ನವದೆಹಲಿ: ಆಸ್ಟ್ರೇಲಿಯಾದ ಡೆಡ್ಲಿ ಸ್ಪೋಟಕ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್ ಮುಂದಿನ ತಿಂಗಳಿಂದ ಪ್ರಾರಂಭವಾಗಲಿರುವ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸನ್ ​ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. 
 
‘ನಾಯಕತ್ವ ವಹಿಸಿರುವುದರಿಂದ ನಾನು ಥ್ರಿಲ್ ಆಗಿದ್ದೇನೆ. ಮತ್ತೊಮ್ಮೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ. ಮತ್ತೊಮ್ಮೆ ಟ್ರೋಫಿ ಎತ್ತಲು ನನ್ನಿಂದ ಸಾಧ್ಯವಾದ ಪ್ರಯತ್ನ ನಡೆಸಲಿದ್ದೇನೆ’ ಎಂದು ಆಸೀಸ್ ನ ರನ್ ಮಷಿನ್ ಡೆವಿಡ್  ವಾರ್ನರ್, ಸನ್ ​ರೈಸರ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ. ಹೌದು, ಈ ಹಿಂದೆ ಕ್ಯಾಪ್ಟನ್ ಆಗಿದ್ದಾಗ ಹೈದರಬಾದ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ವಾರ್ನರ್ ಪ್ರಮುಖ ಪಾತ್ರ ವಹಿಸಿದ್ದರು. 
 
ವಾರ್ನರ್ ಈ ಹಿಂದೆ 2016 ರಲ್ಲಿ ಸನ್ ​ರೈಸರ್ಸ್ ತಂಡದ ನಾಯಕರಾಗಿ ಐಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಬಳಿಕ 2018 ರಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ 1 ವರ್ಷ ನಿಷೇಧಕ್ಕೊಳಗಾದಾಗ ನಾಯಕತ್ವ ತ್ಯಜಿಸಿದ್ದರು. ಕಳೆದ ವರ್ಷ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿದ್ದರು. 2014 ರಿಂದ ಸನ್​ರೈಸರ್ಸ್ ತಂಡದಲ್ಲಿರುವ ವಾರ್ನರ್, ಕಳೆದ ಆವೃತ್ತಿಯಲ್ಲಿ 692 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಕಳೆದ ಬಾರಿ ರನ್ ಮಷಿನ್ ಆಗಿ ಮಿಂಚು ಹರಿಸಿದ್ದರು. ಅವರು ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿರುವ ವಿದೇಶಿ ಬ್ಯಾಟ್ಸ್​ ಮನ್ ಕೂಡ ಆಗಿದ್ದಾರೆ. ಮಾರ್ಚ್ 29ರಂದು ಆರಂಭವಾಗಲಿರುವ ಐಪಿಎಲ್ ​ನಲ್ಲಿ ಸನ್ ​ರೈಸರ್ಸ್ ತಂಡ ಏಪ್ರಿಲ್ 1ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಅಭಿಯಾನ ಆರಂಭಿಸಲಿದೆ. 
 
ಆಸ್ಟ್ರೇಲಿಯಾ ತಂಡದ ಬ್ಯಾಕ್ ಬೋನ್, ಸ್ಪೋಟಕ ಬ್ಯಾಟ್ಸ್ ಮನ್ ಮತ್ತು ರನ್ ಮಷಿನ್ ಎಂದೇ ಕರೆಯಲ್ಪಡುವ ಡೆವಿಡ್ ವಾರ್ನರ್ ಈ ಹಿಂದೆ 45 ಪಂದ್ಯಗಳಲ್ಲಿ ಸನ್ ​ರೈಸರ್ಸ್ ತಂಡವನ್ನು ಮುನ್ನಡೆಸಿದ್ದು, 26 ಜಯ ಮತ್ತು 19 ಸೋಲು ಕಂಡಿದ್ದಾರೆ. 2016 ರಲ್ಲಿ ಸನ್ ರೈಸರ್ಸ್ ಹೈದರಬಾದ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡಿದ್ದರು.

Find out more: