ಮುಂಬೈ: ಚೇಸಿಂಗ್ ಕಿಂಗ್ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿಯು 2019ರಲ್ಲಿ ಸೆಂಚುರಿಗಳ ಜೊತೆಗೆ ಅತಿಹೆಚ್ಚು ರನ್ ಗಳಿಸಿ ಟೀಂ ಇಂಡಿಯಾವನ್ನು ನಂಬರ್ ಒನ್ ಸ್ತಾನದಲ್ಲಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿಯ ಬಹುಕೋಟಿಯ ಐಷಾರಾಮಿ ಕಾರು ಇದೀಗ ಅನಾಥವಾಗಿದೆ. ಹೌದು, ಅದಕ್ಕೆ ಕಾರಣವೇನು ಗೊತ್ತಾ!?
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವಾರು ಕಾರುಗಳ ಒಡೆಯ, ಆದರೆ ಕೊಹ್ಲಿ ಒಡೆತನ ಬರೋಬ್ಬರಿ 3 ಕೋಟಿ ರೂ ಮೌಲ್ಯದ ಐಷರಾಮಿ ಕಾರೊಂದು ಠಾಣೆಯೊಂದರಲ್ಲಿ ಅನಾಥವಾಗಿ ಬಿದ್ದಿದ್ದೆ ಎಂದರೆ ನಂಬಲು ಕಷ್ಟವಾಗಲಿದೆ. ಆದರೆ ಇದು ನಿಜ. ವಿರಾಟ್ ಕೊಹ್ಲಿ ಮೊದಲೇ ಆಡಿ ಇಂಡಿಯಾ ಸಂಸ್ಥೆಯ ರಾಯಬಾರಿ, ಅವರ ಬಳಿ ಆಡಿ ಉತ್ಪಾದನೆಯ ಬಹುತೇಕ ಕಾರುಗಳ ಸಂಗ್ರಹವೇ ಇದೆ ಎಂದರೆ ತಪ್ಪಗಲಾರದು. ಅದರಲ್ಲಿ ರೂ. 3 ಕೋಟಿ ಮೌಲ್ಯದ ಆರ್8 ವಿ10 ಮಾದರಿ ಕಾರು ಕೂಡ ಒಂದು.
ಕೊಹ್ಲಿ ಕಾರನ್ನು ಬೇರೆಯವರಿಗೆ ಮಾರಿದ್ದರು. ಆದರೆ ಅದು ಕಾರಣಾಂತರಗಳಿಂದ ಪೋಲೀಸ್ ಠಾಣೆಯಲ್ಲಿತ್ತು. ಪ್ರಕರಣದ ವಿಚಾರಣೆ ಸಂಬಂಧದಡಿ ಐಷಾರಾಮಿ ಕಾರನ್ನು ವಶಕ್ಕೆ ಪಡೆದಿರುವ ಥಾಣೆ ಪೊಲೀಸರು ನಕಲಿ ಕಾರ್ ಸೆಂಟರ್ ವಂಚನೆ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಆದರೆ ಕೊಹ್ಲಿಯವರು ಕಾರು ಮಾರಾಟ ಮಾಡಿದ್ದರು ಕೂಡಾ ಕಾರಿನ ನೋಂದಣಿಯನ್ನು ಸಾಗರ್ ಹೆಸರಿಗೆ ವರ್ಗಾವಣೆ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.
ಇದರಿಂದ ಆಡಿ ಕಾರು ಇದುವರೆಗೂ ಕೊಹ್ಲಿ ಹೆಸರಿನಲ್ಲೇ ಇದ್ದು, ಸಾಗರ್ ಮಾಡಿರುವ ಮೋಸದ ವ್ಯವಹಾರದಲ್ಲಿ ಕೊಹ್ಲಿ ಕೂಡಾ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಹೀಗಾಗಿ ರೂ.3 ಕೋಟಿ ಮೌಲ್ಯದ ಕಾರು ಅನಾಥವಾಗಿ ಥಾಣೆ ಪೊಲೀಸ್ ಠಾಣೆಯ ಎದರು ತುಕ್ಕುಹಿಡಿಯುತ್ತಿದೆ. ಕಳೆದ 2 ವರ್ಷಗಳ ಹಿಂದಷ್ಟೇ ಇದೇ ಕಾರಿನ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ಕೊಹ್ಲಿ ಮುಂಬೈ, ದೆಹಲಿ ಸೇರಿದಂತೆ ಹೋದ ಕಡೆಗೆಲ್ಲಾ ಇದೇ ಕಾರಿನಲ್ಲಿ ಜಾಲಿ ರೈಡ್ ಮಾಡಿ ಕಾರು ಪ್ರಿಯರಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದ್ದರು. ಆದರೆ ಅದೇ ಕಾರು ಇದೀಗ ಗುಜುರಿಯಲ್ಲಿ ಕೊಳೆಯುತ್ತಿದೆ. ಕೊಹ್ಲಿ ಈಗಲಾದರೂ ಎಚ್ಚತ್ತುಕೊಳ್ಳುತ್ತಾರಾ ಇಲ್ಲವಾ ಎಂಬುದು ಕಾದು ನೋಡಬೇಕಾಗಿದೆ.