ರಾಜ್ ಕೋಟ್: ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಥಿರ ಹಾಗೂ ಗುಣಮಟ್ಟದ ಆಟಗಾರ ಪೂಜಾರ ಇದೀಗ ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ 50 ಶತಕಗಳನ್ನು ಬಾರಿಸಿದ ಒಂಬತ್ತನೇ ಭಾರತೀಯ ಬ್ಯಾಟ್ಸ್‌ ಮನ್ ಎಂಬ ಹಿರಿಮೆಗೆ ಚೇತೇಶ್ವರ ಪೂಜಾರ ಭಾಜನವಾಗಿದ್ದಾರೆ. ಕರ್ನಾಟಕ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿರುವ ಪೂಜಾರ, ಅಮೋಘ ಶತಕದ ಮೂಲಕ ಸ್ಮರಣೀಯ ಸಾಧನೆ ಮೆರೆದರು. ಹೌದು, ಆ ಬಗೆಗಿನ ಡೀಟೆಲ್ಸ್ ಇಲ್ಲಿದೆ ನೋಡಿ. 
 
 
 ಸೌರಾಷ್ಟ್ರ  ತಂಡವು ಕರ್ನಾಟಕ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ 'ಎ' ಮತ್ತು 'ಬಿ' ಗುಂಪಿನ 5ನೇ ಸುತ್ತಿನ ಪಂದ್ಯದ ಮೊದಲ ದಿನದಾಟದಲ್ಲಿ ಸಂಪೂರ್ಣ ಅಧಿಪತ್ಯವನ್ನು ಸ್ಥಾಪಿಸಿದೆ. ನಿಸ್ವಾರ್ಥ ಸೇವೆಯ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಮಾದರಿ. ಕರ್ನಾಟಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಪೂಜಾರ ಹಾಗೂ ಜಾಕ್ಸನ್, ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಇದರಿಂದಾಗಿ ಪಂದ್ಯದಲ್ಲಿ ತಿರುಗಿ ಬೀಳಲು ಅವಕಾಶವೇ ದೊರಕಲಿಲ್ಲ. ದಿನದಂತ್ಯಕ್ಕೆ ಮುರಿಯದ ಮೂರನೇ ವಿಕೆಟ್‌ಗೆ 263 ರನ್‌ಗಳ ಬೃಹತ್ ಜತೆಯಾಟ ನೀಡಿರುವ ಪೂಜಾರ-ಜಾಕ್ಸನ್ ಜೋಡಿಯು ಸ್ಮರಣೀಯ ಇನ್ನಿಂಗ್ಸ್ ಕಟ್ಟಿದರು.
238 ಎಸೆತಗಳನ್ನು ಎದುರಿಸಿರುವ ಪೂಜಾರ 17 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 162 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡುತ್ತಿರುವ ಜಾಕ್ಸನ್ 191 ಎಸೆತಗಳಲ್ಲಿ 4 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 99 ರನ್ ಗಳಿಸಿ ಶತಕದತ್ತ ಮುನ್ನುಗ್ಗಿದ್ದಾರೆ. 
 
ಪೂಜಾರ ದಾಖಲೆಯ 50ನೇ ಫಸ್ಟ್ ಕ್ಲಾಸ್ ಸೆಂಚುರಿ ಬಾಧಿಸಿದ್ದಾರೆಂದು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಬಾರಿಸಿದ ಹೆಗ್ಗಳಿಕೆಗೆ ಚೇತೇಶ್ವರ ಪೂಜಾರ ಭಾಜನರಾದರು. ಮಾಜಿ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಸುನಿಲ್ ಗವಾಸ್ಕರ್ ಸಾಲಿಗೆ ಸೇರಿರುವ ಪೂಜಾರ, ಈ ಸಾಧನೆ ಮಾಡಿದ ಭಾರತದ ಒಂಬತ್ತನೇ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನವಾಗಿದ್ದಾರೆ. 198ನೇ ಪಂದ್ಯದಲ್ಲಿ ಪೂಜಾರ ಸಾಧನೆಗೈದಿದ್ದಾರೆ.

Find out more: