ನವದೆಹಲಿ: ಕರೋನಾ ವೈರಸ್ ಇಡೀ ವಿಶ್ವದಾದ್ಯಂತಹ ಸಾಕಷ್ಟು ತಲ್ಲಣ ಸೃಷ್ಠಿಯಾಗಿದೆ ಇದರಿಂದಾಗಿ ಸಾಕಷ್ಟು ದೇಶಗಳು ಲಾಕ್ ಡೌನ್ ಘೋಷಣೆಯನ್ನು ಕೊರೋನಾ ವೈರಸ್ ತಡೆಯಲು ಪ್ರಯತ್ನ ನಡೆಸಿದೆ. ಈ ಲಾಕ್ ಡೌನ್ ಆದಂತಹ ಸಂದರ್ಭದಲ್ಲಿ ಸಾಕಷ್ಟು ಕೆಲಸಗಳು ಸ್ಥಬ್ದವಾಗಿರುವುದರಿಂದ ಇರಲು ಜಾಗವಿಲ್ಲದೆ ಮಾಡಲು ಕೆಲಸವಿಲ್ಲದೆ ಬಹುತೇಕ ಜನರು ನಿರಾಶ್ರಿತರಾಗಿದ್ದಾರೆ ಇತಂತವರು ಉಳಿದುಕೊಳ್ಳಲು ಎಲ್ಲೆಲ್ಲಿ ಜಾಗಗಳು ಇವೆ ಹಾಗೂ ಊಟದ ವ್ಯವಸ್ಥೆಯನ್ನು ಎಲ್ಲೆಲ್ಲಿ ಮಾಡಲಾಗಿದೆ ಎಂಬುದು ಬೇಗ ತಿಳಿಯುವುದಿಲ್ಲ ಆದರೆ ಗೂಗಲ್ ಸಂಸ್ಥೆ ಇದಕ್ಕೊಂದು ಯೋಜನೆಯನ್ನು ರೂಪಿಸಿ ನಿರಾಶ್ರಿತರಿಗೆ ಅನುಕೂಲ ಮಾಡಿಕೊಟ್ಟಿದೆ. ಅಷ್ಟಕ್ಕೂ ಗೂಗಲ್ ಮ್ಯಾಪ್ ರೂಪಿಸಿರುವ ಆ ಯೋಜನೆ ಯಾವುದು ಗೊತ್ತಾ. ಇಲ್ಲಿದೆ ನೋಡಿ

 

ಕರೊನಾದಿಂದಾಗಿ ಆಹಾರ, ವಸತಿ ಸಿಗದೇ ನಿರಾಶ್ರಿತರಾಗಿರುವವರ ನೆರವಿಗೆ ಗೂಗಲ್ ಮ್ಯಾಪ್ ಧಾವಿಸಿದೆ. ಇದಕ್ಕೆ ಹೊಸ ಫೀಚರ್ ಅಳವಡಿಸಲಾಗಿದ್ದು, ನಿರಾಶ್ರಿತರು ರಾತ್ರಿ ವಾಸ್ತವ್ಯ ಎಲ್ಲಿ ಮಾಡಬಹುದು ಹಾಗೂ ಅವರ ಸಮೀಪ ಊಟದ ವ್ಯವಸ್ಥೆ ಎಲ್ಲಿ ಸಿಗುತ್ತದೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಗೂಗಲ್ ಇದನ್ನು ಮಾಡಿದೆ.

 

೩೦ಕ್ಕೂ ಹೆಚ್ಚು ನಗರಗಳ ಕುರಿತು ಸದ್ಯ ಇದರಲ್ಲಿ ಮಾಹಿತಿ ಸಿಗಲಿದ್ದು, ಇನ್ನೂ ಉಳಿದ ನಗರಗಳ ಬಗ್ಗೆ ಅಪ್ಲೋಡಿಂಗ್ ಪ್ರಕ್ರಿಯೆ ನಡೆದಿದೆ. ಸದ್ಯ ಇಂಗ್ಲಿಷ್ನಲ್ಲಷ್ಟೇ ಮಾಹಿತಿ ಲಭ್ಯ ಇದ್ದು. ಮುಂದಿನ ದಿನಗಳಲ್ಲಿ ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ದೊರೆಯುವಂತೆ ಮಾಡಲಾಗುವುದು ಎಂದು ಗೂಗಲ್ ತಿಳಿಸಿದೆ.

 

ಯಾವ ಸ್ಥಳದಲ್ಲಿ ಆಹಾರ ದೊರೆಯುತ್ತದೆ ಎಂಬುದು ಗೊತ್ತಾಗಬೇಕಾದರೆ ಬಳಕೆದಾರರು, Food shelters <ನಗರದ ಹೆಸರು> Night shelters <ನಗರದ ಹೆಸರು> ಟೈಪ್ ಮಾಡಬೇಕು. ಇದನ್ನೇ ಧ್ವನಿಯ ಮೂಲಕವೂ ನೀಡಬಹುದು. ಇಷ್ಟು ಟೈಪ್ ಮಾಡುತ್ತಿದ್ದಂತೆಯೇ ಸಮೀಪವೇ ಯಾವುದಾದರೂ ಸ್ಥಳ ಇದ್ದರೆ ಅದು ಅಲ್ಲಿ ತೋರಿಸಲಿದೆ. ಸ್ಥಳದ ಜತೆಗೆ ಗೂಗಲ್ ಮ್ಯಾಪ್ ಕೂಡ ಅಲ್ಲಿಯೇ ಕಾಣಿಸಿಕೊಳ್ಳಲಿದ್ದು, ಅದರ ಸಹಾಯದಿಂದ ಸ್ಥಳವನ್ನು ಸುಲಭದಲ್ಲಿ ಗುರುತಿಸಬಹುದಾಗಿದೆ.

 

ವಲಸಿಗರಿಗೆ, ಮನೆಗಳಿಲ್ಲದವರಿಗೆ ಈ ಹೊಸ ಫೀಚರ್ನಿಂದ ಹೆಚ್ಚು ಪ್ರಯೋಜನ ಆಗಲಿದೆ. ಒಂದು ವೇಳೆ ಸ್ಮಾರ್ಟ್ಫೋನ್ ಇಲ್ಲದಿದ್ದರೆ ಅಥವಾ ಇದರ ಬಳಕೆ ತಿಳಿಯದೇ ಇದ್ದ ಸಂದರ್ಭಗಳಲ್ಲಿ ಫೋನ್ ಇರುವವರ ಬಳಿ ಸ್ವಲ್ಪ ಸಹಾಯ ಪಡೆಯುವ ಮೂಲಕ ಸ್ಥಳಗಳನ್ನು ಗೊತ್ತು ಮಾಡಿಕೊಳ್ಳಬಹುದು.

 

ರಿಹಾರ ಕೇಂದ್ರಗಳ ಪತ್ತೆಮಾಡಲು ಗೂಗಲ್ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಅಗತ್ಯ ಸಮಯದಲ್ಲಿ ಜನರಿಗೆ ಸಹಾಯ ಮಾಡುವ ಪರಿಹಾರಗಳನ್ನು ಹುಡುಕಲು ನಾವು ಒಂದು ಸಮಗ್ರ ಪ್ರಯತ್ನವನ್ನು ಮಾಡುತ್ತಿದ್ದೇವೆ’ ಎಂದು ಗೂಗಲ್ ಇಂಡಿಯಾ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಅನಲ್ ಘೋಷ್ ಹೇಳಿದ್ದಾರೆ.

 

 

Find out more: