ರಾಜ್ ಕೋಟ್: ಆಸೀಸ್ ವಿರುದ್ಧದ 2ನೇ ಹಾಗೂ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ 36 ರನ್ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ ನಲ್ಲಿ ಅಬ್ಬರಿಸಿ ಆಲ್ ರೌಂಡರ್ ಪ್ರದರ್ಶನ ನೀಡುವ ಮೂಲಕ ವಾಂಖೆಡೆ ಸೋಲಿನ ಸೇಡನ್ನು ತೀರಿಸಿ ಕೊಂಡಿದ್ದಾರೆ. ಇದೀಗ ಸರಣಿ ಸಮಬಲ 1-1 ಆಗಿದ್ದು ಕ್ಲೈಮ್ಯಾಕ್ಸ್ ಕುತೂಹಲ ಕೆರಳಿಸಿದೆ. 
 
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ, 2ನೇ ಪಂದ್ಯದಲ್ಲಿ ತಿರುಗೇಟು ನೀಡಿದೆ. ಆಸ್ಟ್ರೇಲಿಯಾಗೆ 341 ರನ್ ಟಾರ್ಗೆಟ್ ನೀಡಿದ ಭಾರತ ಆರಂಭದಲ್ಲಿ ಒತ್ತಡ ಹೇರಿತು. ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ನಾಯಕ ಆರೋನ್ ಫಿಂಚ್ ಮೊದಲ ಪಂದ್ಯದ ರೀತಿಯಲ್ಲಿ ಅಬ್ಬರಿಸಲಿಲ್ಲ. ಅಬ್ಬರಿಸಲು ಭಾರತೀಯ ಬೌಲರ್ ಅವಕಾಶ ನೀಡಲಿಲ್ಲ. ಡೇವಿಡ್ ವಾರ್ನರ್ 15 ರನ್ ಸಿಡಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಪ್ರಾರಂಭದಲ್ಲಿ ಹಿಡಿತ ಸಾಧಿಸಿದ್ದು ಪ್ಲಸ್ ಪಾಯಿಂಟ್ ಆಯಿತು. 
 
ಟೀಂ ಇಂಡಿಯಾ ಪರ ರೋಹಿತ್ 44, ಶಿಖರ್ ದವನ್ 96, ವಿರಾಟ್ 78, ಕನ್ನಡಿಗ ರಾಹುಲ್ 80, ರವೀಂದ್ರ ಜಡೇಜಾ 20 ರನ್ ಗಳಿಸಿ ಮಿಂಚಿದರು. ಸ್ಮಿತ್ 98 ರನ್ ಸಿಡಿಸಿ ಔಟಾದರು.ಸ್ಟಾರ್ಕ್ ಕೂಡ ಸೈನಿಗೆ ವಿಕೆಟ್ ಒಪ್ಪಿಸಿದರು. ಜಡೇಜಾ, ಕುಲದೀಪ್, ಶೈನಿ ತಲಾ 2 ವಿಕೆಟ್, ಬೂಮ್ರಾ 1, ಶಮಿ 3 ವಿಕೆಟ್ ಪಡೆದ ಮಿಂಚಿದರು. ಎಲ್ಲಾ ವಿಕೆಟ್ ಪತನದೊಂದಿಗೆ ಆಸ್ಟ್ರೇಲಿಯಾ 49.1 ಓವರ್‌ಗಳಲ್ಲಿ 304 ರನ್‌ ಗೆ ಆಲೌಟ್ ಆಯಿತು. ಈ ಮೂಲಕ ಭಾರತ 36 ರನ್ ಗೆಲುವು ಸಾಧಿಸಿತು
 
ಒಟ್ಟಾರೆ 3 ಪಂದ್ಯಗಳ ಏಕದಿನ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ. ಇದೀಗ ಜನವರಿ 19 ರಂದು ಬೆಂಗಳೂರಿನಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದ್ದು, ಕ್ಲೈಮ್ಯಾಕ್ಸ್ ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

Find out more: