ದುಬೈ: 2019ರ ಐಸಿಸಿ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಮೂವರು ರೇಸ್‌ ನಲ್ಲಿದ್ದಾರೆ. ಹೌದು, ಐಸಿಸಿ ಅಂತರಾಷ್ಟ್ರೀಯ ಮಟ್ಟದ ಅತಿದೊಡ್ಡ ಪ್ರಶಸ್ತಿಯೂ ಆಗಿದ್ದು ಅದನ್ನು ಪಡೆಯಲು ಮೂರು ದೈತ್ಯ ಆಟಗಾರರು ಸ್ಪರ್ಧೆಯಲ್ಲಿ ದ್ದಾರೆ. ಹೌದು, ಅದರಲ್ಲಿ ಭಾರತದ ರೋಹಿತ್‌ ಶರ್ಮ ಕೂಡ ಸೇರಿದ್ದಾರೆ. ಉಳಿದ ಇಬ್ಬರೆಂದರೆ ಆಸ್ಟ್ರೇಲಿಯದ ವೇಗಿ ಪ್ಯಾಟ್‌ ಕಮಿನ್ಸ್‌ ಮತ್ತು ಇಂಗ್ಲೆಂಡಿನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌. ಇದೀಗ ಪ್ರಶಸ್ತಿ ಆಯ್ಕೆ ಕುತೂಹಲ ಮೂಡಿಸಿದೆ. 
 
ಹಿಟ್ ಮ್ಯಾನ್, ಟೀಂ ಇಂಡಿಯಾದ ವೈಸ್ ಕ್ಯಾಪ್ಟನ್ ರೋಹಿತ್‌ ಶರ್ಮ ಟೆಸ್ಟ್‌ ಕ್ರಿಕೆಟಿನ ಆರಂಭಿಕನಾಗಿ ಭಡ್ತಿ ಪಡೆದು ಮಿಂಚಿದ ವರ್ಷ 2019. ಕೇವಲ 5 ಟೆಸ್ಟ್‌ಗಳಲ್ಲಿ 92.66ರ ಸರಾಸರಿಯೊಂದಿಗೆ 556 ರನ್‌ ಪೇರಿಸಿದ್ದು ರೋಹಿತ್‌ ಸಾಧನೆ. 28 ಏಕದಿನ ಪಂದ್ಯಗಳಿಂದ 1,490 ರನ್‌ ಬಾರಿಸಿ ಮೆರೆದಾಡಿದರು. ವಿಶ್ವಕಪ್‌ ಒಂದರಲ್ಲಿ ಸರ್ವಾಧಿಕ ದಾಖಲೆಯ 5 ಶತಕ ಬಾರಿಸಿದ ವಿಶ್ವದಾಖಲೆಗೂ ಪಾತ್ರರಾಗಿದ್ದಾರೆ. ಹೌದು, 2019 ನೇ ವರ್ಷದಲ್ಲಿ ಹಿಟ್ ಮ್ಯಾನ್ ಹತ್ತು ಹಲವಾರು ದಾಖಲೆ ಬರೆದಿದ್ದಾರೆ. ಅದೃಷ್ಟದ ವರ್ಷವೂ ಹೌದು. 
 
ಪ್ಯಾಟ್‌ ಕಮಿನ್ಸ್‌ 2019ರ ಅಂತಾ ರಾಷ್ಟ್ರೀಯ ಪಂದ್ಯಗಳಿಂದ ಒಟ್ಟು 99 ವಿಕೆಟ್‌ ಹಾರಿಸಿ ಅಗ್ರಸ್ಥಾನ ಅಲಂಕರಿ ಸಿದ್ದಾರೆ. ಟೆಸ್ಟ್‌ನಲ್ಲಿ 59, ಏಕದಿನದಲ್ಲಿ 31 ಹಾಗೂ ಟಿ20ಯಲ್ಲಿ 9 ವಿಕೆಟ್‌ ಕಿತ್ತ ಸಾಧನೆ ಕಮಿನ್ಸ್‌ ಅವರದು. ವಿಶ್ವಕಪ್‌ನಲ್ಲೂ ಮೆರೆದಾಡಿದ ಕಮಿನ್ಸ್‌ 10 ಪಂದ್ಯಗಳಿಂದ 14 ವಿಕೆಟ್‌ ಉರುಳಿಸಿದ್ದರು. ಬೆನ್‌ ಸ್ಟೋಕ್ಸ್‌ ತಮ್ಮ ಆಲ್‌ರೌಂಡ್‌ ಸಾಹಸದಿಂದ ಇಂಗ್ಲೆಂಡಿಗೆ ಮೊದಲ ವಿಶ್ವಕಪ್‌ ತಂದಿತ್ತದ್ದು ಈಗ ಇತಿಹಾಸ. 2019ರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,500 ರನ್ನಿನ ಜತೆಯಲ್ಲೇ 30 ವಿಕೆಟ್‌ ಉರುಳಿಸಿದ್ದಾರೆ. ಅಂತಿಮ ವಿಕೆಟಿಗೆ ಜಾಕ್‌ ಲೀಚ್‌ ಜತೆಗೂಡಿ ಆ್ಯಶಸ್‌ ಸರಣಿಯ ಹೇಡಿಂಗ್ಲೆ ಟೆಸ್ಟ್‌ ಪಂದ್ಯವನ್ನು ಗೆಲ್ಲಿಸಿದ್ದು ಸ್ಟೋಕ್ಸ್‌ ಅವರ ಮತ್ತೂಂದು ಅಮೋಘ ನಿರ್ವಹಣೆ. ಹಾಗೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದೀಗ ಐಸಿಸಿ ಪ್ರಶಸ್ತಿ ಯಾರಿಗೆ ಒಲಿಯುತ್ತದೆ ಎಂಬುದು ಕಾದು ನೋಡಬೇಕಾಗಿದೆ. 

Find out more: