ಇಂದು ಸ್ಮಾರ್ಟ್ ಪೋನ್ ಗಳು ಪ್ರತಿಯೊಬ್ಬರೂ ಕೂಡ ಬಳಸುತ್ತಿರುವಂತಹ ಒಂದು ಸಂವಹನ ಮಾಧ್ಯಮಗಳು, ಈ ಸ್ಮಾರ್ಟ್ ಪೋನ್ ಗಳ ಮೂಲಕ ಆಗದಿರುವ ಕೆಲಸಗಲೇ ಇಲ್ಲವೇನೊ ಎಂಬಂತೆ ಇಂದಿನ ಜಗತ್ತು ನಿರ್ಮಾಣವಾಗಿದೆ. ಆದರೆ ಇಂತ ಸ್ಮಾರ್ಟ್ ಪೋನ್ ಗಳಲ್ಲಿ ಬಳಸುವಂತಹ ಆಫ್ ಗಳಿಂದ ಸಾಕಷ್ಟು ಹಣವನ್ನು ಕಳೆದುಕೊಳ್ಳಬಹುದು. ಅಷ್ಟಕ್ಕೂ ಆ ಆಪ್ ಯಾವುದು ಗೊತ್ತಾ..?
ಸ್ಮಾರ್ಟ್ ಫೋನ್ ಅಥವಾ ಟಾಬ್ಲೆಟ್ ಬಳಕೆದಾರರು ವೈರಸ್ ದಾಳಿ ಆಗದಿರಲೆಂದು ಪ್ಲೇಸ್ಟೋರ್ನಲ್ಲಿ ದೊರೆಯುವ ಮಾಲ್ವೇರ್, ರ್ಯಾನ್ಸೊಮ್ವೇರ್ ಮತ್ತು ಫ್ಲೀಸಿವೇರ್ ಎಂಬ ಸಾಫ್ಟ್ವೇರ್ಗಳನ್ನು ಇಟ್ಟುಕೊಂಡು ತಮ್ಮ ಫೋನ್ ಅನ್ನು ಮ್ಯಾನೇಜ್ ಮಾಡುತ್ತಿರುತ್ತಾರೆ. ಇದರ ನಡುವೆ ಸಂಶೋಧಕರು ನೀಡಿದ ಅನೇಕ ಎಚ್ಚರಿಕೆಗಳನ್ನೂ ಸಹ ಪಾಲಿಸುತ್ತಾ ಬರುತ್ತಿರುತ್ತಾರೆ. ಆಂಡ್ರಾಯ್ಡ್ ಹೆಚ್ಚು ಜನಪ್ರಿಯವಾಗಿರುವ ಕಾರಣ ಕೆಲ ಡೆವಲಪರ್ಸ್ಗಳು ದುರುದ್ದೇಶಪೂರಿತ ಆಯಪ್ ಮೂಲಕ ವಂಚಿಸಲು ಕಾಯುತ್ತಿರುತ್ತಾರೆ.
ಹೌದು, ಸಂಶೋಧಕರ ಇತ್ತೀಚಿನ ವರದಿಯ ಪ್ರಕಾರ ' ಸ್ನ್ಯಾಪ್ ಟ್ಯೂಬ್' (SnapTube) ಆಯಪ್ ಅಪಾಯಕಾರಿ ಎಂದು ತಿಳಿಸಿದೆ. ಯೂಟ್ಯೂಬ್ ಮತ್ತು ಫೇಸ್ಬುಕ್ ಮೂಲಕ ವಿಡಿಯೋ ಡೌನ್ಲೋಡ್ ಮಾಡಿಕೊಳ್ಳಲು ಈ ಆಯಪ್ ಬಳಸಲಾಗುತ್ತದೆ. ಈಗಾಗಲೇ 40 ಮಿಲಿಯನ್ಗೂ ಹೆಚ್ಚು ಡೌನ್ಲೋಡ್ ಸಹ ಆಗಿದೆ. ಸ್ನ್ಯಾಪ್ ಟ್ಯೂಬ್ ಒಂದು ಉಚಿತ ಆಯಪ್. ಹಾಗಂತ ಇದಕ್ಕೆ ಬೆಲೆತೆರಬೇಕಾಗಿಲ್ಲ ಎಂದು ಭಾವಿಸಿದ್ದರೆ, ನಿಮ್ಮ ಊಹೆ ತಪ್ಪು.
