ಕೊರೋನಾ ವೈರಸ್ ಇಂದಾಗಿ ಇಡೀ ಪ್ರಪಂಚವೇ ನಲುಗಿ ಹೋಗಿರುವಂತಹ ಸಂದರ್ಭದಲ್ಲಿ ಇಡೀ ಜಗತ್ತು ಸಾಕಷ್ಟು ಬದಲಾವಣೆಗೆ ತನ್ನನ್ನು ತಾನು ಹೊಗ್ಗಿಕೊಳ್ಳಲು ಹಪಹಪಿಸುತ್ತಿದೆ. ಕೋವಿಡ್-19 ಇಂದಾಗಿ ಪ್ರಪಂಚದಲ್ಲಿ ಹಲವು ವರ್ಷಗಳಿಂದ ಕಾಣದ ಸಮಸ್ಯೆಗಳು ತಲೆ ಎತ್ತಿ ನಿಂತವು ಈ ಸಮಸ್ಯೆಗಳನ್ನು ಬಗೆ ಹರಿಸಬೇಕು ಹಾಗೂ ಈ ಭಯಾನಕ ರೋಗದಿಂದ ಮುಕ್ತಿಯನ್ನು ಹೊಂದಲು ಕೆಲವು ಬದಲಾವಣೆಗೆ ಒಳಗಾಗಲೇ ಬೇಕು. ಅಂತಹ ಕೆಲವು ಬದಲಾವಣೆಗಳು ಪ್ರಪಂಚದಲ್ಲಿ ಈಗಾಗಲೇ ಶುರುವಾಗಿದೆ,

 

ಹೌದು ಕೋವಿಡ್ ಬಂದ ನಂತರ ಇಡೀ ಜಗತ್ತಿನ ಲೆಕ್ಕಾಚಾರಗಳೇ ಬದಲಾಗುತ್ತಿವೆ. ಬಹುಶಃ ಮುಂದಿನ ಹಲವು ವರ್ಷಗಳ ಕಾಲ ಹೀಗೆಯೇ ಇರಬಹುದು. ಇಲ್ಲಿಯವರೆಗೆ ಎಟಿಎಂಗೆ ಹೋಗಿ, ಪಾಸ್‌ವರ್ಡ್‌ ಒತ್ತಿ, ಅಲ್ಲಿನ ಬಟನ್‌ಗಳನ್ನು ಪದೇ ಪದೇ ಮುಟ್ಟಿ ಹಣ ಪಡೆಯುತ್ತಿದ್ದ ನಾವು, ಇನ್ನು ಅಲ್ಲಿ ಮುಟ್ಟುವ ಕ್ರಿಯೆಯನ್ನು ಅತಿ ಕಡಿಮೆಗೊಳಿಸಬಹುದು. ಇದಕ್ಕಾಗಿ ಕೆಲವು ಬ್ಯಾಂಕ್‌ಗಳು ಹೊಸ ದಾರಿ ಕಂಡು ಹಿಡಿದಿವೆ. ಅದು ಹೇಗೆ?ಏನು? ಇಲ್ಲಿದೆ ವಿವರ.


ಇದುವರೆಗೆ ಎಟಿಎಂ ಕೇಂದ್ರಗಳಿಗೆ ಹೋದಾಗ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ, ಪಾಸ್‌ವರ್ಡ್‌ ಒತ್ತಿ, ಹಣ ಪಡೆಯುತ್ತಿದ್ದೆವು. ಇನ್ನು ಆ ಕಾರ್ಡ್‌ಗಳನ್ನು ಬಳಸುವ ಅಗತ್ಯವಿಲ್ಲ. ಬದಲಿಗೆ ಮೊಬೈಲ್‌ ಬ್ಯಾಂಕಿಂಗ್‌ ಆಯಪ್‌ ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅಲ್ಲದೇ ಈ ರೀತಿ ಹಣ ಪಡೆಯಲು 10,000 ರೂ.ನಿಂದ 20,000 ರೂ.ವರೆಗೆ ಮಿತಿಯಿದೆ. ಈ ಮಿತಿಯನ್ನು ಸಂಬಂಧಪಟ್ಟ ಬ್ಯಾಂಕ್‌ಗಳು ನಿಗದಿಪಡಿಸುತ್ತವೆ. ಸದ್ಯ ಎಸ್‌ಬಿಐ, ಐಸಿಐಸಿಐ, ಆಯಕ್ಸಿಸ್‌, ಬ್ಯಾಂಕ್‌ ಆಫ್ ಬರೋಡ ಬ್ಯಾಂಕ್‌ಗಳು ಮಾತ್ರ ಈ ಸೌಲಭ್ಯ ನೀಡಿವೆ.

 

ಎಸ್ಬಿಐ- ಯೊನೊ ಆಯಪ್

 

ಹಂತ 1: ಎಸ್‌ಬಿಐನ ಇಂಟರ್ನೆಟ್‌ ಬ್ಯಾಂಕ್‌ ಆಯಪ್‌ ಯೊನೊವನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಯೊನೊ ಕ್ಯಾಶ್‌ ಆಯ್ಕೆಯನ್ನು ಒತ್ತಿ.

 

ಹಂತ 2: ನಿಮ್ಮ ಖಾತೆ ಸಂಖ್ಯೆಯನ್ನು ಆಯ್ಕೆ ಮಾಡಿ, ಎಷ್ಟು ಹಣ ಬೇಕೆಂಬುದನ್ನು ನಮೂದಿಸಿ.

 

ಹಂತ 3 : ಯೊನೊ ವ್ಯವಹಾರ ಸಂಖ್ಯೆ ಮತ್ತು ಪಿನ್‌ ಇರುವ ಒಂದು ಸಂದೇಶ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬರುತ್ತದೆ.

 

ಹಂತ 4: ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ಹೋಗಿ, ಅಲ್ಲಿ ಯೊನೊ ಕ್ಯಾಶ್‌ ಆಯ್ಕೆ ಒತ್ತಿ.

 

ಹಂತ 5: ನಿಮ್ಮ ಮೊಬೈಲ್‌ಗೆ ಬಂದಿರುವ ಸಂದೇಶದಲ್ಲಿರುವ, ಯೊನೊ ನಗದು ವ್ಯವಹಾರ ಸಂಖ್ಯೆ ಒತ್ತಿ, ಹಾಗೆಯೇ ಎಷ್ಟು ಹಣ ಬೇಕೋ ಅದನ್ನು ನಮೂದಿಸಿ.

 

ಹಂತ 6: ಯೊನೊ ನಗದು ಪಿನ್‌ ಅನ್ನು ಅಲ್ಲಿ ನಮೂದಿಸಿ. ಅದನ್ನು ಸರಿಯೆಂದು ಖಚಿತಪಡಿಸಿ. ನಗದು ಪಡೆದುಕೊಳ್ಳಿ.

ಸೂಚನೆ: ಯೊನೊದಲ್ಲಿ ಹಣ ಪಡೆಯುವ ಮನವಿ ಮಾಡಿ, ವ್ಯವಹಾರ ಸಂಖ್ಯೆ ಪಡೆದ ಅರ್ಧಗಂಟೆಯೊಳಗೆ, ಪ್ರಕ್ರಿಯೆಯನ್ನು ಮುಗಿಸಬೇಕು.

ಐಸಿಐಸಿಐ ಬ್ಯಾಂಕ್

Find out more: