ಜೋಹಾನ್ಸ್ ಬರ್ಗ್: ಪಾಕಿಸ್ತಾನ ಟಿ20 ಕ್ರಿಕೆಟ್ ನಲ್ಲಿ ಉತ್ತಮ ಸ್ಥಾನವನ್ನೇನೋ ಪಡೆದಿದೆ ಆದರೆ ಸುಖಾಸುಮ್ಮನೆ ಜಗಳಕ್ಕೆ ಬರೋದರಿಂದ ಯಾವ ತಂಡವು ಆಡಲಿಚ್ಚಿಸುವುದಿಲ್ಲ. ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಸ್ಥಾನಮಾನವನ್ನು ಹೊಂದಿರುವ ತಂಡವೊಂದು ಪಾಕಿಸ್ತಾನ ವಿರುದ್ಧದ ಸರಣಿಗೆ ಪಾಕಿಸ್ತಾನಕ್ಕೆ ಹೋಗೋದಿಲ್ಲ ಎಂದು ಹೇಳಿಕೆ ನೀಡಿದೆ. ಅದು ಯಾವುದು ಗೊತ್ತಾ! ಯಾಕೆ ಗೊತ್ತಾ!? ಮುಂದೆ ಓದಿ... 
 
ಒಂದರ ಹಿಂದೆ ಒಂದರಂತೆ ಸಾಲು ಸಾಲು ಕ್ರಿಕೆಟ್‌ ಸರಣಿಗಳನ್ನು ಆಡುತ್ತಿರುವ ಕಾರಣ ಮಾರ್ಚ್‌ ನಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆ ಸ್ಪಷ್ಟಪಡಿಸಿದೆ. ಮಾರ್ಚ್‌ ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದು, ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನಾಡಲಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ  ಪ್ರವಾಸ ಕೈಗೊಂಡು ಅಷ್ಟೇ ಪಂದ್ಯಗಳ ಟಿ20 ಸರಣಿಯನ್ನು ಆಡುವಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯ ನೀಡಿದ್ದ ಆಹ್ವಾನವನ್ನು ಹರಿಣ ಪಡೆ ತಿರಸ್ಕರಿಸಿದೆ. ಬಿಗಿಯಾದ ವೇಳಾ ಪಟ್ಟಿ ಕಾರಣ ಮಾರ್ಚ್‌ ನಲ್ಲಿ ಪಾಕಿಸ್ತಾನ ಪ್ರವಾಸ ಸಾಧ್ಯವಿಲ್ಲ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಸ್ಪಷ್ಟಪಡಿಸಿದೆ.
 
ಆದರೆ, ಈ ಸರಣಿಯನ್ನು ಎರಡೂ ತಂಡಗಳಿಗೆ ಸೂಕ್ತವಾದ ಸಮಯದಲ್ಲಿ ಆಯೋಜಿಸುವಂತೆ ಕ್ರಿಕೆಟ್‌ ಸೌತ್‌ ಆಫ್ರಿಕಾ ಹೇಳಿರುವುದಾಗಿ ಇ.ಎಸ್‌.ಪಿ.ಎನ್‌ ಕ್ರಿಕ್‌ ಇನ್‌ ಫೋ ವರದಿ ಮಾಡಿದೆ. ದಕ್ಷಿಣ ಆಫ್ರಿಕಾ ತಂಡ ಮಾರ್ಚ್‌ 12ರಿಂದ 18ರವರೆಗೆ ಭಾರತದಲ್ಲಿ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನಾಡಲಿದೆ. ಇದಾದ ಬಳಿಕ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ರಾವಲಪಿಂಡಿಯಲ್ಲಿ ಮೂರು ಟಿ20 ಪಂದ್ಯಗಳ ಸರಣಿಯನ್ನಾಡಿಸಲು ಪ್ರಸ್ತಾಪಿಸಲಾಗಿತ್ತು.
 
ದಕ್ಷಿಣ ಆಫ್ರಿಕಾ ತಂಡ ಸದ್ಯ ತವರು ನೆಲದಲ್ಲಿ ಇಂಗ್ಲೆಂಡ್‌ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡುತ್ತಿದ್ದು, ಮೊದಲ ಪಂದ್ಯದಲ್ಲಿ 1 ರನ್‌ ರೋಚಕ ಗೆಲುವಿನೊಂಡಿಗೆ ಮುನ್ನಡೆ ಪಡೆದುಕೊಂಡಿದೆ. ಇದಕ್ಕೂ ಮೊದಲು 4 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಿ 103 ಅಂತರದಲ್ಲಿ ಸೋತ ನಂತರ 3 ಪಂದದ್ಯಗಳ ಒಡಿಐ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತ್ತು.

Find out more: