ನವದೆಹಲಿ: ಒಂದು ಓವರ್ ಗೆ ಎರಡು-ಮೂರು ಸಿಕ್ಸ್ ಭಾರಿಸಿವುದೇ ಕಷ್ಟ ಇನ್ನು ಓವರ್ ನ 6 ಎಸೆತಗಳನ್ನು ಸಿಕ್ಸರ್ ಭಾರಿಸಿ ಸಿಕ್ಸರ್ ಸಿಂಗ್ ಯುವರಾಜ್ ಇದೀಗ ನೂತನವಾಗಿ ಈ  ಸಾಧನೆಗೈದ ಕಾರ್ಟರ್ ವೆಲ್ ರಿಗೆ ಸ್ವಾಗತ ಕೋರಿದ್ದು  ತುಂಬಾ ವಿಶೇಷವಾಗಿದೆ. 
 
ನ್ಯೂಜಿಲೆಂಡ್‌ ನ ದೇಶಿ ಕ್ರಿಕೆಟ್‌ ಲೀಗ್‌ ಟೂರ್ನಿಯಾದ ಸೂಪರ್‌ ಸ್ಮ್ಯಾಷ್‌ ಟಿ20 ಲೀಗ್‌ನಲ್ಲಿ ಇತ್ತೀಚೆಗಷ್ಟೇ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸಿದ ದಾಖಲೆ ಬರೆದ ಕಿವೀಸ್‌ ನ ಯುವ ಎಡಗೈ ಬ್ಯಾಟ್ಸ್‌ಮನ್‌ ಲಿಯೋ ಕಾರ್ಟರ್‌ ಅವರನ್ನು ಸಿಕ್ಸರ್‌ ಕಿಂಗ್‌ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆ. ಹೌದು, 2007ರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ವೇಗಿ ಸ್ಟುವರ್ಟ್‌ ಬ್ರಾಡ್‌ ಬೌಲಿಂಗ್‌ ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ಬರೆದಿದ್ದ ಯುವರಾಜ್‌ ಸಿಂಗ್‌, ಇದೀಗ ತಮ್ಮಂತೆ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡ ಲಿಲೋ ಕಾರ್ಟರ್ ಅವರನ್ನು '6 ಸಿಕ್ಸಸ್‌' ಕ್ಲಬ್‌ ವಿಶೇಷ ರೀತಿಯಲ್ಲಿ ಬರಮಾಡಿಕೊಂಡಿದ್ದಾರೆ. ಸೂಪರ್‌ ಸ್ಮ್ಯಾಷ್‌ ಟೂರ್ನಿಯಲ್ಲಿ ಕ್ಯಾಂಟರ್ಬರಿ ತಂಡದ ಪರ ಆಡುವ ಲಿಯೋ ಕಾರ್ಟರ್‌ ನಾರ್ದನ್‌ ನೈಟ್ಸ್‌ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್‌ ಆಂಟನ್‌ ಡೆವ್ಚಿಚ್‌ ಅವರ ಬೌಲಿಂಗ್‌ನಲ್ಲಿ 6 ಸಿಕ್ಸರ್‌ಗಳನ್ನು ಚಚ್ಚಿದ್ದರು.
 
ಈ ಬಗ್ಗೆ ಟ್ವಿಟರ್‌ ಮೂಲಕ ಸಂದೇಶ ರವಾನಿಸಿರುವ ಯುವಿ, ಕಾರ್ಟರ್‌ಗೆ "ವೆಲ್‌ ಕಮ್‌ ಟು ಸಿಕ್ಸ್‌ 6 ಕ್ಲಬ್‌" ಎಂದು ಸ್ವಾಗತಿಸಿದ್ದಾರೆ. ಹೌದು, ಇದಕ್ಕೆ ಟಾಮ್‌ ಅಂಡ್‌ ಜೆರಿ ಕಾರ್ಟೂನ್‌ ಚಿತ್ರವನ್ನು ಅಳವಡಿಸಿ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಟಾಮ್‌ (ಬೆಕ್ಕು), ಜೆರಿ (ಇಲಿ) ಕೈ ಕುಲುಕುತ್ತಿದೆ. ಈ ಚಿತ್ರದೊಂದಿಗೆ, "ವೆಲ್‌ ಕಮ್‌ ಟು ಸಿಕ್ಸ್‌ ಸಿಕ್ಸಸ್‌ ಕ್ಲಬ್‌! ಅವು ಅದ್ಭುತ ಹೊಡೆತಗಳು, ಈಗ ನಿಮ್ಮ ಜರ್ಸಿ ಮೇಲೆ ಹಸ್ತಾಕ್ಷರ ಹಾಕಿ ಅದನ್ನು ಗೌರವಯುತವಾಗಿ ಡೆವ್ಚಿಚ್‌ ಗೆ ಉಡುಗೊರೆಯಾಗಿ ನೀಡಿ," ಎಂದು ಯುವಿ ಸಲಹೆ ನೀಡಿದ್ದಾರೆ.
 
 
 
 
 

Find out more: