ಕರೋನಾ ವೈರಸ್ ತನ್ನ ವ್ಯಾಪ್ತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಕೊಳ್ಳುತ್ತಿರುವುದರಿಂದ ಈ ಕೊರೋನಾ ಸೋಂಕಿತರೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಸಲಕರಣೆಗಳು ಹಾಗೂ ಔಷಧಿಗಳ ಕೊgತೆಗಳೂ ಕೂಡ ಹೆಚ್ಚಾದ ಕಾರಣ ದಕ್ಷಿಣ ಕನ್ನಡ ಜಿಲ್ಲಾಡಳಿತ ನೆರವಿಗಾಗಿ ಅಂಗಲಾಚಿತ್ತು ಇದಕ್ಕೆ ಸ್ವಂದಿಸಿದ ಕರ್ನಾಟಕದ ಖ್ಯಾತ ಉದ್ಯಮಿಯೊಬ್ಬರು ವೈದ್ಯಕೀಯ ಉಪಕರಣಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ಅಷ್ಟಕ್ಕೂ ಆ ಉದ್ಯಮಿ ಯಾರು ಗೊತ್ತಾ?

 

ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಅಗತ್ಯ ವೈದ್ಯಕೀಯ ಉಪಕರಣ ಸೇರಿದಂತೆ, ಪೊಲೀಸರಿಗೆ ರಕ್ಷಣಾ ಸಲಕರಣಗಳು ಅಗತ್ಯವಾಗಿದ್ದವು. ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ನೆರವಿಗಾಗಿ ಮನವಿ ಮಾಡಲಾಗಿತ್ತು. ಇದಕ್ಕೆ ಪ್ರತಿ ಸ್ಪಂದಿಸಿರುವ ಇನ್ಪೋಸಿಸ್ ನ ಸುಧಾಮೂರ್ತಿ, ಸುಮಾರು ೨೮ ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಕಳುಹಿಸಿ ಕೊಟ್ಟಿದ್ದಾರೆ. ಹೀಗಾಗಿ ಸುಧಾಮೂರ್ತಿ ಅವರು ಮಾಡಿದ ಈ ಕಾರ್ಯ, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಕೊರೊನಾ ವೈರಸ್ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಗಡಿರುವ ವೈದ್ಯರಿಗೆ, ಪೊಲೀಸರಿಗೆ ಸೇಫ್ಟಿ ಕಿಟ್ ಅವಶ್ಯಕೆ ಇತ್ತು. ಈ ವೈದ್ಯಕೀಯ ಉಪಕರಣಗಳನ್ನು ನೀಡುವಂತೆ ಇನ್ಫೋಸಿಸ್ ಪೌಂಡೇಶನ್ ಸುಧಾ ಮೂರ್ತಿಯವರಿಗೆ ಮನವಿ ಮಾಡಿದ್ದರು.

 

ದಕ್ಷಿಣಕನ್ನಡ ಜಿಲ್ಲಾಢಳಿತ ಮನವಿಗೆ ಕೂಡಲೇ ಪ್ರತಿ ಸ್ಪಂದಿಸಿದ ಇನ್ಫೋಸಿಸ್ ನ ಸುಧಾ ಮೂರ್ತಿ, ೨೮ ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ರವಾನಿಸಿದ್ದಾರೆ. ಹೀಗಾಗಿ ಸುಧಾಮೂರ್ತಿ ಸೇವೆಗೆ ಅಭಿನಂದನೆ ದಕ್ಷಿಣ ಕನ್ನಡ ಕಮೀಷನರ್ ಡಾ.ಹರ್ಷ ಅಭಿನಂದನೆ ತಿಳಿಸಿದ್ದಾರೆ. ಈ ಮೂಲಕ ಸುಧಾಮೂರ್ತಿಯವರ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತ ಪಡಿಸಿದ್ದಾರೆ.

 

Find out more: