ಫೇಸ್ ಬುಕ್ ಇಡೀ ಜಗತ್ತನ್ನು ವ್ಯಾಪಿಸಿರುವ ಒಂದು ಸಾಮಾಜಿಕ ಮಾಧ್ಯಮವಾಗಿದೆ. ಇಡೀ ಜಗತ್ತನ್ನು ಹತ್ತಿರಕ್ಕೆ ತಂತ ಕೀರ್ತಿ ಫೇಸ್ ಬುಕ್ ಗೆ ಸಲ್ಲುತ್ತದೆ. ಅಂತಹ ಫೇಸ್ ಬುಕ್ ತನ್ನ ವರ್ಷನ್ ಆದ ಫೇಸ್ ಬುಕ್ ಲೈಟ್ ಅನ್ನು ಕೂಡ ಪ್ರಪಂಚಕ್ಕೆ ಪರಿಚಯಿಸಿತ್ತು. ಈ ಲೈಟ್ ಆಪ್ ಕಡಿಮೆ ಇಂಟರ್ನೆಟ್ ನಿಂದಲೂ ಚಲಾಯಿಸಬಹುದಾಗಿದ್ದರಿಂದ ಸಾಕಷ್ಟು ಜನರು ಬಳಸುತ್ತಿದ್ದರು. ಆದರೆ ಈ ಆಫ್ ಅನ್ನು ಫೇಸ್ ಬುಕ್ ಆ್ಯಪಲ್ ಸ್ಟೋರ್ ಇಂದ ತೆಗೆದುಹಾಕಲಾಗಿದೆ.
ಹೌದು ಫೇಸ್ ಬುಕ್ ತನ್ನ ಪ್ರತಿಷ್ಠಿತ ಲೈಟ್ ವರ್ಷನ್ ಆ್ಯಪ್ ಅನ್ನು ಆ್ಯಪಲ್ ಸ್ಟೋರ್ ನಿಂದ ತೆಗೆದು ಹಾಕಿದೆ. ತನ್ನದೆ ಆದ ಕೆಲವೊಂದು ಮಿತಿಗಳಿಂದ ಸಾಮಾಜಿಕ ಜಾಲತಾಣಗಳ ದೈತ್ಯ ಈ ನಿರ್ಧಾರ ಕೈಗೊಂಡಿದೆ ಎಂದು ಮ್ಯಾಕ್ ಮ್ಯಾಗಜೀನ್ ವರದಿ ತಿಳಿಸಿದೆ.
ಫೇಸ್ ಬುಕ್ ಲೈಟ್ ವರ್ಷನ್ ಪ್ರಮುಖವಾಗಿ ಕಡಿಮೆ ಸ್ಟೊರೇಜ್ ಸೌಲಭ್ಯ ಹೊಂದಿರುವ ಮತ್ತು ಕಡಿಮೆ ಇಂಟರ್ನೆಟ್ ಸಿಗುವ ಬಳಕೆದಾರರಿಗೆ ನೆರವಾಗುವಂತೆ ರೂಪಿಸಲಾಗಿತ್ತು. ಆದರೇ ಇದರಲ್ಲಿ ಅತೀ ಹೆಚ್ಚು ಎಂಬಿ ಇರುವ ವಿಡಿಯೋಗಳು ಹಾಗೂ ಹೈ ರೆಸಲ್ಯೂಷನ್ ಇಮೇಜ್ ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಮಾತ್ರವಲ್ಲದೆ ಫೇಸ್ ಬುಕ್ ಲೈಟ್ ವರ್ಷನ್ ಅನ್ನು ಆ್ಯಂಡ್ರಾಯ್ಡ್ ಮತ್ತು ಐಪೋನ್ ನ ಹಳೆಯ ಸ್ಮಾರ್ಟ್ ಫೋನ್ ಗಳಿಗಾಗಿ ವಿನ್ಯಾಸಗೊಳಿಸಲಾಗಿತ್ತು.
ಫೇಸ್ ಬುಕ್ ಲೈಟ್ ಅತೀ ವೇಗ ಮತ್ತು ಸುಲಭದ ಬಳಕೆಗೆ ನೆರವಾಗಿತ್ತು. ಇದರಲ್ಲಿ ಡೇಟಾ ಗಳು ಕೂಡ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದರಿಂದ ಪೋನ್ ಸ್ಟೋರೇಜ್ ಗೆ ಸಮಸ್ಯೆಯಾಗುತ್ತಿರಲಿಲ್ಲ. ಮಾತ್ರವಲ್ಲದೆ 2ಜಿ ನೆಟ್ ವರ್ಕ್ ಗಳಲ್ಲೂ ಇದರ ಬಳಕೆ ಸುಲಭ ಸಾಧ್ಯವಾಗಿತ್ತು.
ಫೇಸ್ ಬುಕ್ ಲೈಟ್ ವರ್ಷನ್ ಮೊದಲು ಬ್ರೆಜಿಲ್ ಬಳಕೆದಾರರಿಗೆ ಅಲಭ್ಯವಾಗಿದೆ. ಈ ಕುರಿತು ಅಧಿಕೃತ ಸಂದೇಶವೊಂದನ್ನು ಕೂಡ ಫೇಸ್ ಬುಕ್ ತನ್ನ ಬಳಕೆದಾರರಿಗೆ ಕಳುಹಿಸಿದೆ. ಇಂದಿನಿಂದ ಲೈಟ್ ವರ್ಷನ್ ಐಓಎಸ್ ಗೆ ಲಭ್ಯವಾಗುವುದಿಲ್ಲ. ಬದಲಾಗಿ ನೀವು ಫೇಸ್ ಬುಕ್ ಅಧಿಕೃತ ಆ್ಯಪ್ ಬಳಸಬಹುದಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹಾಗಾಗಿ ಆ್ಯಪಲ್ ಸ್ಟೋರ್ ನಿಂದಲೂ ಫೇಸ್ ಬುಕ್ ಲೈಟ್ ವರ್ಷನ್ ರಿಮೂವ್ ಆಗಿದೆ. ಆದರೇ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. 2015ರಲ್ಲಿ ಫೇಸ್ ಬುಕ್ ಲೈಟ್ ವರ್ಷನ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಈ ಲೈಟ್ ಆ್ಯಪ್ ಗಾತ್ರ ಕೇವಲ 8.7 ಎಂಬಿ ಇದ್ದು, ಫೇಸ್ ಬುಕ್ ಅಧಿಕೃತ ಆ್ಯಪ್ ನ ಗಾತ್ರ ಬೋಬ್ಬರಿ 244 ಎಂಬಿ ಯಷ್ಟಿದೆ.