ದೇಶದಲ್ಲಿ ಆನ್ ಲೈನ್ ನಲ್ಲಿ ಹಣ ವರ್ಗಾವಣೆಗೆ ಹೆಚ್ಚು ಒತ್ತನ್ನು ನೀಡುತ್ತಿದ್ದಂತೆ ಸಾಕಷ್ಟು ಕಂಪನಿಗಳು ಸಾಕಷ್ಟು ಆಫ್ ಗಳನ್ನು ಬಿಡುಗಡೆ ಮಾಡಲಾಯಿತು. ಈ ಮೂಲಕ ಕ್ರಿಡಿಟ್ ಕಾರ್ಡ್ ಗಳನ್ನು ಬಳಸದೇ ಕೇವಲ ಮೊಬೈಲ್ ಆಫ್ ಗಳ ಮೂಲಕ ಹಣ ವರ್ಗಾವಣೆಯನ್ನು ಮಾಡಬಹುದಾಗಿತ್ತು. ಆದರೆ ತಂತ್ರಜ್ಞಾನದಲ್ಲಾದ  ಸಂಶೋಧನೆಯಿಂದಾಗಿ  ಕೇವಲ ಅಂಗೈ ಸ್ಕ್ಯಾನಿಂಗ್ ನಲ್ಲಿ  ಹಣವನ್ನು ವರ್ಗಾಹಿಸಬಹುದಾಗಿದೆ. ಅಷ್ಟಕ್ಕೂ ಅದು ಹೇಗೆ ಅಂತೀರ ಇಲ್ಲಿದೆ ನೋಡಿ..?






ಅಕ್ಟೋಬರ್ 01: ಕೇಂದ್ರ ಸರ್ಕಾರ ಡಿಜಿಟಲ್ ಪಾವತಿಗೆ ಹೆಚ್ಚು ಉತ್ತೇಜನ ನೀಡಿರುವುದು ನಿಮಗೆಲ್ಲಾ ತಿಳಿದಿದೆ. ಅದರಲ್ಲೂ ಕೋವಿಡ್-19 ಸಾಂಕ್ರಾಮಿಕದ ಬಳಿಕ ಜನತೆ ಹೆಚ್ಚಾಗಿ ಸಂಪರ್ಕವಿಲ್ಲದ ಡಿಜಿಟಲ್ ಪಾವತಿ ಸೂಕ್ತ ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಅನೇಕರು ಅನೇಕ ಯುಪಿಐ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುವ ಮೂಲಕ ಬಿಲ್, ಹಣ ಪಾವತಿ ಮಾಡುತ್ತಿದ್ದಾರೆ.







ಆದರೆ ಇದೀಗ ಅಮೆಜಾನ್ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅಂಗಡಿಯಲ್ಲಿ ಹಣ ಪಾವತಿಸಲು, ಯಾವುದೇ ಶುಲ್ಕಸಹಿತ ಸೇವೆಗಳನ್ನು ಪಡೆಯಲು, ದೈನಂದಿನ ಚಟುವಟಿಕೆಗಳನ್ನು ಮಾಡಲು ಜನರು ತಮ್ಮ ಅಂಗೈಯನ್ನು ಬಳಸದೇ ಸಂಪರ್ಕವಿಲ್ಲದ ಮಾರ್ಗವನ್ನು ಅಮೆಜಾನ್ ಮಂಗಳವಾರ ಪರಿಚಯಿಸಿದೆ. 'ಅಮೆಜಾನ್ ಒನ್' ಎಂದು ಕರೆಯಲ್ಪಡುವ ಈ ಸೇವೆಯು ವ್ಯಕ್ತಿಯ ಅನನ್ಯ ಅಂಗೈ ಸಹಿಯನ್ನು ರಚಿಸಲು ಕಸ್ಟಮ್-ನಿರ್ಮಿತ ಕ್ರಮಾವಳಿಗಳು ಮತ್ತು ಯಂತ್ರಾಂಶವನ್ನು ಬಳಸುತ್ತದೆ. ಅಂದರೆ ಈ ತಂತ್ರಜ್ಞಾನವು ನಿಮ್ಮ ಅಂಗೈ ಅನ್ನು ಒಮ್ಮೆ ಸ್ಕ್ಯಾನ್ ಮಾಡಿ ಸೇವ್ ಮಾಡಿಕೊಳ್ಳುತ್ತದೆ. ಆ ಬಳಿಕ ನೀವು ಅಂಗೈ ತೋರಿಸಿ ಪಾವತಿ ಅನುಮತಿಸುತ್ತದೆ.







"ನಾವು ಆಯ್ದ ಅಮೆಜಾನ್ ಗೋ ಅಂಗಡಿಗಳಲ್ಲಿ ಪ್ರಾರಂಭಿಸುತ್ತೇವೆ, ಅಲ್ಲಿ ಗ್ರಾಹಕರು ಅಂಗಡಿಯಲ್ಲಿ ಶಾಪಿಂಗ್ ಮಾಡಲು ಬಳಸಲು ಅನುಕೂಲಕರ ಆಯ್ಕೆಯಾಗಿ ಅಮೆಜಾನ್ ಒನ್ ಅನ್ನು ಅಂಗಡಿಯ ಪ್ರವೇಶ ದ್ವಾರಕ್ಕೆ ಸೇರಿಸಲಾಗುವುದು" ಎಂದು ಅಮೆಜಾನ್‌ನ ಚಿಲ್ಲರೆ ಮತ್ತು ತಂತ್ರಜ್ಞಾನದ ಉಪಾಧ್ಯಕ್ಷ ದಿಲೀಪ್ ಕುಮಾರ್, ಬ್ಲಾಗ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.








ಹೆಚ್ಚಿನ ಸುರಕ್ಷತೆ ಮತ್ತು ಅಂತರ ಕಾಯ್ದುಕೊಳ್ಳಲು, ಅಮೆಜಾನ್ ಒನ್ ಸಾಂಪ್ರದಾಯಿಕ ಪಾಯಿಂಟ್ ಆಫ್ ಸೇಲ್ ಸಿಸ್ಟಮ್‌ನ ಪಕ್ಕದಲ್ಲಿರುವ ಚೆಕ್‌ಔಟ್ ಕೌಂಟರ್‌ನಲ್ಲಿ ಈ ಹೊಸ ಸಾಧನದೊಂದಿಗೆ ಪರ್ಯಾಯ ಪಾವತಿ ವಿಧಾನ ಪ್ರಾರಂಭಿಸಲಿದೆ ಎಂದು ಅವರು ಹೇಳಿದರು.







ಇದು ಮಂಗಳವಾರದಿಂದ, ಅಮೆರಿಕದ ಸಿಯಾಟಲ್‌ನಲ್ಲಿರುವ ಎರಡು ಅಮೆಜಾನ್ ಗೋ ಅಂಗಡಿಗಳಲ್ಲಿ ಆರಂಭಿಕವಾಗಿ ಪ್ರವೇಶ ಆಯ್ಕೆಯಾಗಿ ಅಮೆಜಾನ್ ಒನ್ ಅನ್ನು ಪ್ರಾರಂಭಿಸಿದೆ. ಹಂತ ಹಂತವಾಗಿ ಬೇರೆ ದೇಶ ಮತ್ತು ನಗರಗಳಿಗೆ ಇದನ್ನು ವಿಸ್ತರಿಸಲಾಗುವುದು. ಮುಂದಿನ ತಿಂಗಳುಗಳಲ್ಲಿ ಹೆಚ್ಚುವರಿ ಅಮೆಜಾನ್ ಮಳಿಗೆಗಳಲ್ಲಿ ಅಮೆಜಾನ್ ಒನ್ ಅನ್ನು ಆಯ್ಕೆಯಾಗಿ ಸೇರಿಸುವ ಸಾಧ್ಯತೆಯಿದೆ.

Find out more: