ಕೋಲ್ಕತ: ಬಿಸಿಸಿಐ ಮತ್ತು ಐಸಿಸಿ ಮಾಜಿ ಅಧ್ಯಕ್ಷ ದಿವಂಗತ ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅವಿಷೇಕ್ ದಾಲ್ಮಿಯಾ, ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ನೂತನ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದು, ಬಿಸಿಸಿಐ ಪ್ರಸ್ತುತ ಅಧ್ಯಕ್ಷ ರಾಗಿರುವ ಸೌರವ್ ಗಂಗೂಲಿ ಅಣ್ಣ ನವರಿಗೂ ದೊಡ್ಡ ಸ್ಥಾನ ನೀಡಲಾಗಿದೆ. ಹೌದು, ಅದು ಯಾವ ಸ್ಥಾನ ಗೊತ್ತಾ!? ಇಲ್ಲಿದೆ ನೋಡಿ ಉತ್ತರ. 
 
38 ವರ್ಷದ ಅವರು ಸಿಎಬಿಯ ಕಿರಿಯ ಅಧ್ಯಕ್ಷ ಎನಿಸಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಣ್ಣ ಸ್ನೇಹಾಶಿಶ್ ಗಂಗೂಲಿ, ಕಾರ್ಯದರ್ಶಿಯಾಗಿ ಆಯ್ಕೆ ಯಾಗಿದ್ದಾರೆ. ಹೌದು, ಶಾಕ್ ಆದರೂ ನಂಬಲೇ ಬೇಕಾದ ವಿಷಯವಿದು. ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿದ ಬಳಿಕ ಸಿ ಎ ಬಿ ಅಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು.
 
ಬಿಸಿಸಿಐ ಹೊಸ ಸಂವಿಧಾನ ದ ಪ್ರಕಾರ ಅವಿಷೇಕ್, 2021 ರ ನವೆಂಬರ್ 6ರಿಂದ ಕೂಲಿಂಗ್ ಆಫ್ ​ಗೆ ತೆರಳಬೇಕಾಗಿದ್ದು, ಮುಂದಿನ 22 ತಿಂಗಳ ಕಾಲ ಮಾತ್ರ ಸಿಎಬಿ ಅಧ್ಯಕ್ಷರಾಗಿ ಮುಂದುವರಿಯ ಬಹುದಾಗಿದೆ. ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ರಾಗಿರುವ 54 ವರ್ಷದ ಸ್ನೇಹಾಶಿಶ್ ಗಂಗೂಲಿ, 15 ವರ್ಷಗಳ ವೃತ್ತಿ ಜೀವನದಲ್ಲಿ ಬಂಗಾಳ ಪರ 59 ಪಂದ್ಯ ಆಡಿದ್ದಾರೆ. 
 
ಗಂಗೂಲಿ ಉಪನ್ಯಾಸವೇನು ಗೊತ್ತಾ!? 
 
ಜಗಮೋಹನ್ ದಾಲ್ಮಿಯಾ ಸ್ಮರಣಾರ್ಥ ವಾರ್ಷಿಕ ಉಪನ್ಯಾಸವನ್ನು ಈ ವರ್ಷ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಲಿದ್ದಾರೆ. ಮಾರ್ಚ್ ನಲ್ಲಿ ಭಾರತ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯಕ್ಕೆ ಮುನ್ನಾದಿನ ಈಡನ್ ಗಾರ್ಡನ್​ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಸಿಎಬಿ ನೂತನ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ. ಟೀಂ ಇಂಡಿಯಾ ದ.ಆಫ್ರಿಕಾ 3ನೇ ಏಕದಿನ ಮಾರ್ಚ್ 18ರಂದು ಕೋಲ್ಕತದಲ್ಲಿ ನಿಗದಿಯಾಗಿದೆ. ಈ ಪಂದ್ಯದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಉಪನ್ಯಾಸ ನೀಡಲಿದ್ದೂ  ಈಗಾಗಲೇ ಏನಿರಬಹುದು ಆ ಉಪನ್ಯಾಸ ಎಂಬ ಕುತೂಹಲ ಗರಿಗೆದರಿದೆ.

Find out more: