ಸಾಮಾನ್ಯವಾಗಿ ಕ್ರೀಡಾಪಟುಗಳು ತಾವು ಧರಿಸುವಂತಹ ಜರ್ಸಿಯ ಮೇಲೆ ತಮ್ಮ ಹೆಸರನ್ನು ಅಚ್ಚಾದಿಸಿಕೊಳ್ಳುವುದು ಸರ್ವೇ ಸಾಮಾನ್ಯ ಆದರೆ ಐಪಿಎಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡೆವಿಲಿಯರ್ಸ್ ತಾವು ಧರಿಸುವಂತಹ ಜೆರ್ಸಿಯ ಮೇಲಿನ ತಮ್ಮ ಹೆಸರಿನ ಬದಲಾಗಿ ಬೇರೆಯವರ ಹೆಸರನ್ನು ಅಚ್ಚಾದಿಸಿಕೊಂಡು ಅಕಾಡಕ್ಕೆ ಇಳಿದಿದ್ದಾರೆ, ಅಷ್ಟಕ್ಕೂ ವಿರಾಟ್ ಕೊಹ್ಲಿ ಹಾಗೂ ಎಬಿಡಿ ತಮ್ಮ ಜೆರ್ಸಿಯ ಮೇಲೆ ಯಾರ ಹೆಸರು ಇದೆ ಗೊತ್ತಾ..?






ಈ ಬಾರಿ ಇಡೀ ವಿಶ್ವವನ್ನೇ ಕೊರೋನಾ ವೈರಸ್  ಕಾಡುತ್ತಿದೆ, ಲಕ್ಷಾಂತರ ಮಂದಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ,  ಇನ್ನು ಅನೇಕ ಮಂದಿ ಕೊರೋನಾ ವೈರಸ್  ಸುಳಿಯಲ್ಲಿ ನರಳುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಅನೇಕ ಕೊರೋನಾ ವಾರಿಯರ್ಸ್ ಗಳು ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ, ಅಂತವರು ಇಂದಿನ ಪರಿಸ್ಥಿತಿಯಲ್ಲಿ ನಮ್ಮ ನಿಜವಾರ ಹೀರೋಗಳಾಗಿದ್ದಾರೆ,  ಅಂತಹ ಹೀರೋಗಳ ಹೆಸರನ್ನು ವಿರಾಟ್ ಕೊಹ್ಲಿ, ಹಾಗೂ ಎಬಿಡಿ ತಮ್ಮ ಜೆರ್ಸಿಯ ಮೇಲೆ ಅಚ್ಚಾದಿಸಿಕೊಂಡಿದ್ದಾರೆ.






ಹೌದು ಈ ಹಿಂದೆ ಆರ್ಸಿಬಿ ಫ್ರಾಂಚೈಸಿ ತಿಳಿಸಿದಂತೆ ಮೊದಲ ಪಂದ್ಯವನ್ನು ಕೊರೋನಾ ವಾರಿಯರ್ಸ್ಗೆ ಅರ್ಪಿಸಲಿದೆ. ಅದರಂತೆ ಮೊದಲ ಪಂದ್ಯದಲ್ಲಿ ಆಟಗಾರರು ಕೋವಿಡ್ ವಿರುದ್ಧ ಹೋರಾಡಿದ ಕೆಲ ಕೊರೋನಾ ವಾರಿಯರ್ಸ್ ಹೆಸರುಗಳನ್ನು ತಮ್ಮ ಜೆರ್ಸಿ ಮೇಲೆ ಹಾಕಿಕೊಂಡಿದ್ದಾರೆ.  ಈಗಾಗಲೇ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೆರ್ಸಿಗಳ ಹೆಸರು ಅನಾವರಣವಾಗಿದ್ದು, ಹಾಗೆಯೇ ತಮ್ಮ ಟ್ವಿಟರ್ ಖಾತೆ ಹೆಸರನ್ನು ಬದಲಿಸಿ ಜೆರ್ನಿ ಮೇಲಿರುವ ಹೆಸರನ್ನೇ ಹಾಕಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಿಮ್ರಾನ್ಜೀತ್ ಸಿಂಗ್ ಹೆಸರಿನಲ್ಲಿ ಕಣಕ್ಕಿಳಿದ್ರೆ, ಎಬಿ ಡಿವಿಲಿಯರ್ಸ್ ಪಾರಿತೋಷ್ ಪಂತ್ ಹೆಸರಿನಲ್ಲಿ ಮೈದಾನಕ್ಕೆ ಬರಲಿದ್ದಾರೆ.







ಈ ಬಗ್ಗೆ ಟ್ವೀಟ್ ಮಾಡಿರುವ ಎಬಿಡಿ, ಕೊರೋನಾ ಲಾಕ್ಡೌನ್ ಸಮಯದಲ್ಲಿ ಪಾರಿತೋಷ್ ಹಾಗೂ ಪೂಜಾ ಪ್ರಾಜೆಕ್ಟ್ ಫೀಡಿಂಗ್ ಫ್ರಂ ಫಾರ್ ಎಂಬ ಅಭಿಯಾನದಡಿಯಲ್ಲಿ ಬಡವರಿಗೆ ಮತ್ತು ಹಸಿದವರಿಗೆ ನೆರವಾಗಿದ್ದೀರಿ. ನೀವು ಮಾಡಿದ ಕೆಲಸಕ್ಕೆ ನನ್ನ ಸೆಲ್ಯೂಟ್. ನಿಮ್ಮ ಹೆಸರನ್ನು ನನ್ನ ಜೆರ್ಸಿಗೆ ಹಾಕಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.







ಇನ್ನು ಶ್ರವಣದೋಷವುಳ್ಳ ಸಿಮ್ರಾನ್ಜೀತ್ ಸಿಂಗ್ ಕೊರೋನಾ ಲಾಕ್ಡೌನ್ ಸಮಯದಲ್ಲಿ ಇತರರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸಿದ್ದರು. ಹೀಗೆ ಯಾವುದೇ ಸಂಘ ಸಂಸ್ಥೆಯಿಲ್ಲದೆ ಸಂಗ್ರಹಿಸಿದ ಹಣವನ್ನು ನಿಸ್ವಾರ್ಥವಾಗಿ ಬಡವರಿಗಾಗಿ ಮೀಸಲಿಟ್ಟಿದ್ದರು. ಇವರ ಈ ಮಾನವೀಯ ನಡೆಗೆ ಗೌರವಾರ್ಥಕವಾಗಿ ಕೊಹ್ಲಿ ಸಿಮ್ರಾನ್ಜೀತ್ ಹೆಸರಿನ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ.







ಆರ್ಸಿಬಿ ತಂಡದ ಎಲ್ಲಾ ಆಟಗಾರರು ಕೂಡ ಕೊರೋನಾ ಸಮಯದಲ್ಲಿ ದುಡಿದ ಕೆಲ ವಾರಿಯರ್ಸ್ ಹೆಸರಿನಲ್ಲಿ ಕಣಕ್ಕಿಳಿಯಲಿದ್ದು, ಇದಲ್ಲದೆ ಕೊರೋನಾ ಸಮಯದಲ್ಲಿ ಹಲವರಿಗೆ ನೆರವಾಗಿದ್ದವರಿಗೆ ಗೌರವಾರ್ಥಕವಾಗಿ ಜೆರ್ಸಿ ಮೇಲೆ ಮೈ ಕೋವಿಡ್ ಹಿರೋಸ್ ಎಂಬ ಸಾಲು ಕಾಣಿಸಲಿದೆ.

Find out more: