ವೆಲ್ಲಿಂಗ್ಟನ್: ಕಿವೀಸ್ ವಿರುದ್ಧದ ಗೆಲುವಿನಲ್ಲಿ ಟೀಂ ಇಂಡಿಯಾ ಪ್ಯೂಚರ್ ಬೌಲಿಂಗ್ ಸ್ಟಾರ್ ಶಾದೂರ್ಲ್ ಠಾಕೂರ್ ಮಿಂಚಿದರು. ಕೊನೆ ಓವರ್ ನಲ್ಲಿ ಕಿವೀಸ್ 4 ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು 'ಟೈ'ನಲ್ಲಿ ಅಂತ್ಯಗೊಳಿಸಿ ಸೂಪರ್ ಓವರ್‌ನತ್ತ ಸಾಗಿಸಿದ ಎಲ್ಲ ಶ್ರೇಯಸ್ಸು ಭಾರತದ ಯುವ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವರಿಗೆ ಸಲ್ಲಬೇಕು. ಕೊನೆಯ ಓವರ್‌ನಲ್ಲಿ ಕಿವೀಸ್ ಗೆಲುವಿಗೆ ಬೇಕಾಗಿರುವುದು ಬರಿ ಏಳು ರನ್. ಬರೋಬ್ಬರಿ ಏಳು ವಿಕೆಟ್‌ಗಳು ಕೈಯಲ್ಲಿತ್ತು. ಅಷ್ಟೇ ಯಾಕೆ ಸೆಟ್ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ 39ಎಸೆತಗಳಲ್ಲಿ 59ರನ್ ಗಳಿಸಿ ಅಬ್ಬರಿಸುತ್ತಿದ್ದರು. ಆದರೆ ಅತಿ ಒತ್ತಡವನ್ನು ಪರಿಸ್ಥಿತಿಯಲ್ಲೂ ನಿಖರ ದಾಳಿ ಸಂಘಟಿಸಿದ ಶಾರ್ದೂಲ್, ಕಿವೀಸ್ ಗೆಲುವನ್ನು ನಿರಾಕರಿಸಿದರು.
ಶಾರ್ದೂಲ್ ಫೈನಲ್ ಓವರ್ ಹೀಗಿದೆ: W, 4, W, 1, W, 1W
ಮೊದಲ ಎಸೆತದಲ್ಲೇ ನ್ಯೂಜಿಲೆಂಡ್ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ 24 ಹೊರದಬ್ಬಿದ ಶಾರ್ದೂಲ್ ಠಾಕೂರ್ ನಿರೀಕ್ಷೆ ಮೂಡಿಸಿದರು. ನಿಮ್ಮ ಮಾಹಿತಿಗಾಗಿ, ಕಳೆದ ಪಂದ್ಯದಲ್ಲೂ ಟೇಲರ್ ಅವರನ್ನು ಮೊಹಮ್ಮದ್ ಶಮಿ ಕೊನೆಯ ಎಸೆತದಲ್ಲಿ ಕ್ಲೀನ್ ಬೌಲ್ಡ್ ಮಾಡಿದ್ದರು.ಎರಡನೇ ಎಸೆತದಲ್ಲಿ ಡ್ಯಾರೆಲ್ ಮಿಚೆಲ್ ಬೌಂಡರಿ ಬಾರಿಸಿದರು. ಆದರೆ ಮೂರನೇ ಎಸೆತದಲ್ಲಿ ಕೆಎಲ್ ರಾಹುಲ್ ಮಿಂಚಿನ ವಿಕೆಟ್ ಕೀಪಿಂಗ್ ನೆರವಿನಿಂದ ಟಿಮ್ ಸೀಫರ್ಟ್‌ರನ್ನು ರನೌಟ್ ಬಲೆಗೆ ಸಿಲುಕಿಸಿದರು. ಅಂತಿಮ ಮೂರು ಎಸೆತಗಳಲ್ಲಿ ಕಿವೀಸ್ ಗೆಲುವಿಗೆ ಮೂರು ರನ್ ಗಳ ಅವಶ್ಯಕತೆಯಿತ್ತು. ನಾಲ್ಕನೇಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್ ಒಂದು ರನ್ ಗಳಿಸಿದರು. ಐದನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಡ್ಯಾರೆಲ್ ಮಿಚೆಲ್ (4)ಔಟಾಗುವ ಮೂಲಕ ಪಂದ್ಯವು ರೋಚಕ ಹಂತವನ್ನು ತಲುಪಿತು. ಕೊನೆಯ ಎಸೆತದಲ್ಲಿ ಕಿವೀಸ್ ಗೆಲುವಿಗೆ ಎರಡು ರನ್‌ಗಳ ಅವಶ್ಯಕತೆಯಿತ್ತು.
ಆದರೆ ಎರಡನೇ ರನ್ ಗಳಿಸುವ ಯತ್ನದಲ್ಲಿ ಸ್ಯಾಂಟ್ನರ್ ರನೌಟ್ ಆಗುವುದರೊಂದಿಗೆ ಪಂದ್ಯವು ಥ್ರಿಲ್ಲಿಂಗ್ ಟೈನಲ್ಲಿ ಅಂತ್ಯಗೊಂಡಿತ್ತು. ಬ್ಯಾಟಿಂಗ್ ನಲ್ಲೂ 20ರನ್ ಗಳಿಸಿದ್ದ ಶಾರ್ದೂಲ್ ಮಿಂಚಿದ್ದರು. ಅಂತಿಮವಾಗಿ 33ರನ್ ತೆತ್ತು ಎರಡು ವಿಕೆಟ್ ಕಬಳಿಸಿದರು. ಅಷ್ಟೇ ಯಾಕೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು ಸಂಭ್ರಮಿಸಿದರು.