ಅಪ್ಸ್ಟ್ರೀಮ್ ಸಿಸ್ಟಮ್ (UpStreamSystem) ವರದಿಯ ಪ್ರಕಾರ ಸ್ನ್ಯಾಪ್ ಟ್ಯೂಬ್ ಆಯಪ್ ಡೌನ್ಲೋಡ್ ಮಾಡಿಕೊಂಡಿದ್ದರೆ, ನಮಗೆ ಗೊತ್ತಿಲ್ಲದಂತೆ ಲಾಗಿನ್ ಆಗಿ ಪ್ರೀಮಿಯಮ್ ಸೇವೆಯನ್ನು ಬಳಸಿಕೊಂಡು ನಮ್ಮ ಬ್ಯಾಂಕ್ ಖಾತಯಿಂದ ಹಣ ಎಗರಿಸುತ್ತಿದೆ. ಆಯಪ್ನಲ್ಲಿ ನೀಡಿರುವ ಮಾಹಿತಿಯ ಆಧಾರದ ಮೇಲೆ ಬ್ಯಾಂಕ್ಗೆ ಕನ್ನ ಹಾಕುತ್ತಾರೆ ಹುಷಾರ್!.
ಸಾಮಾನ್ಯವಾಗಿ ಕೆಲವೊಂದು ಆಯಪ್ಗಳಲ್ಲಿ ಮೊದಲು ಉಚಿತ ಸೇವೆ ನೀಡಿ ನಂತರ ತಿಂಗಳು ಹಾಗೂ ವರ್ಷಕ್ಕೆ ಇಷ್ಟು ಎಂದು ಚಾರ್ಜ್ ಮಾಡುತ್ತಾರೆ. ಸೇವೆ ಮುಂದವರಿಯಬೇಕಾದ್ದಲ್ಲಿ ಹಣ ಪಾವತಿ ಮಾಡಿ ಮುಂದುವರಿಸಬಹುದು. ಕೆಲವೊಬ್ಬರು ಉಚಿತ ಅವಧಿಯನ್ನು ಬಳಸಿಕೊಂಡು ಆಯಪ್ ಕುರಿತು ಆಸಕ್ತಿ ಇಲ್ಲದಿದ್ದರೆ ಅನ್ಇನ್ಸ್ಟಾಲ್ ಮಾಡಿಬಿಡುತ್ತಾರೆ. ಆದರೆ, ಲಾಗ್ ಆಫ್ ಮಾಡಿದ್ದೇವೋ ಎಂಬುದನ್ನು ಗಮನಿಸುವುದೇ ಇಲ್ಲ. ಇದೇ ರೀತಿ ಸ್ನ್ಯಾಪ್ ಟ್ಯೂಬ್ ಆಯಪ್ ಡೌನ್ಲೋಡ್ ಮಾಡಿ, ಟ್ರಯಲ್ ವರ್ಷನ್ ನೋಡಿ ಲಾಗ್ಆಫ್ ಮಾಡದೇ ಆಯಪ್ ತೆಗೆದಿದ್ದರೆ, ಆಯಪ್ ಡೆವಲಪರ್ಸ್ ಅವರಾಗಿಯೇ ಲಾಗಿನ್ ಆಗಿ ನಿಮ್ಮ ಖಾತೆಯಲ್ಲಿ ಹಣವನ್ನು ಎಗರಿಸುತ್ತಾರೆ ಎಂಬ ಆತಂಕಕಾರಿ ಮಾಹಿತಿ ತಿಳಿದುಬಂದಿದೆ.
ಇದೇ ರೀತಿ ವಂಚನಾತ್ಮಕ ಚಟುವಟಿಕೆಯಿಂದಲೇ ಸ್ನ್ಯಾಪ್ ಟ್ಯೂಬ್ ಅಂದಾಜು 100 ಮಿಲಿಯನ್ ಡಾಲರ್ ಹಣವನ್ನು ಈಗಾಗಲೇ ಸಂಪಾದಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾಕಷ್ಟು ದೂರುಗಳ ಬಂದ ಹಿನ್ನೆಲೆಯಲ್ಲಿ ಪ್ಲೇ ಸ್ಟೋರ್ನಿಂದ ಆಯಪ್ ಅನ್ನು ತೆಗೆದುಹಾಕಲಾಗಿದೆ. ಆದರೆ, ಈಗಾಗಲೇ ಡೌನ್ಲೋಡ್ ಮಾಡಿಕೊಂಡು ಲಾಗ್ ಆಫ್ ಮಾಡದೇ ಅನ್ಇನ್ಸ್ಟಾಲ್ ಮಾಡಿದ್ದರೆ, ಅಂತವರ ಖಾತೆಗೆ ಕನ್ನ ಗ್ಯಾರೆಂಟಿ ಎನ್ನಲಾಗುತ್ತಿದೆ. ಹೀಗಾಗಿ ನೀವೇನಾದರೂ ಒಮ್ಮೆ ಬಳಸಿದ್ದರೆ, ಮತ್ತೊಮ್ಮೆ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.