ಪಾಕಿಸ್ತಾನದ ಗೌರವ ಪೌರತ್ವ ಪಡೆದುಕೊಳ್ಳಲು ಸಜ್ಜಾಗಿರುವ ವೆಸ್ಟ್ ಇಂಡೀಸ್ ನ ಮಾಜಿ ಆಲ್ ರೌಂಡರ್ ಡರೆನ್ ಸಾಮಿಗೆ ಇದೀಗ ಪಾಕ್ ನ ಅತ್ಯುನ್ನತ ನಾಗರೀಕ ಪ್ರಶಸ್ತಿಯೂ ಲಭ್ಯವಾಗಲಿದ್ದು, ಪಾಕ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ. ಅಷ್ಟು ದೊಡ್ಡ ಪ್ರಶಸ್ತಿಯನ್ನು ನೀಡಲು ಕಾರಣವಾದರೂ ಏನು ಗೊತ್ತಾ, ಮುಂದೆ ಓದಿ.
ಪಾಕಿಸ್ತಾನ್ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಪೇಶಾವರ್ ಝಾಲ್ಮಿ ತಂಡವನ್ನು ಮುನ್ನಡೆಸುತ್ತಿರುವ ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಡರೆನ್ ಸಾಮಿ, ಇದೀಗ ಪಾಕಿಸ್ತಾನವನ್ನು ತಮ್ಮ ಎರಡನೇ ಮನೆಯನ್ನಾಗಿಸಿಕೊಂಡಿದ್ದಾರೆ. ಪಿ.ಎಸ್.ಎಲ್ ಆರಂಭದಿಂದಲೂ ಟೂರ್ನಿಯ ಭಾಗವಾಗಿರುವ 36 ವರ್ಷದ ಕ್ರಿಕೆಟರ್, ಪಾಕಿಸ್ತಾನ ಕ್ರಿಕೆಟ್ ಆಡಲು ಈಗ ಸುರಕ್ಷಿತ ತಾಣ ಎಂದು ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪಾಕ್ ಪ್ರವಾಸ ಕೈಗೊಂಡ ವಿಶ್ವ ಇಲೆವೆನ್ ತಂಡದಲ್ಲೂ ಸಾಮಿ ಮುಂದಿದ್ದರು.ಇದೀಗ, ಪಾಕ್ ನಲ್ಲಿ ಕ್ರಿಕೆಟ್ ಮರುಜೀವ ಪಡೆಯುವಂತೆ ಮಾಡುವ ಕಡೆಗೆ ಗಣನೀಯ ಕೊಡುಗೆ ನೀಡಿದ ಕೆರಿಬಿಯನ್ ಆಟಗಾರನಿಗೆ ಪಾಕಿಸ್ತಾನ ಸರಕಾರ ಅಲ್ಲಿನ ಗೌರವ ಪೌರತ್ವ ನೀಡುವ ಜೊತೆಗೆ ಅಲ್ಲಿನ ಅತ್ಯುನ್ನತ ನಾಗರೀಯ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದೆ.
ಒಬ್ಬ ವಿದೇಶಿ ಆಟಗಾರನಾಗಿ ಟೂರ್ನಿಯಲ್ಲಿ ಪಾಲ್ಗೊಂಡು ಈಗ ನಮ್ಮವರಾಗಿ ಹೊರಹೊಮ್ಮಿದ್ದಾರೆ. "ಡರೆನ್ ಸಾಮಿ ಅವರಿಗೆ ಗೌರವ ಪಾಕಿಸ್ತಾನ ಪೌರತ್ವ ನೀಡುವಂತೆ ಮನವಿ ಮಾಡಿದ್ದೇವೆ. ಅವರ ಅರ್ಜಿ ರಾಷ್ಟ್ರಪತಿಗಳ ಟೇಬಲ್ ಮೇಲಿದೆ," ಎಂದಿದ್ದರು.ಪಿ.ಎಸ್.ಎಲ್ 2020 ಟೂರ್ನಿಯ ಬಳಿಕ ಮಾರ್ಚ್ 23ರಂದು ಪಾಕಿಸ್ತಾನದ ಅತ್ಯುತ್ತಮ ನಾಗರೀಕ ಪ್ರಶಸ್ತಿ ಆಗಿರುವ 'ನಿಶಾನ್-ಎ-ಹೈದರ್' ನೀಡಿ ಡರೆನ್ ಸಾಮಿಗೆ ಗೌರವಿಸಲು ನಿರ್ಧರಿಸಲಾಗಿದೆ. ಪಾಕ್ ರಾಷ್ಟ್ರಪತಿ ಆರಿಫ್ ಅಲ್ವಿ ಈ ಪ್ರಶಸ್ತಿ ನೀಡಲಿದ್ದಾರೆ. ಈ ಬಗ್ಗೆ ಸಾಮಿ ತಮ್ಮ ಭಾವನೆಯನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ. "ನಾಗರೀಕ ಪ್ರಶಸ್ತಿ ಸ್ವೀಕರಿಸುತ್ತಿರುವುದು ನಿಜಕ್ಕೂ ಗೌರವದ ಸಂಗತಿ. 2017ರಲ್ಲಿ ಒಂದೊಳ್ಳೆ ಕೆಲಸದ ಕಡೆಗೆ ಸಣ್ಣ ಹೆಜ್ಜೆಯನ್ನಿಟ್ಟಿದ್ದೆವು, ಅದು ನಮ್ಮನ್ನು ಈಗ ಇಲ್ಲಿಗೆ ಕರೆತಂದಿದೆ. ಈ ಯಶಸ್ಸಿನ ಹಿಂದೆ ಎಲ್ಲಾ ವಿದೇಶಿ ಕ್ರಿಕೆಟಿಗರ ಕೊಡುಗೆ ಇದೆ. ಧನ್ಯವಾದಗಳು ಪಾಕಿಸ್ತಾನ ಎಂದಿದ್ದಾರೆ.