ನವದೆಹಲಿ: ವಿಶ್ವ ಕ್ರಿಕೆಟ್‌ ನ 360° ಬ್ಯಾಟ್ಸ್ ಮನ್, ಹೊಡಿ ಬಡಿ ಆಟಗಾರ ಎಬಿ ಡಿವಿಲಿಯರ್ಸ್ ತಮ್ಮ 36ನೇ ಹುಟ್ಟುಹಬ್ಬವನ್ನ  ಆಚರಿಸಿಕೊಂಡಿದ್ದಾರೆ. ಎಬಿಡಿ ಬರ್ತ​ಡೇ ಅಂದೇ ಸೌತ್ ಆಫ್ರಿಕಾದ ಹೆಡ್​ ಕೋಚ್​ ಮಾರ್ಕ್ ಬೌಚರ್, ಎಬಿಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್​ ನೀಡಿದ್ದು ಅದೇನೆಂದು ನಾವ್ ಹೇಳ್ತೀವಿ ನೋಡಿ. 
 
ವಿಶ್ವಕ್ರಿಕೆಟ್‌ ನ ಸ್ಫೋಟಕ ಬ್ಯಾಟ್ಸ್‌ಮನ್ ಇದೀಗ ಮತ್ತೇ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡದಲ್ಲಿ ಅಬ್ಬರಿಸಲು ಸಿದ್ಧವಾಗಿದ್ದಾರೆ. ಮಿಸ್ಟರ್ 360° ಬ್ಯಾಟಿಂಗ್​ ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರನ್ನ ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಎಬಿ ಡಿವಿಲಿಯರ್ಸ್ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ ಬ್ಯಾಕ್ ಮಾಡುವ ಸಾಧ್ಯತೆಯಿದೆ ಎಂಬ ಸುದ್ದಿ ನೀಡಿದ್ದಾರೆ. ಎಲ್ಲ ಮಾದರಿಯಲ್ಲೂ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದ ಡಿವಿಲಿಯರ್ಸ್‌, 2018ರ ಐಪಿಎಲ್ ಬಳಿಕ ಅನಿರೀಕ್ಷಿತವೆಂಬಂತೆ 23 ಮೇ 2018ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ್ದರು. ಆಸ್ಟ್ರೇಲಿಯಾ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಎಬಿಡಿ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡಲು ನಿವೃತ್ತಿಯಿಂದ ಹೊರಬರಲಿದ್ದಾರೆ ಎನ್ನಲಾಗಿದೆ. ಇದನ್ನ ಸ್ವತಃ ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಚರ್ ಖಚಿತ ಮಾಹಿತಿ ನೀಡಿದ್ದಾರೆ. 
 
ಪ್ರಸ್ತುತ ವಿಶ್ವದಾದ್ಯಂತ ಟಿ20 ಲೀಗ್ ​​​ಗಳಲ್ಲಿ ಕ್ರಿಕೆಟ್ ಆಡುತ್ತಿರುವ ಎಬಿ ಡಿವಿಲಿಯರ್ಸ್. 2019ರ ಏಕದಿನ ವಿಶ್ವಕಪ್​​​ ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡಲು ಮುಂದಾಗಿದ್ದರು. ಆದರೆ,​ ಎಬಿಡಿಗೆ ಕ್ರಿಕೆಟ್ ಸೌತ್ ಆಫ್ರಿಕಾ ಮತ್ತು ಟೀಮ್ ಮ್ಯಾನೇಜ್ ​ಮೆಂಟ್​ತಲೆಕೆಡಿಸಿಕೊಳ್ಳದ ಕಾರಣ ವಿಶ್ವಕಪ್​ ಆಡುವ ಕನಸು ನನಸಾಗಲಿಲ್ಲ. ಅಂಥದ್ದು ಟಿ20 ವಿಶ್ವಕಪ್​​ ನಲ್ಲಿ ಆಡುವರಾ ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಆದರೆ, ಈ ಬಗ್ಗೆ ಸ್ವತಃ ದಕ್ಷಿಣ ಆಫ್ರಿಕಾ ತಂಡದ ಕೋಚ್ ಬೌಚರ್, ಈ ಬಾರಿ ಡಿವಿಲಿಯರ್ಸ್ ಕಮ್​ಬ್ಯಾಕ್​ಗೆ ಯಾವುದೇ ಅಡ್ಡಿ ಆತಂಕ ಎದುರಾಗೋದಿಲ್ಲ ಅಂತ ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮತ್ತೆ ತಂಡಕ್ಕೆ ಕರೆತರಲು ಕೋಚ್ ಬೌಚರ್ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

Find out more: