ವೆಲ್ಲಿಂಗ್ಟನ್: ವಿಶ್ವ ಬೆಸ್ಟ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಪಡೆದಿರುವ ಕೊಹ್ಲಿ ಹಾಗೂ ಬೆಸ್ಟ್ ಟೆಸ್ಟ್ ಬ್ಯಾಟ್ಸ್ಮನ್ ಪೂಜಾರ ಅವರ ವಿಕೆಟ್ ಪಡೆಯುವುದು ಅಷ್ಟು ಸುಲಭದ ಮಾತಲ್ಲ, ಆದರೆ ಪ್ರಸ್ತುತ  ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುತ್ತಿರುವವರ ಪೈಕಿ ಅತಿ ಎತ್ತರದ ಕ್ರಿಕೆಟಿರ್‌ ಎಂಬ ಖ್ಯಾತಿ ಪಡೆದ ನ್ಯೂಜಿಲೆಂಡ್ ವೇಗದ ಬೌಲರ್  ಕೈಲ್‌ ಜೇಮಿಸನ್, ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡಿ ಕಿಂಗ್‌ ಕೊಹ್ಲಿ ವಿಕೆಟ್‌ ಕೂಡ ಪಡೆದಿದ್ದಾರೆ. ಗೇಮ್ ಪ್ಲಾನ್ ಕೂಡ ಬಿಚ್ಚಿಟ್ಟಿದ್ದಾರೆ. 
 
ಟೀಮ್‌ ಇಂಡಿಯಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿ ಮೂಲಕ ನ್ಯೂಜಿಲೆಂಡ್‌ ತಂಡಕ್ಕೆ ಪದಾರ್ಪಣೆ ಮಾಡಿದ ಯುವ ವೇಗದ ಬೌಲರ್‌ ಕೈಲ್‌ ಜೇಮಿಸ್ಸನ್‌, ಇದೀಗ ಟೆಸ್ಟ್‌ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೂ ಚೇತೇಶ್ವರ್‌ ಪೂಜಾರ ಮತ್ತು ವಿರಾಟ್‌ ಕೊಹ್ಲಿ ಅವರಂತಹ ವಿಶ್ವ ಶ್ರೇಷ್ಠ ಬ್ಯಾಟ್ಸ್‌ ಮನ್‌ ಗಳನ್ನು ಔಟ್‌ ಮಾಡಿ ಅಬ್ಬರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ನ್ಯೂಜಿಲೆಂಡ್‌ ನ ಅತಿ ಎತ್ತರದ ಬೌಲರ್‌ ಎಂಬ ಖ್ಯಾತಿ ಪಡೆದುಕೊಂಡಿರುವ 6.8ಅಡಿ ಎತ್ತರ ಬಲಗೈ ವೇಗಿ, ತಮ್ಮ ಲೈನ್‌ ಅಂಡ್‌ ಲೆನ್ತ್‌ ಹಾಗೂ ಹೆಚ್ಚುವರಿ ಬೌನ್ಸ್‌ ಮೂಲಕ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಕಬ್ಬಿಣದ ಕಡಲೆಯಾಗಿದ್ದಾರೆ. ಇಲ್ಲಿನ ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲೇ 3ವಿಕೆಟ್‌ ಪಡೆದು ಭಾರತ ತಂಡ 55ಓವರ್‌ಗಳಲ್ಲಿ 5ವಿಕೆಟ್‌ಗೆ 122ರನ್‌ ಗೆ ಕಡಿವಾಣವಾಕಿದೆ. 
 
ಬಲಗೈ ವೇಗದ ಬೌಲರ್‌ ಕೈಲ್‌ ಜೇಮಿಸನ್‌ ತಮ್ಮ ಎತ್ತರವನ್ನು ಬಳಕೆ ಮಾಡಿ ಹೆಚ್ಚುವರಿ ಬೌನ್ಸ್‌ ತರುವ ಸಾಮರ್ಥ್ಯ ಪಡೆದಿದ್ದಾರೆ. ಇದರಿಂದಲೇ ಭಾರತೀಯ ಬ್ಯಾಟ್ಸ್‌ಮನ್‌ಗಳ ಎದುರು ಯಶಸ್ಸು ಗಳಿಸಿದ್ದಾರೆ.ಹೌದು, "ಬ್ಯಾಟ್ಸ್‌ ಮನ್‌ ಗಳನ್ನು ಮುಂದೆ ಬಂದು ಆಡುವಂತೆ ಮಾಡಿ ಹೆಚ್ಚುವರಿ ಬೌನ್ಸ್‌ ಬಳಕೆ ಮಾಡುವುದು ನನ್ನ ಪಾತ್ರ. ಜೊತೆಗೆ ವೇಗ, ಸ್ವಿಂಗ್‌ ಮತ್ತು ಬೌನ್ಸ್‌ ಗೆ ಪಿಚ್‌ ನೆರವಾಗುತ್ತಿತ್ತು.ಹೀಗಾಗಿ ಉತ್ತಮ ಸ್ಥಳದಲ್ಲಿ ಚೆಂಡನ್ನು ಎಸೆಯುವುದೇ ನಮ್ಮ ಗೇಮ್‌ ಪ್ಲಾನ್‌ ಆಗಿತ್ತು. ತಾಳ್ಮೆಯಿಂದ ಅದನ್ನು ಮಾಡಿದ್ದೇ ಯಶಸ್ಸಿಗೆ ಕಾರಣ," ಎಂದು ಜೇಮಿಸನ್‌ ಹೇಳಿದ್ದಾರೆ.

Find out more: