಗೆ ಕೇವಲ ನಾಲ್ಕು ಅಗ್ರಮಾನ್ಯ ರಾಷ್ಟ್ರಗಳಿಗೆ ಕ್ರಿಕೆಟ್‌ ಸೀಮಿತವಾಗಬಾರದು ಎಂದು ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡದ ಮುಂದಾಳು ಡು'ಪ್ಲೆಸಿಸ್‌ ಅಭಿಪ್ರಾಯ ಪಟ್ಟಿದ್ದಾರೆ.
 
ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ 4 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ 107 ರನ್‌ಗಳ ಅದ್ಭುತ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಡು'ಪ್ಲೆಸಿಸ್‌ ಈ ರೀತಿ ಹೇಳಿದ್ದಾರೆ. ಪ್ರತಿ ವರ್ಷ ನಾಲ್ಕು ತಂಡಗಳನ್ನು ಒಳಗೊಂಡ 'ಸೂಪರ್‌ ಸೀರೀಸ್‌' ಏಕದಿನ ಕ್ರಿಕೆಟ್‌ ಸರಣಿ ಆಯೋಜನೆ ಕುರಿತಾಗಿ ಅವರ ಅಭಿಪ್ರಾಯವನ್ನು ಕೇಳಿದ ಸಂದರ್ಭದಲ್ಲಿ ಇಂಥದ್ದೊಂದು ಆಲೋಚನೆಯನ್ನು ಟೀಕಿಸಿದ್ದಾರೆ. ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಚತುಷ್ಕೋನ ಕ್ರಿಕೆಟ್‌ ಸರಣಿಯಲ್ಲಿನ ಬಿಗ್‌ ತ್ರೀ ತಂಡಗಳಾಗಿದ್ದು, ಇದರೊಟ್ಟಿಗೆ ಒಂದು ತಂಡ ಸೇರಿ ಪ್ರತಿ ವರ್ಷ ಪೈಪೋಟಿ ನಡೆಸುವುದು ಹೊಸ ಕಲ್ಪನೆಯಾಗಿದೆ. ಆದರೆ, ಈಬಗ್ಗೆ ಯಾವುದೇ ಅಧಿಕೃತ ಚರ್ಚೆಗಳು ಈವರೆಗೆ ನಡೆದಿಲ್ಲ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಈ ಬಗ್ಗೆ ಐಸಿಸಿ ಜೊತೆಗೆ ಚರ್ಚಿಸಲು ಸಿದ್ಧವಿರುವುದಾಗಿ ಹೇಳಿಕೊಂಡಿತ್ತು. ಅನೇಕ ರಾಷ್ಟ್ರಗಳ ಕ್ರಿಕೆಟ್ ಗೆ ಮುಂದಾಗುವಂತೆ ಮಾಡಬೇಕಿದೆ ಎಂದಿದ್ದಾರೆ.
 
 

Find out more: