ಇಸ್ಲಮಾಬಾದ್​: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನ ಮಾಜಿ ನಾಯಕ ಮತ್ತು ಆಟಗಾರ ಶಾಹೀದ್​ ಅಫ್ರಿದಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಪ್ರಧಾನಿಯಾಗಿ ಅಧಿಕಾರದಲ್ಲಿ ಇರುವವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸರಣಿ ಒಪ್ಪಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮೋದಿ ನೆಗೆಟಿವ್ ಥಿಂಕರ್ ಎಂದು ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. 
 
ಪಾಕಿಸ್ತಾನ ಕ್ರಿಕೆಟ್​ ನಿಂದ ಶಾಹಿದ್ ಅಫ್ರಿದಿ ಯನ್ನು ಸಂದರ್ಶನ ಮಾಡಲಾಗಿತ್ತು. ಈ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಪ್ರಾರಂಭ ಆಗಬಹುದು ಎಂದೆನಿಸುತ್ತಿದೆಯಾ ಎಂದು ಪ್ರಶ್ನೆ ಕೇಳಿದಾಗ ಉತ್ತರಿಸಿದ ಅವರು, ಭಾರತದಲ್ಲಿ ಮೋದಿ ಅಧಿಕಾರದಲ್ಲಿ ಇರುವವರೆಗೂ ಯಾವುದೇ ನಿರೀಕ್ಷೆ ಇಲ್ಲ. ಪಾಕಿಸ್ತಾನಕ್ಕೆ ಭಾರತದಿಂದ ಈ ಬಗ್ಗೆ ಪ್ರತಿಕ್ರಿಯೆ ಬರುವುದೂ ಇಲ್ಲ ಎಂದು ಉತ್ತರಿಸಿದ್ದಾರೆ. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಆಗಿ ಅಧಿಕಾರ ಪಡೆದಾಗಿನಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಾಳಾಗಿದೆ ಎಂದು ಅಫ್ರಿದಿ ಆರೋಪಿಸಿದ್ದಾರೆ. 
 
ಹೌದು, ಮೋದಿ ನೆಗೆಟಿವ್ ಥಿಂಕರ್ ಅದಕ್ಕಾಗಿಯೇ ಅವರು ಅಧಿಕಾರಕ್ಕೆ ಬಂದಾಗಿನಿಂದ (2014ರಿಂದ) ಇಲ್ಲಿಯವರೆಗೆ ದ್ವೀ ಪಕ್ಷೀಯ ಸರಣಿಗಳು ನಡೆದೇ ಇಲ್ಲ. ೌಭಾರತೀಯರೂ ಸೇರಿ ನಾವೆಲ್ಲರೂ ನರೇಂದ್ರ ಮೋದಿಯವರ ಯೋಚನಾ ಲಹರಿಯನ್ನು ಅರ್ಥ ಮಾಡಿಕೊಂಡಿದ್ದೇವೆ. ಅವರು ಯಾವಾಗಲೂ ನೆಗೆಟಿವ್​ ಆಗಿಯೇ ಯೋಚಿಸುತ್ತಾರೆ. ಮೋದಿಯವರ ಕಾರ್ಯ ಸೂಚಿ ಏನು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
 
ಭಾರತ ಮತ್ತು ಪಾಕಿಸ್ತಾನದ ನಡುವೆ 2012-13ರಲ್ಲಿ ಕೊನೇ ದ್ವಿಪಕ್ಷೀಯ ಸರಣಿ ನಡೆದಿದೆ. ಅದಾದ ಬಳಿಕ ಐಸಿಸಿ ಟೂರ್ನಿಯಲ್ಲಿ ಮಾತ್ರ ಇವೆರಡೂ ದೇಶಗಳು ಮುಖಾಮುಖಿ ಆಗಿವೆ. ಅದರಲ್ಲಿ ಭಾರತ ಪಾಕಿಸ್ತಾನಕ್ಕೆ ಹೋಗಿ ಆಡಿದ್ದು 2006ರಲ್ಲೇ ಕೊನೆಯಾಯಿತು. ಅದಾದ ನಂತರ ಪಾಕಿಸ್ತಾನಕ್ಕೆ ಹೋಗಿ ಆಡುವುದು ಇರಲಿ ಭಾರತದಲ್ಲಿ ಆದರೂ ದ್ವೀ ಪಕ್ಷೀಯ ಸರಣಿ ಆಯೋಜನೆ ಮಾಡಿ ಎಂದರೆ ಅದು ಕೂಡ ಮಾಡುತ್ತಿಲ್ಲ, ಕ್ರಿಕೆಟ್ ನಲ್ಲಿ ಪಾಸಿಟಿವ್ ಇರಬೇಕು ಆದರೆ ಇದು ಸಾಧ್ಯವಾಗದೇ ಇರುವುದು ಬೇಸರ ತರಿಸುತ್ತಿದೆ  ಎಂದಿದ್ದಾರೆ.
 
 

Find out more: