ಆಕ್ಲೆಂಡ್‌: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವೃತ್ತಿ ಬದುಕಿನ ಶ್ರೇಷ್ಠ ಲಯದಲ್ಲಿರುವ ಕನ್ನಡಿಗ ಕೆಎಲ್‌ ರಾಹುಲ್‌, ಇಲ್ಲಿ ನಡೆದ ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ ಟಿ20-ಐ ಸರಣಿಯ 2ನೇ ಪಂದ್ಯದಲ್ಲೂ ಅರ್ಧಶತಕ ಬಾರಿಸಿ ಟೀಮ್‌ ಇಂಡಿಯಾಗೆ 7 ವಿಕೆಟ್‌ ಭರ್ಜರಿ ಜಯ ತಂದುಕೊಟ್ಟರು. ಜಯ ತಂದುಕೊಡುವುದಷ್ಟೇ ಅಲ್ಲ, ಅದರ ಜೊತೆಗೆ ನೂತನ ದಾಖಲೆಯೊಂದನ್ನು ಸಹ ಬರೆದಿದ್ದಾರೆ. ಅದೇನು ಗೊತ್ತಾ!? 
 
ರಾಹುಲ್‌ ಈ ಅರ್ಧಶತಕದ ಮೂಲಕ ವಿಕೆಟ್‌ ಕೀಪರ್‌ ಆಗಿ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.ಇಲ್ಲಿನ ಈಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 5 ಪಂದ್ಯಗಳ ಸರಣಿಯ 2ನೇ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು 20 ಓವರ್‌ಗಳಲ್ಲಿ 132/5 ರನ್‌ ಗಳಿಸಿತು. ಭಾರತ ತಂಡಕ್ಕೆ ಮತ್ತೊಮ್ಮೆ ಆಸರೆಯಾದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್‌ ಕೆಎಲ್‌ ರಾಹುಲ್‌, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ವೃತ್ತಿ ಬದುಕಿನ 11ನೇ ಶತಕ ಬಾರಿಸಿ ತಂಡವನ್ನು ಸುಲಭವಾಗಿ ಗುರಿ ಮುಟ್ಟುವಂತೆ ಮಾಡಿದರು. 
 
41 ಎಸೆತಗಳಲ್ಲಿ 42 ರನ್‌ ಗಳಿಸಿದ್ದ ರಾಹುಲ್‌, ತಮ್ಮ ರನ್ ಗತಿಯ ಗೇರ್‌ ಬದಲಾಯಿಸಿ ನಂತರದ 2 ಎಸೆತಗಳಲ್ಲಿ ಸಿಕ್ಸರ್‌ ಮತ್ತು ಫೋರ್‌ ಬಾರಿಸುವ ಮೂಲಕ 43 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಮೂಲಕ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಾಫ್‌ ಸೆಂಚುರಿ ಬಾರಿಸಿ ಮಿಂಚಿದರು. ಅಂತಿಮವಾಗಿ 50 ಎಸೆತಗಳಲ್ಲಿ 3 ಫೋರ್‌ ಮತ್ತು 2 ಸಿಕ್ಸರ್‌ನೊಂದಿಗೆ 57 ರನ್‌ ಬಾರಿಸಿ ಅಜೇಯರಾಗಿ ಉಳಿದರು. ​ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ವಿಶೇಷ ದಾಖಲೆ ಬರೆದ ರಾಹುಲ್‌
 
ಅಂತಾರಾಷ್ಟ್ರೀಯ ಟಿ20ಕ್ರಿಕೆಟ್‌ನಲ್ಲಿ ಕೆಎಲ್‌ ರಾಹುಲ್‌ ವಿಕೆಟ್‌ಕೀಪರ್‌ ಆಗಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಟಿ20 ಇತಿಹಾಸದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟಿ20 ಸರಣಿಯ ಮೊದಲ ಪಂದ್ಯದಲ್ಲಿ ರಾಹುಲ್‌ 56ರನ್‌ ಸಿಡಿಸಿದರೆ, ಜ.26ರಂದು ನಡೆದ 2ನೇ ಪಂದ್ಯದಲ್ಲಿ 50ಎಸೆತಗಳಲ್ಲಿ ಅಜೇಯ 57ರನ್‌ ಬಾರಿಸಿ ವಿಶೇಷ ದಾಖಲೆ ತಮ್ಮದಾಗಿಸಿಕೊಂಡರು.

Find out more: