ಮುಂಬೈ: ಟೀಮ್‌ ಇಂಡಿಯಾ ಕ್ಯಾಪ್ಟನ್‌ ಚೇಸಿಂಗ್ ಕಿಂಗ್ ವಿರಾಟ್‌ ಕೊಹ್ಲಿ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ 2ನೇ ಹಣಹಣಿಗೂ ಮುನ್ನ ಅತ್ಯಾಧುನಿಕ ಕಾರು ಖರೀದಿಸಿದ್ದಾರೆ. ಮುಂಬೈನಲ್ಲಿ ಗುರುವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಜರ್ಮನಿ ಮೂಲದ ಐಶಾರಾಮಿ ಕಾರು ತಯಾರಿಕಾ ಸಂಸ್ಥೆ 'ಆಡಿ'ಯ ನೂತನ ಮಾಡಲ್‌ 'ಆಡಿ ಕ್ಯೂ8 ಕ್ರಾಸ್‌ ಓವರ್‌ ಎಸ್‌ಯುವಿ' ಬಿಡುಗಡೆ ಮಾಡಿದರು. ಅಷ್ಟೇ ಅಲ್ಲದೆ ಭಾರತದಲ್ಲಿ ಈ ಐಶಾರಾಮಿ ಕಾರನ್ನು ಖರೀದಿಸಿದ ಮೊತ್ತ ಮೊದಲ ಗ್ರಾಹಕ ಎನಿಸಿಕೊಂಡಿದ್ದಾರೆ ಕೂಡ. ಅದರ ಬೆಲೆಯಷ್ಟು ಗೊತ್ತಾ!? 
 
 ಆಡಿ ಕ್ಯೂ7, ಆಡಿ ಆರ್‌ಎಸ್‌5, ಆಡಿ ಆರ್‌ಎಸ್‌6, ಎ8 ಎಲ್‌, ಆರ್‌8 ವಿ10 ಎಲ್‌ಎಮ್‌ಎಕ್ಸ್‌, ಬೆಂಟ್ಲಿ ಕಾಂಟಿನೆಂಟಲ್‌ ಜಿಟಿ ಮತ್ತು ರೇಂಜ್‌ ರೋವರ್‌ ವೋಗ್‌ನಂತಹ ಐಶಾರಾಮಿ ಕಾರುಗಳ ಮಾಲೀಕನಾಗಿರುವ ಕಿಂಗ್‌ ಕೊಹ್ಲಿ, ಇದೀಗ ಬರೋಬ್ಬರಿ 1.33 ಕೋಟಿ ರೂ. ಬೆಲೆಯ ಆಡಿ ಕ್ಯೂ8 ಎಸ್‌ಯುವಿ ಕಾರನ್ನು ತಮ್ಮ ಗ್ಯಾರೇಜ್‌ ಗೆ ಸೇರಿಸಿಕೊಂಡಿದ್ದಾರೆ.3.0 ಲೀಟರ್‌ ಟಿ.ಎಫ್‌.ಎಸ್‌.ಐ ಪೆಟ್ರೋಲ್‌ ಇಂಜಿನ್‌ ಹೊಂದಿರುವ ಆಡಿ ಕ್ಯೂ8 ಎಸ್‌.ಯು.ವಿ ಕಾರು ಗರಿಷ್ಠ 340 ಹಾರ್ಸ್‌ಪವರ್‌ ನೀಡುವ ಸಾಮರ್ಥ್ಯ ಹೊಂದಿದೆ. ಈ ಹೊಸ ಕಾರಿನಲ್ಲಿ ಎಲ್ಲಿಗೆ ಹೋಗುವಿರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, "ಸಮಯ ಸಿಕ್ಕಾಗ ಮಡದಿ ಅನುಷ್ಕಾ ಜೊತೆಗೆ ಮುಂಬೈನ ಸೀ ಲಿಂಕ್‌ನಲ್ಲಿ ಒಂದು ಸುತ್ತು ಬರುವೆ," ಎಂದು ಹೇಳಿದ್ದಾರೆ.ವಿರಾಟ್‌ ಕೊಹ್ಲಿ ಖರೀದಿಸಿದ ಅತ್ಯಾಧುನಿಕ ಕಾರಿನ ಗುಣಲಕ್ಷಣಗಳೇನಿವೆ ಗೊತ್ತಾ! 
 
​ಆಡಿ ಕ್ಯೂ8ನ ಡಿಜಿಟಲ್‌ ತಂತ್ರಜ್ಞಾನದ ಲಕ್ಷಣಗಳು:-
* ಎಂಎಂಐ ಟಚ್‌ ರೆಸ್ಪಾನ್ಸ್‌ - 2 ಸ್ಕ್ರೀನ್‌, ಪ್ರಥಮ ಸ್ಕ್ರೀನ್‌ನ ಉದ್ದಗಲ (25.65 ಸೆಂ.ಮೀ,10.1 ಸೆಂ.ಮೀ.), 2ನೇ ಸ್ಕ್ರೀನ್‌ (21.84 ಸೆಂ.ಮೀ., 8.6 ಸೆಂ.ಮೀ.).
* ಫ್ರೀ ಟೆಕ್ಸ್ಟ್‌ ಸರ್ಚ್‌.
* ಸ್ಪೀಡ್‌ ಡೈಲಾಗ್‌ ಸಿಸ್ಟಮ್‌, ಸಾಮಾನ್ಯ ಭಾಷೆಯಲ್ಲೇ ಸಂವಹನ.
* ಹ್ಯಾಂಡ್‌ವ್ರೈಟಿಂಗ್‌ ಗುರುತಿಸುವ ತಂತ್ರಜ್ಞಾನ.
* ಫೋನ್‌ ಬಾಕ್ಸ್‌ ಮತ್ತು ವೈರ್‌ಲೆಸ್‌ ಚಾರ್ಜಿಂಗ್‌.

Find out more: