ಮಹಾಮಾರಿ ಕರೋನಾ ವೈರಲ್ ನಿಂದ ಆದ ನಷ್ಟ ಅಷ್ಟಿಷ್ಟಲ್ಲ. ಹೌದು ಈ ವೈರಸ್ ನಿಂದ ಜಗತ್ತಿನ ಅನೇಕ ಉದ್ಯಮಗಳಿಗೆ ಭಾರೀ ಹೊಡೆತ ಬಿದ್ದಿದೆ. ಅದರಲ್ಲೂ ಭಾರತದಲ್ಲಿ ನಡೆಯುವ ಐಪಿಎಲ್ ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಕೂಡ ಆರ್ಥಿಕ ಹೊಡೆತ ಹೊಂದಿದೆ. ಕರೋನಾ ವೈರಸ್ ನಿಂದ ಇದೀಗ ಐಪಿಎಲ್ ಅನ್ನು ಕ್ರೀಡಾ ಅಭಿಮಾನಿಗಳಿಲ್ಲದೇ ನಡೆಸೋಕೆ ದೆಹಲಿ ಸರ್ಕಾರ ಕೈಗೊಂಡಿದೆ. ಹೀಗಾಗಿ ಇದು ಕ್ರೀಡಾ ಅಭಿಮಾನಿಗಳಿಗೆ ಇದೊಂದು ಆಘಾತ ಉಂಟು ಮಾಡಿದೆ. 

 

ಈಗಾಗಲೇ ದೆಹಲಿ ಸರ್ಕಾರ ಈ ಎಲ್ಲ ರೀತಿಯ ಕ್ರೀಡೆಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಇದಕ್ಕೆ ಮುಂದುವರೆದ ಅಂಶವಾಗಿ ಇದೀಗ ಐಪಿಎಲ್ ಅನ್ನು ಕೂಡ ನಡೆಸದಿರಲು ದೆಹಲಿ ಸರ್ಕಾರ ಮುಂದಾಗಿದೆ. ಹೌದು ಇಷ್ಟೇ ಅಲ್ಲದೇ 200ಕ್ಕಿಂತ ಹೆಚ್ಚು ಜನರು ಇದ್ದರೆ ಅಂತಹ ಕಾರ್ಯಕ್ರಮಗಳ ಮೇಲೆಯೂ ಕೇಜ್ರಿವಾಲ್ ಅವರು ನಿಷೇಧ ಹೇರಿದ್ದಾರೆ. ಇನ್ನು ಶಾಲೆ, ಕಾಲೇಜು ಹಾಗೂ ಸಿನಿಮಾ ಹಾಲ್ ಬಗ್ಗೆ ಮಾರ್ಚ್ 31ರ ವರೆಗೆ ಬಂದ್ ಮಾಡಿ ಮಹತ್ವದ ಆದೇಶವನ್ನು ಹೊರ ಹಾಕಿದೆ.

 

ಇದೀಗ ಕ್ರೀಡಾ ಅಭಿಮಾನಿಗಳಿಗೆ ಇದು ಶಾಕಿಂಗ್ ನ್ಯೂಸ್. ಆದರೆ ಕರೋನಾದಿಂದ ಮುನ್ನೆಚ್ಚರಿಕೆ ವಹಿಸಬೇಕಾದರೆ ಇದನ್ನು ಸರ್ಕಾರ ಅವಶ್ಯವಾಗಿ ಮಾಡಲೇಬೇಕಿದೆ. ಹೀಗಾಗಿ ಮುಂದಿನ ಆದೇಶ ಹೊರ ಬೀಳುವವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ನಡೆಸದಿರಲು ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿರುವುದಾಗಿ ದೆಹಲಿ ಉಪಮಖ್ಯಮಂತ್ರಿ ಮನೀಶ್ ಡಿಸೋಡಿಯಾ ಅವರು ಹೇಳಿದ್ದಾರೆ. ದೇಶದಲ್ಲಿ ಕರೋನಾ ತಗುಲಿರುವ ಸಂಖ್ಯೆ ಇದೀಗ 70ರ ಗಡಿ ದಾಟಿದ್ದು, ಕರ್ನಾಟಕದಲ್ಲಿ ಒಬ್ಬ ಓರ್ವ ಈ ಸೋಂಕಿನಿಂದ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಐಪಿಎಲ್ ಆಡಿಸದಿರಲು ನಿರ್ಧಾರ ಕೈಗೊಂಡಿದೆ.

 

ಮಹಾರಾಷ್ಟ್ರದಲ್ಲೂ ಯಾವುದೇ ಕ್ರೀಡಾಭಿಮಾನಿಗಳಿಲ್ಲದೇ ಐಪಿಎಲ್ ಟೂರ್ನಿ ನಡೆಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಅದಿವೇಶನದಲ್ಲಿ ಇದರ ಬಗ್ಗೆ ಚರ್ಚೆ ನಡೆಸೋಕೆ ಮುಂದಾಗಿದೆ. ಅಷ್ಟೇ ಅಲ್ಲದೇ, ಇನ್ನು ಕರ್ನಾಟಕದಲ್ಲಿಯೂ ಐಪಿಎಲ್ ನಡೆಸದಿರಲು ಇಲ್ಲಿನ ವೈದ್ಯಕೀಯ ಸಚಿವ ಸುಧಾಕರ್ ಅವರು ಹೇಳಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತನ್ನ ತವರು ಪಂದ್ಯಗಳನ್ನು ದೆಹಲಿಯಲ್ಲಿ ಆಡಬೇಕಾಗಿತ್ತು. ಆದರೆ, ಇದೀಗ ದೆಹಲಿ ಸರ್ಕಾರದಿಮದ ಮಹತ್ವದ ನಿರ್ಧಾರ ಹೊರಬಿದ್ದಿರುವ ಕಾರಣ ಪ್ಯಾಂಚೈಸಿ ಯಾವ ಕ್ರಮ ಕೈಗೊಳ್ಳದೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣ ಆಗಿದೆ.

 

ಐಪಿಎಲ್ ಪಂದ್ಯಾವಳಿಗಳಿಗೆ ಬಿಸಿಸಿಐ ಇದೀಗ 1000 ಕೋಟಿ ರೂಪಾಯಿಯನ್ನು ನಷ್ಟ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. 

Find out more: