ಟಿಕ್ ಟ್ಯಾಕ್ ಭಾರದಲ್ಲಿ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಹಾಗೂ ಅತೀ ಬೇಡಿಕೆಯನ್ನು ಪಡೆದುಕೊಂಡಿದ್ದ ಚೀನೀ. ಲಕ್ಷಾಂತರ ಜನ ಈ ಟಿಕ್ ಟ್ಯಾಕ್ ಅನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡಿದ್ದರು. ಈ ಸಮಯದಲ್ಲಿ ಟಿಕ್ ಟ್ಯಾಕ್ ನನ್ನು ಹೋಲುವಂತಹ ಸಾಕಷ್ಟು ಆಫ್ ಗಳು ಭಾರತದಲ್ಲಿ ಹುಟ್ಟಿಕೊಂಡರೂ ಕೂಡ ಯಾರೂ ಕೂಡ ಇದರ ಬಗ್ಗೆ ಗಮನವನ್ನು ಹರಿಸಿರಲಿಲ್ಲ. ಆದರೆ ಭಾರತದಲ್ಲಿ ಚೀನಾ 59 ಆಫ್ ಗಳನ್ನು ನಿಷೇಧ ಮಾಡಿದ ಹಿನ್ನಲೆ ಭಾರತದ ಈ ಆಫ್ ಗಳಿಗೆ ಬಹಳ ಬೇಡಿಕೆ ಉಂಟಾಗಿದೆ ಅದರಲ್ಲಂತೂ ಈ ಆಫ್ ಮಿಲಿಯನ್ ಗಟ್ಟಲೆ ಡೌನ್ ಲೋಡ್ ಅನ್ನು ಮಾಡಲಾಗಿದೆ. ಅಷ್ಟಕ್ಕೂ ಮಿಲಿಯನ್ ಗಟ್ಟಕೆ ಡೌನ್ ಲೋಡ್ ಆಗಿರುವ ಆ ಆಪ್ ಯಾವುದು ಗೊತ್ತಾ..?
ಹೌದು ಭಾರತದಲ್ಲಿ 59 ಚೀನಿ ಆಯಪ್ ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ನಂತರ ದೇಸಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಶೇರ್ ಚಾಟ್ ಬರೋಬ್ಬರಿ 15 ಮಿಲಿಯನ್ ಡೌನ್ ಲೋಡ್ ಕಂಡಿದೆ. ಮಾತ್ರವಲ್ಲದೆ ಸರಾಸರಿ ಗಂಟೆಯೊಂದಕ್ಕೆ 5 ಲಕ್ಷ ಇನ್ ಸ್ಟಾಲ್ ಕಾಣುತ್ತಿದೆ ಎಂದು ಕಂಪೆನಿ ತಿಳಿಸಿದೆ.
ಚೀನಾದ ಆಯಪ್ ಗಳನ್ನು ನಿಷೇಧಿಸುವ ಕ್ರಮವನ್ನು ಬೆಂಬಲಿಸುವ 1 ಲಕ್ಷಕ್ಕೂ ಅಧಿಕ ಪೋಸ್ಟ್ ಗಳು ಶೇರ್ ಚಾಟ್ ನಲ್ಲಿ ಪೋಸ್ಟ್ ಆಗಿವೆ. ಮಾತ್ರವಲ್ಲದೆ 1 ಮಿಲಿಯನ್ ಬಳಕೆದಾರರು ಪೋಸ್ಟ್‌ಗಳನ್ನು ಇಷ್ಟಪಟ್ಟರೆ, ಅರ್ಧ ಮಿಲಿಯನ್ ಜನರು ಇದನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡಿದ್ದಾರೆ.
ಸದ್ಯ ಶೇರ್ ಚಾಟ್ ನಲ್ಲಿ 60 ಮಿಲಿಯನ್ ಸಕ್ರೀಯ ಬಳಕೆದಾರರಿದ್ದು, ಭಾರತದ 15 ಭಾಷೆಗಳಲ್ಲಿ ಈ ಆಯಪ್ ಲಭ್ಯವಿದೆ. ಇಲ್ಲಿನ 1 ಬಿಲಿಯನ್ ಪೋಸ್ಟ್ ಗಳು ವಾಟ್ಸಾಪ್ ಗೆ ಶೇರ್ ಆಗುತ್ತವೆ. ಪ್ರತಿ ಬಳಕೆದಾರರು 25 ನಿಮಿಷಗಳ ಕಾಲ ತಮ್ಮನ್ನು ಈ ಆಯಪ್ ನಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಹೊಸ ಅಂಕಿ ಅಂಶಗಳು ತಿಳಿಸಿವೆ. ಕಂಪೆನಿ ಪ್ರಕಾರ ಸದ್ಯ 150+ ಮಿಲಿಯನ್ ನೋಂದಾಯಿತ ಬಳಕೆದಾರರಿದ್ದಾರೆ.
ಶೇರ್ ಚಾಟ್ ಮಾತ್ರವಲ್ಲದೆ ಟಿಕ್ ಟಾಕ್ ಪರ್ಯಾಯ ಎಂದೇ ಗುರುತಿಸಿಕೊಂಡಿದ್ದ ಭಾರತದ ಚಿಂಗಾರಿ ಆಯಪ್ ಗಂಟೆಯೊಂದಕ್ಕೆ 1,00,000 ಡೌನ್ ಲೋಡ್ ಕಂಡಿವೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಬೆಂಗಳೂರು ಮೂಲದ ಡೆವಲಪರ್ ಗಳು ಅಭಿವೃದ್ಧಿಪಡಿಸಿದ ಸಂಪೂರ್ಣ ಸ್ವದೇಶಿ ಆಯಪ್ ಚಿಂಗಾರಿಗೆ ಇದೀಗ ಸಿಕ್ಕಾಪಟ್ಟೆ ಬೇಡಿಕೆ ಕುದುರಿದೆ. ಇಷ್ಟು ದಿನ ತಾಳ್ಮೆಯಿಂದ ಕಾದಿದ್ದಕ್ಕೆ ಧನ್ಯವಾದ ಭಾರತ. ಈಗ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ನಮ್ಮ ವೇಗ ನಮಗೆ ಆಶ್ಚರ್ಯ ಮೂಡಿಸಿದೆ ಎಂದು ಈ ಆಯಪ್ ನ ಸಹ ಸಂಸ್ಥಾಪಕ ಸುಮಿತ್ ಘೋಷ್ ತಿಳಿಸಿದ್ದಾರೆ.
ಇದೀಗ ಗೂಗಲ್ ಪ್ಲೇ ಸ್ಟೋರ್ ಮತ್ತು ಆಯಪಲ್ ಸ್ಟೋರ್ ನಿಂದ ಹಲವು ಚೈನಾ ಆಯಪ್ ಗಳು ಕಣ್ಮರೆಯಾಗಿವೆ. ಭಾರತದ ಬಳಕೆದಾರರು ಪರ್ಯಾಯ ಅಪ್ಲಿಕೇಶನ್ ಗಳ ಮೊರೆ ಹೋಗಿದ್ದಾರೆ.