ಬೆಂಗಳೂರು: ಇಂದು ಜನಸಾಮಾನ್ಯರು ನೆಟ್​ಫ್ಲಿಕ್ಸ್​, ಅಮೆಜಾನ್​, ಝಿ5, ಹಾಟ್​ ಸ್ಟಾರ್​ಗಳಂತಹ ಒಟಿಟಿ ಫ್ಲಾಟ್​​​ಫಾರ್ಮ್​ಗಳ ಮೂಲಕ ಎಲ್ಲಿ ಬೇಕಾದಲ್ಲಿ ಸಿನಿಮಾ ನೋಡುತ್ತಿದ್ದಾರೆ. ಇವುಗಳ ನಡುವೆ ಕನ್ನಡಿಗರಿಗೆಂದೇ ಕನ್ನಡ ಸಿನಿಮಾಗಳಿಗಷ್ಟೇ ಸೀಮಿತವಾಗಿರುವ ಹೊಸ ಆಯಪ್​​ ರಿಲೀಸ್​ ಆಗಿದೆ.  ಅಷ್ಟಕ್ಕೂ ಆಫ್ ಯಾವುದು ಗೊತ್ತಾ..?

 

ಅಮೇಜಾನ್, ನೆಟ್​​ಫ್ಲಿಕ್ಸ್​​​ನಲ್ಲಿ ಸಿನಿಮಾ ನೋಡುವ ಕನ್ನಡಿಗರಿಗೊಂದು ಗುಡ್​ನ್ಯೂಸ್. ಕೇವಲ ಕನ್ನಡ ಸಿನಿಮಾಗಳಿಷ್ಟೇ ಸೀಮಿತವಾಗಿರೋ ಹೊಸ ಆಯಪ್ ರಿಲೀಸ್ ಆಗಿದೆ. ಕರ್ನಾಟಕದ ಮೊಟ್ಟ ಮೊದಲ ಡಿಜಿಟಲ್ ಒ.ಟಿ.ಟಿ ಫ್ಲಾಟ್ ಫಾರ್ಮ್ 'ನಮ್ಮ FLIX' ಆಯಪ್ ಬಿಡುಗಡೆಯಾಗಿದೆ. ಡಾ.ರಾಜ್ ಹುಟ್ಟು ಹಬ್ಬದಂದು ನಟ ಉಪೇಂದ್ರ 'ನಮ್ಮ FLIX' ಆಯಪನ್ನು ಬಿಡುಗಡೆ ಮಾಡಿದ್ದಾರೆ.

 

ಕನ್ನಡದ ಯುವಕರ ತಂಡ, ಅವಿಟಾನ್ ಎಂಟರ್​ಟೈನ್​ಮೆಂಟ್ ಕಾರ್ಪೊರೇಷನ್ ಅಡಿಯಲ್ಲಿ ಹೊಸ ಆಯಪ್ ಅನ್ವೇಷಣೆ ಮಾಡಿದೆ. 'ನಮ್ಮ FLIX' ಆಯಪ್ ಮೂಲಕ ಮನೆಯಲ್ಲೇ ಕುಳಿತು ಕನ್ನಡ‌ ಸಿನಿಮಾಗಳನ್ನು ವೀಕ್ಷಿಸಬಹುದು. ಈ ಆಯಪ್​ನಲ್ಲಿ ದಿನಕ್ಕೆ ಕೇವಲ 1 ರೂಪಾಯಿ ಪಾವತಿಸಿ, ನಿಮ್ಮಿಷ್ಟದ ಕನ್ನಡ ಸಿನಿಮಾ ನೋಡಬಹುದು.

 

ಬರೀ‌ ಸಿನಿಮಾವಲ್ಲ ಶೀಘ್ರದಲ್ಲೇ ವೆಬ್ ಸೀರಿಸ್, ಸಂಗೀತ, ಸ್ಟಾರ್ಗಳ ಮಾತುಕತೆ, ಫ್ಯಾನ್ ಕ್ಲಬ್ ಕೂಡ ಬರುತ್ತದೆಯಂತೆ. ಇಷ್ಟೆಲ್ಲಾ ಸಿಗುವ 'ನಮ್ಮ FLIX' ಆಯಪ್​ಗೆ ದಿನಕ್ಕೆ ಒಂದು ರೂಪಾಯಿ ಮಾತ್ರ. ಪ್ರತಿ ವಾರಕ್ಕೊಮ್ಮೆ ಹೊಸ ಸಿನಿಮಾಗಳು ಬರುತ್ತವೆ.

ಗೂಗಲ್‌ ಫ್ಲೇ ಸ್ಟೋರ್​ನಲ್ಲಿ ನಮ್ಮ FLIX‌ ಲಭ್ಯವಾಗಲಿದೆ. ಸದ್ಯಕ್ಕೆ ಎಲ್ಲಾ ಆಯಂಡ್ರಡ್ ಮೊಬೈಲ್ ಗಳಲ್ಲೂ ಆಯಪ್ ಲಭ್ಯವಾಗಲಿದೆ. ಶೀಘ್ರದಲ್ಲಿ AMAZON FIRE TV, JIO TV ಮತ್ತು iPhone ಗಳಲ್ಲೂ ಆಯಪ್ ಸಿಗಲಿದೆ.

1 ರೂಪಾಯಿಗೆ ಸಿನಿಮಾ!

'ನಮ್ಮ ಫ್ಲಿಕ್ಸ್'​ ಆಯಪ್​ ಅನ್ನು ಕನ್ನಡಿಗರೇ ಆದ ಅವಿಟಾನ್​​ ಎಂಟರ್​ಟೈನ್​​ಮೆಂಟ್​ ಕಾರ್ಪೋರೇಷನ್​​ ಅಡಿಯಲ್ಲಿ ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ ದಿನಕ್ಕೆ ಕೇವಲ 1 ರೂಪಾಯಿ ಪಾವತಿಸುವ ಮೂಲಕ ಕನ್ನಡ ಸಿನಿಮಾವನ್ನು ವೀಕ್ಷಿಸಬಹುದಾಗಿದೆ. ನೆಟ್​ಫ್ಲಿಕ್ಸ್​, ಅಮೆಜಾನ್ ​ ಮೂಲಕ ಕನ್ನಡ ಸಿನಿಮಾ ವೀಕ್ಷಿಸುತ್ತಿದ್ದ ವೀಕ್ಷಕರಿಗೆ ಈ ಆಯಪ್​​ ಹೇಳಿ ಮಾಡಿಸಿದಂತಿದೆ. ಸಿನಿಮಾ ಮಾತ್ರವಲ್ಲ..!

'ನಮ್ಮ ಫ್ಲಿಕ್ಸ್'​​​ ಆಯಪ್​ ಮೂಲಕ ವೆಬ್​ ಸಿರೀಸ್​​, ಸಂಗೀತ, ಸ್ಟಾರ್​ಗಳ ಮಾತುಕತೆ ಕೂಡ ವೀಕ್ಷಿಸಬಹುದಾಗಿದೆ. ಕಡಿಮೆ ಬೆಲೆಗೆ ಕನ್ನಡದ ಸಿನಿಮಾಗಳನ್ನು ನೋಡುವ ಹೊಸ ಪ್ರಯತ್ನವನ್ನು ಅವಿಟಾನ್​​ ಎಂಟರ್​ಟೈನ್​ ತಂಡ ಮಾಡಿದೆ. ಲಾಖ್​ಡೌನ್​​ ಅವಧಿಯಲ್ಲಿಮನೆಯಲ್ಲಿ ಕುಳಿತು ಕನ್ನಡ ಸಿನಿಮಾ ವೀಕ್ಷಿಸಲು ಈ ಆಯಪ್​ ಸಹಾಯಕವಾಗಲಿದೆ. ದಿನಕ್ಕೆ ಒಂದು ರೂಪಾಯಿಯಂತೆ ಸಿನಿಮಾ ನೋಡ ಬಹುದಾಗಿದೆ. ಪ್ರತಿ ವಾರಕ್ಕೊಮ್ಮೆ ಹೊಸ ಸಿನಿಮಾಗಳು ಈ ಅಪ್ಲಿಕೇಷನ್​ನಲ್ಲಿ ವೀಕ್ಷಣೆಗೆ ಸಿಗಲಿಗೆ.

ಆಯಪ್ಡೌನ್ಲೋಡ್ಹೇಗೆ?

ಕನ್ನಡದ ಹೊಸ ಒಟಿಟಿ ಫ್ಲಾರ್ಟ್​ 'ನಮ್ಮಫ್ಲಿಕ್ಸ್'​​ ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಲಭ್ಯವಾಗಲಿದೆ. ಸದ್ಯಕ್ಕೆ ಎಲ್ಲಾ ಆಯಂಡ್ರಾಯ್ಡ್​ ಬಳಕೆದಾರರು ಈ ಆಯಪ್​​​ ಅನ್ನು ಬಳಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಅಮೆಜಾನ್​​, ಫೈರ್​​ ಟಿವಿ, ಜಿಯೋ ಮತ್ತು ಐಫೋನ್​ಗಳಿಗೂ ಲಭ್ಯವಾಗಲಿದೆ.

 

 

Find out more: