ಹಾರ್ದಿಕ್ ನತಾಶಾ ತಾರಾಜೋಡಿಯು ನೆಟ್ಟಿಗರನ್ನು ಸೆಳೆದಿದ್ದು ಇಂಟರ್ ನೆಟ್ ತುಂಬೆಲ್ಲಾ ಮೀಮ್ಸ್ ಗಳು ಹರಿದಾಡುತ್ತಿದೆ. ನತಾಶಾರೊಟ್ಟಿಗೆ ಹಾರ್ದಿಕ್ ಪಾಂಡ್ಯ ತೆಗೆದುಕೊಂಡಿರುವ ಸೆಲ್ಫಿ ಫೋಟೋದಲ್ಲಿ ನತಶಾ ಮುಖವನ್ನು ತೆಗೆದು, ಅದಕ್ಕೆ ಭಿಕ್ಷುಕಿಯಿಂದ ಗಾಯಕಿಯಾದ ರಾನು ಮಂಡಲ್ ಮುಖ ಸೇರಿಸಿ ಎಡಿಟ್ ಮಾಡಿರುವ ಮೀಮ್ಸ್ ಹರಿಬಿಟ್ಟು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಬಿಕಿನಿ ಧರಿಸಿ ಭಾವಿ ಪತಿ ಹಾರ್ದಿಕ್ ಜತೆ ಬೀಚ್ನಲ್ಲಿ ನಿಂತು ತೆಗೆಸಿಕೊಂಡಿದ್ದ ಫೋಟೋವನ್ನು ನತಾಶಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗಷ್ಟೇ ಶೇರ್ ಮಾಡಿಕೊಂಡಿದ್ದರು. ಅದನ್ನು ನೆಟ್ಟಿಗರು ತಮ್ಮದೇ ರಿತಿಯಲ್ಲಿ ಎಡಿಟ್ ಮಾಡಿ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿ ಸಾಕಷ್ಟು ಹಿಟ್ ಪಡೆದುಕೊಂಡಿದೆ, ಅಷ್ಟೇ ಟ್ರೋಲ್ ಗೆ ಗುರಿಯಾಗಿದೆ. ಹೌದು, ಹಿಟ್ ಶಾಟ್, ಬಿಗ್ ಶಾಟ್ ಮ್ಯಾನ್ ಎಂದೆಲ್ಲಾ ಮ್ಯಾನ್, ಸೂಪರ್ ಜೋಡಿ, ಬಹುತ್ ಅಚ್ಚಾ ಹೈ ಎಂದೆಲ್ಲಾ ಕಮೆಂಟ್ ಗಳು ಹರಿದು ಬಂದಿವೆ.
ಅಂದಹಾಗೆ ‘ಮೈ ತೆರಾ, ತು ಮೇರಿ, ಜಾನೇ ಸಾರಾ ಹಿಂದುಸ್ತಾನ್. 01.01.2020, ಎಂಗೇಜ್ಡ್’ ಎಂದು ಬರೆದು ಹಾರ್ದಿಕ್ ಪಾಂಡ್ಯ ಬುಧವಾರ ಸಂಜೆ (ವರ್ಷದ ಮೊದಲ ದಿನ) ಇನ್ ಸ್ಟಾಗ್ರಾಂ ಪೋಸ್ಟ್ನಲ್ಲಿ ನಿಶ್ಚಿತಾರ್ಥವನ್ನು ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು. ಸಹಸ್ರಾರು ಲೈಕ್ಸ್ ಗಳು ಬಂದಿದ್ದವು.