ಚೆನ್ನೈ: ಮಾಜಿ ಕೂಲ್ ಕ್ಯಾಪ್ಟನ್ ಧೋನಿಯ ಚೆನ್ನೈ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಇಲ್ಲಿನ ಅಂತರಾಷ್ಟ್ರೀಯ ಚಿದಂಬರಂ ಕ್ರೀಡಾಂಗಣಕ್ಕೆ ಎದುರಾಗಿದ್ದ ಕಂಟಕ ದೂರವಾಗಲಿದ್ದು, ಮುಂಬರುವ ಐಪಿಎಲ್‌ ಟೂರ್ನಿಗೆ ನಿಷೇಧಿತ 3 ಸ್ಟ್ಯಾಂಡ್ಸ್‌ ಗಳ ಬಳಕೆಗೆ ಗ್ರೀನ್‌ ಸಿಗ್ನಲ್‌ ಸಿಗುವುದು ಬಹುತೇಕ ಖಾತ್ರಿಯಾಗಿದ್ದು, ಚೆನ್ನೈ ಅಭಿಮಾನಿಗಳಿಗೆ ದಿಲ್ ಖುಷ್ ಆಗಿದೆ. 
 
ದೇಶದ ಅತ್ಯಂತ ಜನಪ್ರಿಯ ಕ್ರೀಡಾಂಗಣಗಳಲ್ಲಿ ಚೆಪಾಕ್‌ ನ ಎಂಎ ಚಿದಂಬರಂ ಕ್ರೀಡಾಂಗಣ ಕೂಡ ಒಂದು. ಆದರೆ ಕಳೆದ ಕೆಲ ವರ್ಷಗಳಿಂದ ಈ ಕ್ರೀಡಾಂಗಣ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಹಲವು ಅಂತಾರಾಷ್ಟ್ರೀಯ ಮತ್ತು ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಎಂಎ ಚಿದಂಬರಂ ಕ್ರೀಡಾಂಗಣ ಕೆಲ ಕಾನೂನು ಗೊಂದಲ ಕಾರಣ ತನ್ನ ಐ, ಜೆ ಮತ್ತು ಕೆ ಸ್ಟ್ಯಾಂಡ್ಸ್‌ಗಳ ಅಧಿಕಾರವನ್ನು ಕಳೆದುಕೊಂಡಿತ್ತು.
 
ವಿವಾದ ಕಾರಣ 2019ರ ಐಪಿಎಲ್‌ ಪಂದ್ಯಗಳು ಮತ್ತು 2016ರ ಟಿ20 ವಿಶ್ವಕಪ್‌ ಪಂದ್ಯಗಳನ್ನು ಆಯೋಜಿಸುವುದರಿಂದ ವಂಚಿತವಾಗಿದ್ದ ಎಂಎ ಚಿದಂಬರಂ ಕ್ರೀಡಾಂಗಣ ಐಪಿಎಲ್‌ 2020  ಟೂರ್ನಿಯಲ್ಲಿ ಮರಳಿ ಹೌಸ್‌ಫುಲ್‌ ಆಗುವ ಸೌಭಾಗ್ಯ ಪಡೆಯಲಿದೆ. ಇದೀಗ ಎಲ್ಲಾ ಸರಿಹೋಗಲಿದ್ದು ಇನ್ನು ಮುಂದೆ ಆಟಕ್ಕೆ ಲಭ್ಯ ಆಗೋದು ಪಕ್ಕಾ ಆಗಿದೆ. 
 
ನವೀಕರಣ ಕೆಲಸಕ್ಕಾಗಿ ಮರಳಿ ಸಿಎಂಡಿಎಗೆ ಅರ್ಜಿ ಸಲ್ಲಿಸಲಿದ್ದೇವೆ. ಕ್ರೀಡಾಂಗಣದ ಜಿಮ್‌ ಪಾರಂಪರಿಕ ಕಟ್ಟವಾಗದೇ ಇರುವ ಕಾರಣ ಅನುಮತಿ ಲಭ್ಯವಾಗುವ ಎಂಬ ವಿಶ್ವಾಸವಿದೆ. ಹಳೆಯ ಸ್ಕ್ವಾಶ್‌ ಕೋರ್ಟ್‌ಗಳು ಮತ್ತು ಬಿಲಿಯರ್ಡ್ಸ್‌ ಕೊಠಡಿಗಳು, ಕ್ಲಬ್‌ನ ಕಚೇರಿ, ಎಮ್‌ಸಿಸಿ ಕಾಂಪ್ಲೆಕ್ಸ್‌ನಲ್ಲಿರುವ 3ಕಟ್ಟಡಗಳು ಮಾತ್ರವೇ ಪಾರಂಪರಿಕ ಕಟ್ಟಡಗಳು ಎಂದು ಆರ್‌ ರಮೇಶ್‌ ತಿಳಿಸಿದ್ದಾರೆ. 
 
ಫೆಬ್ರವರಿ ಹೊತ್ತಿಗೆ ಜಿಮ್‌ ನೆಲಸಮಗೊಳಿಸಿ ಐಪಿಎಲ್‌ ಶುರುವಾಗುವ ಮೊದಲು ಮೂರು ಸ್ಟ್ಯಾಂಡ್ಸ್‌ ಗಳನ್ನು ಮರಳಿ ತೆರೆಯಲಾಗುವುದು. ಇನ್ನಮುಂದೆ 3 ಸ್ಟ್ಯಾಂಡ್ಸ್‌ ಗಳ ಕಾರಣಕ್ಕೆ ಅಂತಾರಾಷ್ಟ್ರೀಯ ಮತ್ತು ಐಪಿಎಲ್‌ ಪಂದ್ಯಗಳು ಚೆನ್ನೈನ ಕೈತಪ್ಪಬಾರದು. ರಾಜ್ಯದ ಕ್ರಿಕೆಟ್‌ ಅಭಿಮಾನಿಗಳೇ ಇಲ್ಲಿ ವಿಜೇತರು. ಚೆಪಾಕ್‌ ನಲ್ಲಿ ನಡೆಯಲಿರುವ ದೊಡ್ಡ ಪಂದ್ಯಗಳಿಗೆ ಮುಂದಿನ ದಿನಗಳಲ್ಲಿ ಪ್ರೇಕ್ಷಕರು ಹೌಸ್‌ ಫುಲ್‌ ಆಗಲಿದೆ ಎಂದು ತಿಳಿಸಿದ್ದಾರೆ.
 

Find out more: