ಬೆಂಗಳೂರು: ನಿರ್ಣಾಯಕ ಹಣಾಹಣಿಯಲ್ಲಿ ಬರೋಡ ತಂಡವನ್ನು ಮಣಿಸಿದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ 86ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯಿತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 9ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಕರುಣ್ ನಾಯರ್ ಪಡೆ 8 ವಿಕೆಟ್​ಗಳಿಂದ ಪ್ರವಾಸಿ ಬರೋಡ ತಂಡವನ್ನು ಸೋಲಿಸಿತು. ಕ್ವಾರ್ಟರ್​ಫೈನಲ್​ಗೇರಲು ಕನಿಷ್ಠ ಇನಿಂಗ್ಸ್ ಮುನ್ನಡೆ ಗಳಿಸುವ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಕರ್ನಾಟಕ, ಸರ್ವಾಂಗೀಣ ನಿರ್ವಹಣೆಯೊಂದಿಗೆ 3ನೇ ದಿನದಾಟದಲ್ಲೇ ಗೆಲುವು ಒಲಿಸಿಕೊಂಡಿತು. ಹೌದುಮ ಈ ಮೂಲಕ ದಾಖಲೆಯನ್ನು ಬರೆದಿದೆ. 

 
ಬರೋಡ ನೀಡಿದ 149 ರನ್ ಗೆಲುವಿನ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ, ನಾಯಕ ಕರುಣ್ ನಾಯರ್ (71*ರನ್, 126 ಎಸೆತ, 7 ಬೌಂಡರಿ) ಅರ್ಧಶತಕದಾಸರೆ ಹಾಗೂ ಕೆವಿ ಸಿದ್ದಾರ್ಥ್ (29*ರನ್, 68 ಎಸೆತ, 3 ಬೌಂಡರಿ, 1 ಸಿಕ್ಸರ್) ಜತೆಗೂಡಿ ಮುರಿಯದ 3ನೇ ವಿಕೆಟ್​ಗೆ ಸೇರಿಸಿದ 91 ರನ್ ಜತೆಯಾಟದ ನೆರವಿನಿಂದ 44.4 ಓವರ್​ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಜಯದ ನಗೆ ಬೀರಿತು. ಇದಕ್ಕೂ ಮೊದಲು 5 ವಿಕೆಟ್​ಗೆ 208 ರನ್​ಗಳಿಂದ ದಿನದಾಟ ಆರಂಭಿಸಿದ ಬರೋಡ ತಂಡ, ಪ್ರಸಿದ್ಧ ಕೃಷ್ಣ (45ಕ್ಕೆ 4), ರೋನಿತ್ ಮೋರೆ (68ಕ್ಕೆ 3) ಜೋಡಿಯ ಮಾರಕ ದಾಳಿಗೆ ನಲುಗಿ 296 ರನ್​ಗಳಿಗೆ ಸರ್ವಪತನ ಕಂಡಿತು. ಬರೋಡ ಮೊದಲ ಇನಿಂಗ್ಸ್​ನಲ್ಲಿ 85 ರನ್ ಗಳಿಸಿದ್ದರೆ, ಕರ್ನಾಟಕ 233 ರನ್ ಗಳಿಸಿ 148 ರನ್ ಮುನ್ನಡೆ ಸಾಧಿಸಿತ್ತು.
 
ನಿರಾಸೆ ಮೂಡಿಸಿದ ಪಡಿಕಲ್: ಸಾಧಾರಣ ಮೊತ್ತ ಬೆನ್ನಟ್ಟಿದ ಕರ್ನಾಟಕ ತಂಡ ಆರಂಭದಲ್ಲೇ ದೇವದತ್ ಪಡಿಕಲ್ (6) ವಿಕೆಟ್ ಕಳೆದುಕೊಂಡಿತ್ತು. ಒಟ್ಟಾರೆ ಕರ್ನಾಟಕ ಎಂಟರ ಘಟಕ್ಕೆ ಎಂಟ್ರಿ ಕೊಟ್ಟಿದ್ದು ಕಪ್ ಎತ್ತಿ ಹಿಡಿಯೋದು ಒಂದೇ ಬಾಕಿ. ಈಗಾಗಲೇ 8 ಬಾರಿ ಚಾಂಪಿಯನ್ ಆಗಿರುವ ಕರ್ನಾಟಕ ಇದೀಗ ಮತ್ತೊಮ್ಮೆ ಚಾಂಪಿಯನ್ ಆಗಿ ಮೆರೆಯಲು ಭರ್ಜರಿಯಾಗಿ ಸಿದ್ಧವಾಗಿದೆ.

Find out more: